ಮೋಹ ಬಂಧನ
ಕವನ
ಸ್ವಾತಂತ್ರ್ಯರಹಿತ ಸೌಲಭ್ಯ ಪಂಚರದ ಪಕ್ಷಿಯಂತೆ
ಸೌಲಭ್ಯವಿಲ್ಲದ ಸ್ವಾತಂತ್ರ್ಯ ರೆಕ್ಕೆಯಿಲ್ಲದ ಹಕ್ಕಿಯಂತೆ
ಸ್ವಾತಂತ್ರ್ಯದೊಡೆ ಸೌಲಭ್ಯ ದೊರೆಯೆ ಸೊಬಗಿಹುದು
ಸೌಲಭ್ಯವ ಪಡೆದು ಬಂಧಿಯಾಗದಿರು- ನನ ಕಂದ||1.
ಮೋಹಪಾಶಗಳ ಬಲೆಗೆ ಸಿಲುಕಿ ಘಾಸಿಗೊಳ್ವುದು ಮನವು
ಮನದ ಹೊಯ್ದಾಟದಲಿ ನಲುಗಿ ಸೊರಗುವುದು ತನುವು
ಮನನೊಂದು ತನುಬೆಂದರೂ ಬಿಡದು ಮೋಹದ ಪಾಶವು
ಮೋಹಪಾಶಕೆ ಸಿಲುಕದಿರು ನೀನೆಂದೂ- ನನ ಕಂದ ||