ಮೋಹನ ರಾಗ ಮತ್ತು ಕೆಲವು ಹನಿಗಳು

ಮೋಹನ ರಾಗ ಮತ್ತು ಕೆಲವು ಹನಿಗಳು

ಕವನ

ಮೌನವು ಮುತ್ತಿದೆ ದೇಹದ ಸುತ್ತಲು

ಕತ್ತಲೆ ಕಂಡಿದೆ ಬದುಕಲಿಯಿಂದು

ಬೆಳಕನು ನೀಡುವ ಸ್ನೇಹಿತೆ ಕಾಣಳೆ

ಹುಡುಕುತ ನಡೆದೆನು ದಾರಿಯಲಿಂದು

 

ಪ್ರಣಯದ ಸರಿಗಮ ನುಡಿಸಲು ಬಾರದೆ

ಪ್ರೀತಿಯ ಪಡೆಯದೆ ಸೋತೆನುಯಿಂದು

ಕಾಣದ ಒಲವನು ಬಯಸುತ ಸಾಗುತ

ವಿರಹದಿ ಸುತ್ತಿದೆ ಛಲದಲಿಯಿಂದು

 

ಸೂರ್ಯನ ಬೆಳಕಿಗೆ ಮುದುಡಿದ ಹೂಗಳು

ಚಂದ್ರನ ಕಾಂತಿಗೆ ಹೊಳೆದವೆಯಿಂದು

ಬಾಳಿನ ಪಲ್ಲವಿ ಸೋಲುತ ಹೋದರೆ

ಮೋಹನ ರಾಗವು ಧ್ವನಿಸದೆಯಿಂದು

***

ಹನಿಗಳು

ಬಿಡುವಿರಲು

ನಾಲ್ಕು ಜನರಿಗೆಂದೂ

ಉಪಕರಿಸು !

 

ಕತ್ತೆಯನೆಂದೂ

ಹೀಗೆಳೆಯದಿರೈಯ್ಯಾ

ಹಾಲದು ಶ್ರೇಷ್ಠ !

 

ತಪ್ಪಿರದವ

ಯಾರಿಹನು ಜಗದಿ

ಪೂರ್ಣರಾರಿಲ್ಲಿ !

 

ಕಪಿ ಚೇಷ್ಟೆಯು

ಬೇಡದು ಜಗದಲಿ

ಒಳ್ಳೆಯವರೆ !

 

ಜೀವಂತವಾಗಿ

ಸುಟ್ಟು ಬಿಡಿರೆಂದೂ

ಪಾಪ ಪ್ರಜ್ಞೆಯ !

 

-ಹಾ ಮ ಸತೀಶ ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ

 

ಚಿತ್ರ್