ಮೋಹಕ ಕಾವ್ಯ...

ಮೋಹಕ ಕಾವ್ಯ...

ಕವನ

ಹಸಿರು ತುಂಬಿದ ಕಾಡೆಲ್ಲ ಪಚ್ಚೆ ಪೈರಿನ ಬಣ್ಣದ ಕವಚವನು ಹೊದಿಸಿದೆ

ಉಸಿರು ಬಿಡದೆ ಸುರಿವ ಶುಭ್ರ ಸುಣ್ಣದ ಧಾರೆ ರವಿಕೆಯಂತೆ ಕಾಣಿಸಿದೆ

 

ಧಾರಾಕಾರವಾಗಿ ಸುರಿದ ಸೋನೆ ಮಳೆಗೆ ಗುಡ್ಡವೇ ತೇಲಿ ಬಂದಂತೆನಿಸದೇ

ಧಾರೆಯಾಗಿ ಧರೆಗೆ ಇಳಿದ ಜಲವಾಹಿನಿ ಹಾಲಿನಂಥ ತೊರೆಯ ಮೂಡಿಸಿದೆ

 

ಕಲ್ಲುಬಂಡೆಗಳ ಮಧ್ಯ ಭೋರ್ಗರೆದ ಭಾವ ಅಲೆಗಳ ರೌದ್ರತೆ ಕಂಡೆ

ಬಿಲ್ಲು ಬಾಣಕೆ ಹೂಡಿ ಎಸೆದಂತೆ ಉದಕ ನೆಟ್ಟನೆ ನೆಲ ಸೀಳಿದಂತೆ ಅನಿಸಿದೆ

 

ನೋಡುಗರ ಎದೆಯ ಬಯಲಲಿ ಕನಸು ಬಿತ್ತಿದ ಹೊಲದ ಬೆಳೆ ನಕ್ಕಿದೆ

ಮಾಡುವ ಭಗಿರಥ ಪ್ರಯತ್ನ ಧರೆಗೆ ಗಂಗೆ ಹರಿಸಿ ಚಿತ್ತದಲಿ ಚಿತ್ತಾರ ಬಿಡಿಸಿದೆ

 

ಜಲಪಾತದ ರುದ್ರ ರಮಣೀಯ ದೃಶ್ಯ ಮೋಹಕ ಕಾವ್ಯ ರಚಿಸಿದೆ ಈಶ್ವರ

ಕೆಳದ ಪ್ರಪಾತದಲ್ಲಿ ಸತತ ಧುಮ್ಮಿಕ್ಕುತ್ತಿರುವ ನೀರಿನ ಹರಿವು ಧರೆಯ ದಾಹ ತಣಿಸಿದೆ.

 

-ಈಶ್ವರ ಜಿ.ಸಂಪಗಾವಿ 

 

ಚಿತ್ರ್