ಮೋಹ - ಮಾಯೆ
ಬೇಕು ಬೇಕೆನಗಿನ್ನು ಬೇಡದಿಹದೆನಿಲ್ಲಿನ್ನು ಬೇಕೆನುತ ಬೊಬ್ಬಿಡುತಿಹೆ ಮೋಹದ, ಬಲೆಯಲ್ಲಿ ಸಿಲುಕುತ ಸಿಗದು ಸಿಗದೇನಿನ್ನು, ನೀ ತಂದಿಹುದಿರದು ಏನನ್ನು ಬಯಸಿದರು ಬರದು ಮಾಯೆಯ ವಿಚಿತ್ರ ಮೆರಗು ಈ ದಾರಿಯದು ನನದಿನ್ನು ನಾ ಪಯಣಿಸುವೆ ಆಧುನಿಕತೆಯಲಿನ್ನು ಹಾರುತ, ಓಡುತ ಹಿಡಿಯಲಿರುವೆ ಮೋಹದ ಬಲೆಯಲ್ಲಿ ಸಿಲುಕುತ ನಿನದಾವುದು ತಿಳಿಯದಿಲ್ಲ ನಿನಗಾಗಿ ಏನು ನಡೆಯುವುದಿಲ್ಲ ಹರಿಯುವುದು, ಮುರಿಯುವುದು ಮಾಯೆಯ ವಿಚಿತ್ರ ಮೆರಗು ಮಿಂಚಾಗಿ, ಮುಂಚಿತವಾಗಿ ಮುಂಚೂಣಿಯಲ್ಲಿ ನಿಲ್ಲುವೆ ನಾ ಎಲ್ಲವ ಮೆಟ್ಟಿ, ಹೊಂದಿಸುವೆ, ಮೆಚ್ಚಿಸುವೆ ಕನಸ ನಾ ಕಟ್ಟಿ ಮೋಹದ ಬಲೆಯಲ್ಲಿ ಸಿಲುಕುತ ಮಿಂಚು ಮಾಯವಾಗಿ, ಓಟದ ಆಟದಲ್ಲಿ ಹಿಮ್ಮೆಟ್ಟಿ ಹೂಂದದೆ, ಸಂದಿಸದೆ ನನಸಾಗದು ಮಾಯೆಯ ವಿಚಿತ್ರ ಮೆರಗು ವಂದಿಸುವೆ, ಚಿಂತಿಸುವೆ ಚಿನ್ಮತೆಯ ಕಡೆ ನಾ ಹೊರಡುವೆ ಮಾಯೆಯ ನಮಿಸುತ ನಾ ನಡೆವೆ ತನ್ಮತೆಯ ಮೋಹದ ಬಲೆಯಲ್ಲಿ ಜಯಿಸುವೆ ಸಿಗುವುದು ನಡೆವುದು ನೆನೆದುದೆಲ್ಲಾ, ನನಸಾಯಿತು ಬದುಕಾಯಿತು, ಬವಣೆ ನೀಗಿತು ಮಾಯೆಯ ವಿಚಿತ್ರ ಮೆರಗು. ಮಧ್ವೇಶ್ ಕವನ
ಮೋಹ - ಮಾಯೆ