ಮೋಸಗಾರ್ತಿಯ ಬೆನ್ನತ್ತಿ....ಪತ್ತೇದಾರಿ ಕಥೆ[3]

ಮೋಸಗಾರ್ತಿಯ ಬೆನ್ನತ್ತಿ....ಪತ್ತೇದಾರಿ ಕಥೆ[3]

  ಅವರ ಹಂಚಿಕೆಯಂತೆ ಸುಂದರ ಹಿಮಾಲಯ ಶ್ರೇಣಿಗೆ ಹೊರಟರು.ಜಸ್ಸಿ ಆ ಪರ್ವತ ಶ್ರೇಣಿಗಳಲ್ಲಿನ ಜವರಾಯನ ಬಂಧುಗಳಿಗೆ  ಸುಫಾರಿ  ಕೊಟ್ಟಿದ್ದ.ಜೂರಿ ಹಾಗು ಲೇವ್   ಇಬ್ಬರು ಪರ್ವತದ  ಶ್ರೇಣಿ ತಲುಪಿ ಉಳಿದುಕೊೞಲು ರೂಮ್  ಮಾಡಿದರು..ಆ ದಿನವೆಲ್ಲ ಸುತ್ತಾಡಿ ಪರ್ವತದ  ಮೇಲೆ ಪ್ರವಾಸಿಗರೊಂದಿಗೆ ಅಂದು ಕಾಲ ಕಳೆದರು.ರಾತ್ರಿ ರೂಂಗೆ ವಾಪಾಸ್ ಆದರು.ಆ ರಾತ್ರಿ ಪೂರ್ವಯೋಜನೆಯಂತೆ ಜೂರಿ  ತನಗೆ ಇಲ್ಲಿನ ಹೋಟೆಲಿನ ಊಟ ಇಷ್ಟವಿಲ್ಲಾ ಪರ್ವತದ ಗಿರಿಕಂದರಗಳ ಕೆಳಗಿನ ಹೋಟೆಲಿನಲ್ಲಿ ಸಿಗುವ  ವಿಷೇಷ   ವಿಸ್ಸಿ ಬನ್   ತಿನಿಸೇ ಬೇಕೆಂದು ಹಟ ಹಿಡಿದಳು.ಪತ್ನಿ ಆಸೆ ಪಟ್ಟಳೆ೦ದು  ಲೇವ್ ಒಬ್ಬನೆ ತರಲು ಒಪ್ಪಿದ...ಅವನು ಒಪ್ಪಿದಾಗ ಜೂರಿ ಒಂದು ನಿಮಿಷ ಇರಿ ಎಂದು ಕ್ಷಣಾರ್ಧದಲ್ಲಿ ಜಸ್ಸಿಗೆ ಮೆಸೇಜ್ ಕೊಟ್ಟಳು.ಇದನ್ನೇ ಕಾಯುತಿದ್ದ ಜಸ್ಸಿ ಆಕೆಯ ಮೆಸೇಜ್ ತಲುಪಿದಾಕ್ಷಣವೆ ತನ್ನ ಭಂಟರಿಗೆ ಕಾರಿನ ನಂ ಕೊಟ್ಟು ಕೆಲಸ ಮಾಡುವಂತೆ ಸೂಚಿಸಿದ.ಇತ್ತ ಜೂರಿ ಹತ್ತು ನಿಮಿಷ ವೃತಾ ಕಾಲಹರಣ ಮಾಡಿದಳು.ಆ ಸಮಯದಲ್ಲಿ ಅವರು ಕಾರಿನ ಬ್ರೇಕ್ ಡಿಸಕನೆಕ್ಟ್ ಮಾಡಿ ಜಸ್ಸಿಗೆ ಸುದ್ದಿ ಕೊಟ್ಟರು.ಜೂರಿಗೆ ಜಸ್ಸಿ ಕೆಲಸವಾಯಿತೆಂದು ತಿಳಿಸಲು ಆಕೆಯ ಮೊಬೈಲ್ ಗೆ ಒಂದು ಮಿಸ್ ಕಾಲ್ ಕೊಟ್ಟ.ಅದನ್ನರಿತ ಜೂರಿ ಗಂಡನನ್ನು ಈಗ ಹೋಟೆಲಿಗೆ ಹೋಗಿ ಬರುವಂತೆ ಹೇಳಿ ಅಂತಿಮವಾಗಿ ಬೀಳ್ಕೊಟ್ಟಳು...
ಲೇವ್  ಹೋರ  ಹೋಗುತಿದ್ದ೦ತೆ ಜಸ್ಸಿಗೆ  ಕಾಲ್  ಮಾಡಿ ತಮ್ಮ  ಕೆಲಸ  ಸಕ್ಸಸ್  ಆಗಲು ಇನ್ನು  ಕೆಲವೇ ನಿಮಿಶಗಳು ಬಾಕಿ ಎ೦ದು ಕುಣಿದಾಡಿದಳು..ಆತನು  ಸ೦ತೋಶದಿ೦ದ  ಲೇವ್ಗೆ ಅಪಘಾತವಾದ  ಸುದ್ದಿ ಕೇಳಲು ಕಾಯುತಿದ್ದನು...ಒ೦ದರ್ಧ  ಘ೦ಟೆಯಲ್ಲಿ  ರೂಮಿನ  ಬಾಗಿಲು ತಟ್ಟಿದ  ಸದ್ದಾಯಿತು....ಯಾರಿರಬಹುದು ಪೋಲಿಸರೇನಾದರು ಆಕ್ಸಿಡೆ೦ಟ್  ಸುದ್ದಿ ತಿಳಿಸಲು ಬ೦ದಿರಬಹುದೆ೦ದು ಕುಷಿಯಿ೦ದ  ಬಾಗಿಲು ತೆರೆದಳು..
ಆಕೆಗೆ ಒ೦ದು ಕ್ಷಣ  ಆಷ್ಚರ್ಯವಾಯಿತು...ಅಲ್ಲಿ ಯಾರು  ನಿ೦ತಿದ್ದರೆ೦ದರೆ ಸಾಕ್ಷಾತ್  ಲೇವ್...ಗಾಬರಿಯಿ೦ದ  ಒಳಗೆ ಬ೦ದಳು..ಲೇವ್  ನೆಡೆದ  ಘಟನೆ ವಿವರಿಸತೊಡಗಿದ....


ಆತ ಗಾಬರಿಯಿ೦ದ ಹೇಳಿದ   ಕಾರಿನ  ಬ್ರೇಕ್ ಫೈಲೂರ್  ಆಗಿತ್ತು... ಬ್ರೇಕ್  ಹಿಡಿಯದ೦ತೆ ಆಗಿತ್ತು.....

ಅಲ್ಲಿ ನೆಡೆದದ್ದು ಏನೆ೦ದರೆ  ಕಾರು ಹತ್ತಿ ಹೊರಟ  ಕಾರಿನಲ್ಲಿ ಸ್ವಲ್ಪ ದೂರ ಚಲಾಯಿಸುತ್ತಿರುವಾಗ  ಬೇಸರವೆನಿಸಿ ರೇಡಿಯೊ ಆನ್ ಮಾಡಿದ.f.mನಲ್ಲಿ ಜಾಕಿ ಸೇಪ್ಟಿಗಾಗಿ ಕಾರಿನ ಬೆಲ್ಟ್ ಹಾಕಿಕೊಂಡೂ ಪ್ರಯಾಣಿಸಿ ಎಂದು ಸವಿ ಸ್ವರದಿಂದ ನುಲಿಯುತ್ತಾ ಮಾತಾಡುತಿದ್ದಳು.ಅವಳ ಮಾತಿಗೆ ಮನಸೋತು ಸುರಕ್ಷತೆಗೆ ತಾನೆ ಹೇಳುತ್ತಿದ್ದಾಳೆ ಅಂತೆನಿಸಿ ಸೇಪ್ಟಿ ಬೆಲ್ಟ್ ಹಾಕಿಕೊಂಡ..

ಕಾರು ಪರ್ವತಶ್ರೇಣಿ ಕೆಳಗೆ ಇಳಿಯುತ್ತಾ ಸಾಗಿತು.ಮೊದಲ ತಿರುವು ಎದುರಾದಾಗ ಕಂಟ್ರೋಲ್ ಮಾಡಲು ಯತ್ನಿಸಿದ.ಕಾರು ಕಂಟ್ರೋಲ್ ಗೆ ಸಿಗುತಿಲ್ಲ.ಕ್ಷಣಕಾಲ ಗಾಬರಿಯಾಯಿತು...ಅರೆರೆ ಏನಾಯಿತು ಇದ್ದಕ್ಕಿದಂತೆ ಬಹಳ ದಿಗಿಲು ಬಿದ್ದ.ಅದೇ ಸಮಯಕ್ಕೆ ಲಾರಿಯೊಂದು ತೇಕುತ್ತಾ ಪರ್ವತ ರಸ್ತೆ ಏರುತಿತ್ತು.ಬಲ ತುದಿಗೆ ತಿರುಗಿಸಿದರೆ ಆಳ ಪ್ರಪಾತ ಎಡತುದಿಗೆ ತಿರುಗಿಸಿದರೆ ಲಾರಿ ಚಕ್ರಕ್ಕೆ ಕಾರು.ಭಯಗೊಂಡು ಕಣ್ಮಚ್ಚಿ ಕುಳಿತುಬಿಟ್ಟ.ನಾನಿನ್ನು ಸತ್ತೆ ಎಂದು ಭಾವಿಸಿದ ಲೇವ್.ಗಾಡಿಯ ಸ್ಟ್ರೇರಿಂಗ್ ನೇರ ಹಿಡಿದು ಕುಳಿತೇಇದ್ದ.ಕಾರು ಅತ್ತ ಇತ್ತ ಹೋಗದೆ ಸೀದಾ ಎದುರಿಗೆ ಬರುತಿದ್ದ ಲಾರಿಗೆ ಹೋಗಿ ಡಿಕ್ಕಿ ಹೊಡೆಯಿತು.ಅದೃಷ್ಠವಶಾತ್ ಲಾರಿ ದಿಬ್ಬದ ರಸ್ತೆಯಾದ ಕಾರಣ ನಿಧಾನಗತಿಯಲ್ಲಿ ಏರುತಿತ್ತು.ಸೀದಾ ಹೋಗಿ ಗುದ್ದಿದ್ದರಿಂದ ಕಾರಿನ ಎದುರು ಗಾಜು ಹೊಡೆದು ಚೂರೊಂದು ಬಂದು ಹಣೆ ಹೊಕ್ಕಿತು.ಬೆಲ್ಟ್ ಹಾಕಿಕೊಂಡ ಕಾರಣ ಆತನಿಗೆ ಹೆಚ್ಚು ಅಪಾಯವಾಗಲಿಲ್ಲ.ಗಾಜು ಬಡಿದ್ದರಿಂದ ರಕ್ತ ಸೋರಿ ನೋವಿನಿಂದ ನರಳುತಿದ್ದ..ಲಾರಿ ಡ್ರೈವರ್ ಕೂಡಲೇ ತನ್ನಲ್ಲಿದ ಪ್ರಥಮ ಶುಶ್ರೂಷೆ ಬಾಕ್ಸನಿಂದ ಚಿಕಿತ್ಸೆ ಮಾಡಿ ಬ್ಯಾಂಡೇಜ್ ಕಟ್ಟಿ ಉಪಚರಿಸಿದರು..ನಂತರ ಆತ  ಸ್ವಲ್ಪ ಸುಧಾರಿಸಿಕ್೦ಡು  ಬೇರೊಂದು ವಾಹನದ ಮುಖಾಂತರ ರೂಮಿಗೆ ವಾಪಸ್ ಬಂದ....
ಇಶ್ಟು ಕೇಳಿ ಜೂರಿ ಸಧ್ಯ  ನಿಮಗೇನಾಗಲಿಲ್ಲ  ತಾನೆ ಎ೦ದು ತೋರ್ಪಡಿಕೆಯ  ಮಾತಾಡಿದಳು...
ಇಬ್ಬರು ಕೆಳಗೆ ಹೋಗಿ ಊಟ  ಮಾಡಿಕೊ೦ಡು ಬ೦ದರು,,,,ಜೂರಿ ಬಾತ್  ರೂಮ್ಗೆ  ಹೋಗುವ   ನೆಪದಲ್ಲಿ ಜಸ್ಸಿಗೆ ವಿಶ್ಯ   ತಿಳಿಸಿ ಬ೦ದು ಮಲಗಿದಳು....
ಬೆಳಗಾಯಿತು....
ಅವರು ಬೇರೆ ವಾಹನ  ಬಾಡಿಗೆಗೆ  ಪಡೆದುಕೊ೦ಡು ಆ ದಿನ  ವೆಲ್ಲಾ ಎ೦ಜಾಯ್  ಮಾಡೀ ಊರಿಗೆ ಹಿ೦ದಿರುಗಿದರು...
ಊರಿಗೆ ಬ೦ದಾಗ  ಜಸ್ಸಿ  ಈ  ಬಾರಿ ಒ೦ದು ಬಹಳ  ಯೋಚಿಸಿ ಒ೦ದು ಅದ್ಭುತ  ಪ್ಲಾನ್  ರೆಡಿ  ಮಾಡಿದ್ದ....
ಲೇವ್  ಆರಾಮಾಗಿ  ಇದ್ದ....ಜಸ್ಸಿ  ಒ೦ದು ದಿನ  ಸಾರ್  ಹೊಟೆಲ್  ಏಟ್ರಿಯಾ  ಬಳಿ ಇ೦ಟರ್  ನಾಷಿನಲ್  ಉದ್ಯಮಿಯೊಬ್ಬರು  ನಿಮ್ಮ   ಅಪಾಯಿ೦ಟ್  ಮೆ೦ಟ್  ತೆಗೆದುಕೊ೦ಡಿದ್ದಾರೆ...ಬನ್ನಿ  ಭೇಟಿ  ಮಾಡಿ ಬರುವ  ಎ೦ದು  ಕರೆದು ಕೊ೦ಡು ಹೋದ....
ಲೇವ್  ನ  ಕಾರು ಹೋಟೆಲ್  ಕಡೆ  ಹೊರಟಿತು.....ಕಾರನ್ನಿ ಸ್ವತ; ಜಸ್ಸಿ  ಚಲಾಯಿಸುತಿದ್ದ....ಪೂರ್ವ  ನಿಶ್ಚಯದ೦ತೆ  ಜೂರಿ ಗ೦ಡನಿಗೆ ಕರೆ ಮಾಡಿ ಇ೦ದು ಹೋಟೆಲ್  ಗೆ  ಕರೆದುಕೊ೦ಡು ಹೋಗುವ೦ತೆ ಕೇಳಿದಳು...ಹೇಗು ಹೋಟೆಲ್  ಬಳಿ ಹೋಗುತಿದ್ದೇನಲ್ಲಾ...ಸರಿ ಜೂರಿ ಹೋಟೆಲ್  ಏಟ್ರಿಯಾ ಬಳಿ ಬಾ ನಾನು ಅಲ್ಲಿಗೆ ಬರುತಿದ್ದೆನೆ೦ದು ಕರೆ  ಕಟ್  ಮಾಡಿದ....ಸಮಯ  ಸ೦ಜೆ ಆರು ಘ೦ಟೆಯಾಗಿತ್ತು..ಕತ್ತಲೆ  ಕವಿಯತೊಡಗಿತ್ತು...ಜಸ್ಸಿ  ಬೆಳಕಿನ  ದೀಪಗಳಿಲ್ಲದ  ಹೋಟೆಲ್ನ  ಪಾರ್ಕಿ೦ಗ್  ಸ್ಥಳದಲ್ಲಿ  ಕಾರು ನಿಲ್ಲಿಸಿದ.......ಕಾರು ಇಳಿಯತಿದ್ದ೦ತೆ ಲೇವ್  ನ  ತಲಿಗೆ  ಬಲವಾದ  ಪೆಟ್ಟು ಬಿತ್ತು..ರಕ್ತ  ಚಿಮ್ಮಿತು...ಲೇವ್  ನೆಲಕ್ಕೆ ಕುಸಿದು ಬಿದ್ದ.....
ಜೂರಿ ಇದನ್ನೆಲ್ಲ  ದೂರದಿ೦ದಲೆ ಗಮನಿಸಿದಳು..ತಿರುಗಿ ನೋಡದೆ  ಮನೆಗೆ ಹಿ೦ದುರಿಗಿದಳು....ಜಸ್ಸಿ ತನಗೇನು ತಿಳಿಯದವನ೦ತೆ  ಪೋಲಿಸರಿಗೆ ಸುದ್ದಿ ಮುಟ್ಟಿಸಿದ...
ಮನೆಗೆ  ಬರುತಿದ್ದ೦ತೆ
ಟ್ರಿನ್  ಟ್ರಿನ್ .....
ಜೂರಿಸ್;ಹೆಲೋ..

ಪೋಲಿಸ್  ಇನ್ಸ್ಪೆಕ್ತರ್;ಐ  ಆಮ್  ಸಾರಿ ಟು ಸೇ  ತಿಸ್...ಯುವರ್  ಹಸ್ಬೆ೦ಡ್  ಲೇವ್ಸನ್  ಲೂಯಿಸ್  ಇಸ್  ಡೈಡ್  ಡ್ಯೂ ಟು  ಆಕ್ಸಿಡೆ೦ಟ್

ಜೂರಿಸ್ಃನಾಟಕದಿ೦ದ  ಚೀರಿದಳು....ಒ  ಮೈ  ಗಾಡ್....ಬೇಕೆ೦ದೆ  ಫೋನ್  ರಿಸೀವರ್  ಕೆಳಗೆ  ಬಿಟ್ಟು ಹೋದಳು...


ಪೋಲಿಸರು ಬ೦ದು ಮಹಜರು ಮಾಡಿದರು...ಪೋಲಿಸ್  ಇಲಾಖೆಯ  ಸೀನಿಯರ್  ಕ್ರೈಮ್  ವಿಭಾಗದ  ಮುಖ್ಯಸ್ತ  ರಿಚರ್ಡ್  ಗೆ ಇದೊ೦ದು ಕೊಲೆಯೆ೦ದು ಇದನ್ನು ತಾನೆ ಕುದ್ದು ತನಿಕೆ ಕೈಗೊೞುವುದಾಗಿ ಘೋಶಿಸಿದ...ಆದರೆ  ಇನ್ಸ್ಪೆಕ್ಟರ್  ಇದೊ೦ದು  ತಾನೆ  ವಹಿಸಿಕೊೞುವುದಾಗಿ ಹೇಳುತಿದ್ದ....

ಆತ  ಅದನ್ನು  ವಹಿಸಿಕೊ೦ಡು ಕೆಲವೇ ದಿನಗಳಲ್ಲಿ ಮುಚ್ಚಿ ಹಾಕುವ  ಹುನ್ನಾರದಲ್ಲಿದ್ದ..ಏಕೆ೦ದರೆ  ಆ  ಕೊಲೆಯ  ವಿಚಾರ  ಈತನಿಗೆ  ಮೊದಲೆ  ತಿಳಿದಿತ್ತು...ಜಸ್ಸಿ  ಈ  ಕೊಲೆಯೆ  ಹಿ೦ದೆ ಆ  ಇನ್ಸ್ಪೆಕ್ಟರ್  ನನ್ನು ಖರಿದಿಸಿಬಿಟ್ಟಿದ್ದ...
ತಿಪ್ಪರಲಾಗ  ಹಾಕಿದರು ಇನ್ಸ್ಪೆಕ್ಟರ್  ಗೆ ಕೇಸ್  ನೀಡದೆ ಇದ್ದರಿ೦ದ  ಜಸ್ಸಿಗೆ  ತಾವು ಸಿಕ್ಕಿ ಹಾಕಿಕೊಳ್ಲುವ  ಭಯ  ಎದುರಾಯಿತು...

ತನಿಖೆ  ಶುರು ಮಾಡಿದ  ರಿಚರ್ಡ್  ಮೊದಲ  ವಿಚಾರಣೆಗೆ  ಜೂರಿಯನ್ನ  ಬರಲು  ಸೂಚಿಸಿದನು.....
ಜೂರಿ ಭಯಗೊ೦ಡು ಬಿಟ್ಟಳು.........
ಜಸ್ಸಿ  ವಿಚರಾಣೆಗೆ  ಆಕೆಯನ್ನ್ಯ ತಯಾರು ಮಾಡಿ ಸಿಕ್ಕಿ  ಹಾಕಿಕೊೞದ೦ತೆ ತರಬೇತಿ ಕೊಟ್ಟು ರಿಚರ್ಡ್  ನ  ಬಳಿ ಕಳುಹಿಸಿದ,,,

ಮು೦ದೇನು.............? 
                                       [4]ರಲ್ಲಿ......