ಮೌನದ ಪ್ರಶ್ನೆಗಳು
ಹೊಟ್ಟೆಯಲ್ಲಿ ಹುಣ್ಣಿದ್ದರೆ
ಔಷಧಿಯಿದೆ
ಮನಸಿನಲ್ಲಿ ಹುಣ್ಣಿದ್ದರೆ
ಏನು ಮಾಡಲಾದೀತು ?
ಕತ್ತೆಯು
ಪಾಪವೆಂದು
ಹಿಂಬದಿಯಲ್ಲಿ
ಹೋಗಿ ನಿಂತರೆ
ಏನಾದೀತು ?
ಬಾಲವಿರುವ
ಮಂಗನಂತೆ
ಚೇಷ್ಟೆ ಮಾಡಲು
ಹೋದರೆ
ಏನಾದೀತು ?
ಮುದಿತನದಲ್ಲೂ
ಮೋಹ ಮುಸುಕಿ, ಹುಡುಗಿಯ
ಸಂಗ- ಮಾಡಲು ಹೋದರೆ
ಏನಾದೀತು ?
ಹೈವೆಯಲ್ಲಿ ಮೋಟಾರು ಗಾಡಿ
ಓಡಿಸಿದ ಪೇಟೆಯವ
ಹಳ್ಳಿಯ ರಸ್ತೆಯಲ್ಲಿ ಬಿಟ್ಟರೆ
ಏನಾದೀತು ?
***
ಗಝಲ್
ಬದುಕಿನಲ್ಲಿ ತ್ರಾಣವಿದ್ದರೂ ಬತ್ತಿದ್ದ *ಮೌನಿಗನ* ಬೇಡುತ್ತೇನೆ
ಚೇತನದಲ್ಲಿ ಬಲವಿದ್ದರೂ ನಂದಿರುವ *ಮಣ್ಣುಗನ* ಬೇಡುತ್ತೇನೆ
ಅಪಾಯದೊಳಗೆ ಉಪಾಯವಿದ್ದರೂ *ಪಯಣಿಗನ* ಬೇಡುತ್ತೇನೆ
ವಂತಿಗೆಯಲ್ಲಿ ಕಷ್ಟವಿದ್ದರೂ ಕಂತಿರುವ *ಕಬ್ಬಿಗನ* ಬೇಡುತ್ತೇನೆ
ನಿತ್ರಾಣದಲ್ಲಿ ಗೊಂದಲವಿದ್ದರೂ ಬಲವಿರದ *ಹೆಣ್ಣಿಗನ* ಬೇಡುತ್ತೇನೆ
ನಿರ್ಬಲದಲ್ಲಿ ಸಫಲತೆಯಿದ್ದರೂ ಹಾಡಿರದ *ಜವ್ವನಿಗನ* ಬೇಡುತ್ತೇನೆ
ಚಿಂತೆಯಲ್ಲಿ ಚೆಲುವಿದ್ದರೂ ಸಾಗಿರುವ *ಕನಸಿಗನ* ಬೇಡುತ್ತೇನೆ
ಚಿಂತನೆಯಲ್ಲಿ ಪ್ರಕಾಶವಿದ್ದರೂ ಮಲಗಿದ್ದ *ಚಿತ್ರಿಗನ* ಬೇಡುತ್ತೇನೆ
ಹೊಂಬೆಳಕಲ್ಲಿ ಈಶನಿದ್ದರೂ ಗೊಂತಿರದ *ಕೇಳುಗನ* ಬೇಡುತ್ತೇನೆ
ಒಲುಮೆಯಲ್ಲಿ ತೃಪ್ತಿಯಿದ್ದರೂ ನಿಂತಿದ್ದ *ಪ್ರಣಯಿಗನ* ಬೇಡುತ್ತೇನೆ
-ಹಾ ಮ ಸತೀಶ ಬೆಂಗಳೂರು
ಚಿತ್ರ ಕೃಪೆ; ಇಂಟರ್ನೆಟ್ ತಾಣ