ಮೋಸಗಾರ್ತಿಯ ಬೆನ್ನತಿ..ಪತ್ತೇದಾರಿ ಕಥೆ [2]

ಮೋಸಗಾರ್ತಿಯ ಬೆನ್ನತಿ..ಪತ್ತೇದಾರಿ ಕಥೆ [2]

ಜೂರಿಸ್ ಜಸ್ಸಿಯ ಮಾತುಗಳನ್ನು ತದೇಕ ಚಿತ್ತದಿಂದ ಆಲಿಸಿದಳು.ಅಲನ ಮಾತುಗಳನ್ನು ಪೂರ್ಣ ಕೇಳಿ ಅವಳ ಮನ ಕುಣಿಯಿತು.ಜಸ್ಸಿಯನ್ನು ಅಪ್ಪಿ ಮುದ್ದಾಡಿದಳು.ಇಬ್ಬರು ಈಗ ಮಂದಿನ ಕಾರ್ಯಕ್ಕೆ ಅಣಿಯಾದರು..ಅದರಲ್ಲಿ ಮೊದಲನೆ ಕಾರ್ಯ ಜೂರಿಸ್ ಳದೇ ಆಗಿತ್ತು.ಅದರ ಪ್ರಕಾರ ಲೇವ್ ನೊಟ್ಟಿಗೆ ಜೂರಿಸ್ ವಿವಾಹವಾಗಲು ಒಪ್ಪುವುದು.
ಲೇವ್ಸನ್ ಅಂದು ತನ್ನ ಐಷಾರಾಮಿ ಬೆನ್ಜ್ ಕಾರಿನಲ್ಲಿ  ಡ್ರೈವರ್ ನೊಟ್ಟಿಗೆ ಜೂರಿಸ್ ಗೆ ಗಿಫ್ಟ್ ಮಾಡಿದ್ದ ಬಂಗಲೆಗೆ ಬಂದಿಳಿದ....ಜೂರಿಸ್ ಲೇವ್ಸನ್ ಬರುವುದನ್ನು ಊಯಿಸಿದ್ದಳು.ಲೇವ್ಸನ್ ಬಂದೊಡನೆ ಬಾಗಿಲಿನಲ್ಲೇ ಆತನ ಸ್ವಾಗತ ಮಾಡಿ ಕರೆದೊಯ್ದಳು.ಆಕೆ ಚೆನ್ನಾಗಿ ಅಲಂಕಾರಗೋಂಡಿದ್ದಳು.ಲೇವ್ಸನ್ ಜೂರಿಸ್ ಳನ್ನು ವರ್ಣನೆ ಮಾಡಿದ.ಜೂರಿಸ್ ಗೆ ತನ್ನ ವಿವಾಹದ ಬಗ್ಗೆ ಯಾವ ನಿರ್ಧಾರ ಕೈಗೊಂಡಿರುವುದಾಗಿ ಕೇಳಿದ.ಆಕೆ ಒಪ್ಪಿರುವುದಾಗಿ ತಿಳಿಸಿದಳು.ಲೇವ್ಸನ್ ಆಕೆಯನ್ನು ಎತ್ತಿಕೊಂಡು ಮುತ್ತಿಟ್ಟು ಕುಣಿದಾಡಿದ.ತನ್ನ ತಂದೆಗೆ ವಿಷಯ ತಿಳಿಸಿ ಮುಂದಿನ ಭಾನುವಾರ ಸೆಂಟ್ ಫಿಲೋಮಿನ ಚರ್ಚ ಅಲ್ಲಿ ಮದುವೆ ಮಾಡಿಕೊಳ್ಳೋಣ ಎಂದು ತಿಳಿಸಿ ಹೊರಟು ಹೋದ...ಜೂರಿಸ್ ಜಸ್ಸಿ ತಮ್ಮ ಪ್ಲಾನ್ ನ ಮೊದಲ ಹೆಜ್ಜೆ ಇರಿಸಿದ್ದರು.ಲೇವ್ಸನ್ ಹೋದ ಕೂಡಲೇ ಜಸ್ಸಿ ಬಂದು ನೀನು ಹಣ ಸಿಗುವುದಾದರೆ ಯಾವ ಗಂಡನ್ನು ಬೇಕಾದರೆ ಒಪ್ಪಿಕೊಳ್ಳುತ್ತೀಯ ಅಲ್ಲವೆ ಎಂದು ಕಿಚಾಯಿಸಿದ..
ಅಂದು ಚರ್ಚಿನಲ್ಲಿ ಲೇವ್ಸನ್ ಲೂಯಿಸ್ ಲೇವ್ಸನ್ ನ ಮಲ ತಾಯಿ ಸೀಮಿಯಾ ಎಲ್ಲರು ಹಾಜರಾಗಿದ್ದರು.
ಅಂದು ಮದುವೆಗೆ ಜಸ್ಸಿಯೊಂದಿಗೆ ಆಗಮಿಸಿದ ಜೂರಿಸ್ ಆತನನ್ನು ಮಿತ್ರ ಹಿತೈಷಿ ಎಂದು ಲೇವ್ಸನ್ ಗೆ ಪರಿಚಯಿಸಿದಳು.
ಚರ್ಚ ಅಲ್ಲಿ ವಿವಾಹ ಫಾದರ್ ಸಮ್ಮಖದಲ್ಲಿ ನೆರೆವೇರಿತು.ಇಬ್ಬರು ಮದುವೆ ಬಳಿಕ ಲೇವ್ಸನ್ ನ ಮನೆಗೆ ಹೋದರು.
ಮದುವೆಯ ನಂತರ ಆಗಬೇಕಾದ ಕಾರ್ಯಗಳೆಲ್ಲ ಸಾಂಗಪೋಂಗವಾಗಿ ನೆರೆವೇರಿತು.ಒಂದು ದಿನ ಸಂಜೆ ಲೇವ್ ಆಫೀಸ್ ಮುಗಿಸಿ ಮನೆಗೆ ಬಂದ.ಆಗ ಜೂರಿ ತನ್ನ ಮಿತ್ರನ ವಿಷಯ ಪ್ರಸ್ತಾಪಿಸಿ ಆತನ ಕೆಲಸ ಕೈತಪ್ಪಿ ಹೋಗಿದೆ ಆತನಿಗೆ ನಿನ್ನ ಕಂಪನಿಯಲ್ಲಿ ಒಂದು ಕೆಲಸ ಕೊಡುವಂತೆ ಕೇಳಿಕೊಂಡಳು.
ಅದಕ್ಕೇನಂತೆ ಅಗತ್ಯವಾಗಿ ನನ್ನ ಪಿ ಎ ಜಾಬ್ ನೀಡುವುದಾಗಿ ತಿಳಿಸಿದ ಅಂತೇಯೇ ಜಸ್ಸಿ ಲೇವ್ ನೂತನ ಪಿಎ ಆಗಿ ಕೆಲಸ ಮಾಡತೊಡಗಿದ ಮದುವೆಯಾಗಿ 6 ತಿಂಗಳಾಗಿತ್ತು ಇತ್ತ ಲೂಯಿಸ್ ಜೂರಿಯಲ್ಲಿ ಒಂದು ಬದಲಾವಣೆ ಗಮನಿಸಿದ್ದ ಅದೇನೆಂದರೆ ಜೂರಿ ಹಾಗು ಜಸ್ಸಿ ಗುಟ್ಟಾಗಿ ಭೇಟಿಯಾಗುವ ವಿಚಾರ ಈ ಮುದುಕಪ್ಪನಿಗೆ ಗೊತ್ತಾಗಿ ಹೋಗಿತ್ತು ಆತನ ಮನ ಅಕ್ರಮ ಸಕ್ರಮ ಚಿಂತಿಸಿತು.ಇತ್ತ ಜಸ್ಸಿ ಲೇವ್ ನ ಆಸ್ತಿಯ ಸಂಪೂರ್ಣ ವಿವರ ಕಲೆ ಹಾಕತೊಡಗಿದ.ಲೇವ್ ಜೂರಿ ಅನೋನ್ಯ ಸುಖ ದಾಂಪತ್ಯ ಸಾಗಿಸುತಿದ್ದರು ಆದರೆ ಜಸ್ಸಿ ಜೂರಿಯ  ಕಪಟ ನಾಟಕ ಲೇವ್ ಗೆ ಇನ್ನು ತಿಳಿದಿರಲಿಲ್ಲ.ಜಸ್ಸಿಗೆ ಒಂದು ಆಘಾತ ಕಾದಿತ್ತು.ಅತನ ಸಂಶೋಧನೆ ಪ್ರಕಾರ ಲೇವ್ ನ ಹೆಸರಿನಲ್ಲಿ ಚಿಕ್ಕಾಸು ಇರಲಿಲ್ಲ.ಅದರರ್ಥ ಲೂಯಿಸ್ ಹೆಸರಿಂದ ಆಸ್ತಿ ವರ್ಗಾವಣೆ ಆಗಿರಲಿಲ್ಲ.ಲೇವ್ ನ ವ್ಯವಾಹರದ ಪ್ರಮುಖ ವಿಷಯಗಳಿಗು ಲೂಯಿಸ್ ಸಹಿ ಮಾಡಬೇಕಾಗಿತ್ತು.ಈಗ ಲೂಯಿಸ್ ನ ಆಸ್ತಿ  ಲೇವ್ ಗೆ ಸಿಗಬೇಕಾದರೆ ಒಂದು ಲೂಯಿಸ್ ಸ್ವ ಇಚ್ಛೆಯಿಂದ ಬರೆದುಕೊಡಬೇಕಾಗಿತ್ತು ಅಥವಾ ಲೂಯಿಸ್ ನ ಅಂತ್ಯ ಆಗಬೇಕಿತ್ತು.ಪಾಪ ಮಾಡಲು ಹೊರಟ ಇವರಿಗೆ ಇದು ಕಷ್ಟವಾಗಿರಲಿಲ್ಲ.ಲೂಯಿಸ್ ವಾಯುವಿಹಾರಕ್ಕೆಂದು ಪ್ರತಿದಿನ ಸಂಜೆ ನಗರದ ಆಗ್ನೇಯ ದಿಕ್ಕಿನ ಟಾಡಿ ಸರೋವರದ ದಂಡೆಯ ಮೇಲೆ ಹೋಗುತಿದ್ದ.ಪೋಲೀಸರು ಲೇವ್ ಗೆ ಕರೆ ಮಾಡಿ ಲೂಯಿ ಕಾಲು ಜಾರಿ ಸರೋವರದಲ್ಲಿ ಮೃತನಾದನೆಂದು ವಿಷಯ ಕೊಟ್ಟರು.ಆ ಪೊಲೀಸ್ ಅಧಿಕಾರಿ ಇವರಿಗೆ ಬೆನ್ನೆಲುಬಾಗಿ ನಿಂತಿದ್ದ.ಅತ ಇವರಿಂದ ಡಾಲರ್ ನುಂಗಿದ್ದ.ಅಸಲಿಗೆ ಲೂಯಿಸ್ ವಿಹರಿಸಬೇಕಾದರೆ ಸ್ನಾಕ್ಸ್ ಮಾರುವವ ಬಂದು ಡಿಕ್ಕಿ ಹೊಡೆದ.ಆಗ ಸಂಜೆ ಏಳು ಘಂಟೆ ಆದ್ದರಿಂದ ಮಬ್ಬುಗತ್ತಲಾವರಿಸಿತ್ತು.ಡಿಕ್ಕಿ ಹೊಡೆದಾತ ತನ್ನ ಕೈಯಿಂದ ಲೂಯಿಸ್ ಅನ್ನು ಸರೋವರಕ್ಕೆ ನೂಕಿ ಅತನು ನೀರಿಗೆ ಹಾರಿದ.ಚೆನ್ನಾಗಿ ಈಜು ಬಲ್ಲ ವ್ಯಕ್ತಿ ಆದ್ದರಿಂದ ಆತ ಮತ್ತೊಂದು ದಡದಿಂದ ಪಾರಾದ.ಅತ ಒಬ್ಬ ಸುಫಾರಿ ಕಿಲ್ಲರ್ ಜಾಯ್.
ಹೀಗೆ ದಿನ ಕಳೆಯುವದರೊಳಗಾಗಿ ಲೂಯಿಸ್ ನ ಚಟ್ಟ ಕಟ್ಟಿದ್ದರು ಕಿರಾತಕರು.ಅವರ ಏಣಿಕೆಯಂತೆ ಲೂಯಿಸ್ ಆಸ್ತಿ ಈಗ ಲೇವ್ ನ ಹೆಸರಿಗೆ ನಾಮಾಂಕಿತವಾಗಿತ್ತು.
ಲೆವ್ ಈಗ ತಾನು ತನ್ನ ಪತ್ನಿ ತಾಯಿ ಜೊತೆ ಭವ್ಯ ಬಂಗಲೆಯಲ್ಲಿ ವಾಸವಿದ್ದ.ಅವರ ಜೊತೆ ಜಸ್ಸಿಯು ನೆಪಹೂಡಿಕೊಂಡು ಲೇವ್ ನ ಮನೆಯ ಹೊಕ್ಕ.ಇದು ಜೂರಿಗೆ ಜಸ್ಸಿಗೆ ತಮ್ಮ ಕಾರ್ಯಾಚರಣೆಗೆ ಅನುಕೂಲವಾಗಿತ್ತು.
ಲೇವ್ ಆಫೀಸ್ ಕೆಲಸಕ್ಕೆಂದು ಹೊರಹೋದಾಗ ಜಸ್ಸಿ ಮತ್ತು ಜೂರಿ ಇಬ್ಬರು ಒಂದುಗೂಡುತಿದ್ದರು.ಇದು ಏನು ಅರಿಯದ ಸಿಮಿಯಾಳ ಗಮನಕ್ಕೆ ಬರುತ್ತಿರಲಿಲ್ಲ
ಇದಾಗಿ ಒ೦ದು ದಿನ  ಜೂರಿ & ಜಸ್ಸಿ ಒ೦ದು ಅ೦ತಿಮ  ಹಣಾಹಣಿಗೆ ವೇದಿಕೆ ಸಿದ್ದಪಡಿಸಿದರು.....
 
ಆ  ದಿನ  ರಾತ್ರಿ ಮನೆಗೆ  ಬ೦ದ  ಲೇವ್  ನ  ಬೆನ್ನು ಹತ್ತಿದ  ಜೂರಿಸ್  ಆತನನ್ನ  ಹೊರಗಡೆ  ಪಿಕ್ ನಿಕ್  ಹೋಗೋಣ  ವೆ೦ದು  ಪುಸಲಾಯಿಸಿದಳು...ಕೆಲಸದ  ಒತ್ತಡದ  ನಡುವೆಯು ಆತ  ಮುದ್ದಿನ  ಮಡದಿಯ
ಮಾತಿಗೆ ಇಲ್ಲವೆನ್ನಲಾಗದೆ  ಒಪ್ಪಿದನು.....
 
ಇಬ್ಬರು ಒ೦ದು ಸು೦ದರ  ಪರ್ವತ  ಶ್ರೇಣಿಗೆ ಹೋದರು....ಜವರಾಯ  ಅಲ್ಲಿ  ಇವರನ್ನು  ಹಿ೦ಬಾಲಿಸಲು ತಯಾರಾಗಿದ್ದ......
ಮು೦ದೇನಾಯಿತು...............?

 

Comments