ಮೌನಗಳ ನಡುವೆ
ಮೌನಗಳ ನಡುವೆ
ಮುತ್ತನ್ನು ಬಿತ್ತುವರ
ಕತ್ತು ಕೊಯ್ಯಲು ಬೇಡಿ ಓ ಮನುಜರೆ
ಹತ್ತು ಜನ ಬದುಕುವರೆ
ಸುತ್ತ ಊರಿನಲಿ ಸುಖದಿ
ಮತ್ತೆ ಬೈಯುವಿರಿ ಏಕೆ ಓ ಮನುಜರೆ
ಆ ಪಕ್ಷ ಈ ಪಕ್ಷ ಯಾವುದಾದರೆ ಏನು
ಕೊನೆಯ ಪಕ್ಷ ನಾಡು ಬೆಳಗುತಿರಲೀ ಸಾಕು
ಸ್ವಾರ್ಥಕ್ಕೆ ದುಡಿಯುವವರ ದೂರವಿರಿಸಿರಿ ಇಂದು
ಸಾಮಾನ್ಯರೊಳು ಬೆರೆವವರ ಕೈ ಹಿಡಿಯಿರಿಂದು
ಬಡಜನರ ತೆರಿಗೆಗಳು ಬಡಜನಕೆ ಸೇರಲಿ
ಉಪವಾಸ ಗಿಪವಾಸ ದೂರವಯ್ಯಾ
ಜತನದಿಂ ಕಾಪಿಟ್ಟ ಮಾನಗಳು ಉಳಿಯಲಿ
ಸನ್ಮಾನ ದಾರಿಯೊಳು ಸಾಗಲಯ್ಯಾ
ಯಾರೊ ಹೇಳಿದರೆಂದು ತಲೆ ಕೆಡಿಸಿಕೊಳ್ಳದೆ
ಬರಹಗಳ ಬರೆಯುತ್ತ ಸಾಗಿರಯ್ಯಾ
ನಾಲ್ಕು ಜನ ಮೆಚ್ಚಲಿ ಮೆಚ್ಚಿಕೊಳದೆ ಇರಲಿ
ನಿಮ್ಮ ಮನದೊಳು ಇರುವುದ ಬರೆಯಿರಯ್ಯಾ
ಸಾಹಿತ್ಯ ಎನ್ನುವುದು ನಿಂತ ನೀರದು ಅಲ್ಲ
ಹರಿವ ನೀರಿನ ತೆರದಿ ಹರಿಯಲಯ್ಯಾ
ಜುಳು ಜುಳುವಿನಾದವದು ಬರಹದಲಿ ಕಾಣುತಿರೆ
ನಿನ್ನ ನೆನಪಿನ ಸುತ್ತ ಇರುವರಯ್ಯಾ
ಪ್ರಕೃತಿಯನು ಕೊಲ್ಲದಿರು ಜೊತೆಗೆ ಸಾಗಲು
ನೀನು ಸಂಸಾರ ಸುಖದೊಳಗೆ ನೋಡು ಅಯ್ಯಾ
ಬೆಟ್ಟ ಗುಡ್ಡದ ಸೊಬಗು ಸಿಗುವುದೊ ನೋಡಲು
ನಮ್ಮ ನೆಲವೇ ನಮಗೆ ತಾಯಿ ಅಯ್ಯಾ
-ಹಾ ಮ ಸತೀಶ ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ