ಮೋಹದ ಬಲೆ
ಕವನ
ಒಂದು ಕಂಬನಿ ನೂರು ವಿರಹದ
ಕಥೆಯ ಹೇಳಲು ಕೋರಿದೆ
ಬಿಂಧು ಬಿಂಧುವು ನೋವು ಗಂಟನು
ಬಿಚ್ಚಿ ಲೋಕಕೆ ತೋರಿದೆ ||
ದೇಹದಿಂದಲಿ ಒಲವ ಹಕ್ಕಿಯು
ಹಣ್ಣು ಸೇವಿಸಿ ಹೋಗಿದೆ
ದಾಹಯನ್ನುತ ಬಳಿಗೆ ಬರುತಲಿ
ಕೊಳವ ಮಲಿನವ ಮಾಡಿದೆ||
ನಲ್ಲ ಗೋಮುಖ ತೋರಿ ಒಡಲಿಗೆ
ಬೆಂಕಿ ತಗುಲಿಸಿ ನಿಂದನು
ಮೆಲ್ಲ ಮೆಲ್ಲನೆ ತನುವ ಅಂದವ
ದೋಚಿ ರಮಿಸುತ ಸವಿದನು||
ಕೂಸಿನಂತಿಹ ಕೂಸ ಮಡಿಲಲಿ
ಮಗುವ ಇಟ್ಟನು ಭರದಲಿ
ಕಾಸು ತೋರಿಸಿ ಕೂಸು ಅಳಿಯಲು
ಕಾಸು ಕೊಟ್ಟನು ಚಣದಲಿ||
ದ್ರೋಹ ವೆಸಗುತ ದೂರ ಸರಿದನು
ಬಾಲೆ ಸಂಗವ ತೊರೆಯುತ
ಮೋಹ ಪ್ರಾಯವ ಜರಿದು ಅತ್ತಳು
ಕಣ್ಣ ನೀರನು ಸುರಿಸುತ||
-*ಶ್ರೀ ಈರಪ್ಪ ಬಿಜಲಿ*
ಚಿತ್ರ್
