ಮೌನವೆಂದಿಗು ಸಲ್ಲ

ಮೌನವೆಂದಿಗು ಸಲ್ಲ

ಕವನ

ಮೌನವೆಂದಿಗು ಸಲ್ಲ 

ಹರಿ ನಿನ್ನ ನೆನೆವಾಗ

ಮನದ ಮಾತಲಿ ಬೇಡ್ವೆ ಸಲಹೆನ್ನ ತಂದೆ

ಚಿಂತೆಯಲಿ ಬಸವಳಿದೆ 

ಏಕಾಂಗಿ ನಾನಾದೆ

ಕೈಹಿಡಿದು ತಳದಿಂದ ಮೇಲೆತ್ತು ತಂದೆ

 

ಮಧುವೊಳಗೆ ಇಳಿದಿದ್ದೆ

ಮದದೊಳಗೆ ಕುಳಿತಿದ್ದೆ

ಯೌವನದ ಹುಚ್ಚಿನಲಿ ಹಾಳಾದೆ ತಂದೆ

ಬೀದಿ ಬಸವನ ರೀತಿ

ತಿರುಗಾಡಿಯಾಗುತಲಿ

ಕೇಳುವವರಾರಿಲ್ಲ ಉಳಿಸಯ್ಯಾ ತಂದೆ

 

ಭವದೊಳಗೆ ಮಂಕಾಗಿ

ಮೂಲೆಯಲಿ ಮಲಗಿರುವೆ

ಪ್ರೀತಿ ತೋರುತ ಬಾರೋ ನೀಯೆನ್ನ ತಂದೆ

ಇರುವಷ್ಟು ದಿನ ದಿನವು

ನಿನ್ನ ಸೇವೆಯ ಮಾಡಿ 

ಮುಕ್ತಿಯನು ಹೊಂದುವೆನು ಹರಸಯ್ಯಾ ತಂದೆ 

 

-ಹಾ ಮ ಸತೀಶ

 

ಚಿತ್ರ್