ಮೌನದ ಕೆಸರು

ಮೌನದ ಕೆಸರು

ಕವನ

ಮತ್ತೆ ಕಾಡಿದೆ ನಿನ್ನ ನಗುವು
ಹೇಳಲಾರೆನಿ ಸುಂದರ ನೋವು
ಕಾಣದೆನೋ ನಿನಗೆ ಗೆಳೆಯ
ನನ್ನದು ಎಲ್ಲರ ಹಾಗೆ ಬಡಿಯುವ ಹೃದಯ
ಬೇಡ ಮೌನದ ನೋಟ ನನಗೆ
ಮಾತು ಬೇಕಿದೆ ನನ್ನ ತುಟಿಗೆ...

ನಿನ್ನ ಮೌನದ ಕೆಸರ ನಡುವೆ
ಸಿಕ್ಕ ಪುಟ್ಟ ಕಲ್ಲು ನಾನು
ತುಳಿದು ದಾಟಿ ಬಿಡಬೇಡ ಕೆಸರನ್ನ
ನೀ ನಡೆದರೆ ಒಬ್ಬಂಟಿ ನಾ ಇನ್ನ
ನಿನ್ನ ಮಾತಿನ ಮಳೆಯು ಸುರಿಯಲಿ
ಕೆಸರು ಹರಿದೆನ್ನ ಕೊಳೆಯು ತೊಳೆಯಲಿ.