ಮೌನಿ ಎಂದರೆ ಯಾರು...?

ಮೌನಿ ಎಂದರೆ ಯಾರು...?

ಕವನ

ಮೌನಿ ಎಂದರೆ ಯಾರು...?

ಉಸಿರಿನ ಬಿರುಗಾಳಿಯ ಶಬ್ದವನು

ಹೃದಯದ ಬಡಿತದ ಕ್ರೂರ ಭಯವನು.....

ನರ ನಾಡಿಗಳಲಿ ಉಕ್ಕಿ ಹರಿಯುತಿರುವ

ರಕುತದ ರಭಸದ ಚೀತ್ಕಾರವನು

ಸಹಿಸಿಯೂ ಮಾತನಾಡದವನೆ.......?

 

ಅವಮಾನದ ನೆನಪುಗಳ

ಚಿತ್ರ ವಿಚಿತ್ರ ಕಕ೯ಶ ನಾದಗಳನು....

ವಿರಹದ ನೋವುಗಳ

ಆತ್ಮ ಹಿಂಸೆಯ ವಿಕಾರ ತರಂಗಗಳನು

ಸಹಿಸಿಯೂ ಮುಗುಳ್ನಗುವವನೆ.......?

 

ಇತ್ತ ನಗಲಾರದ, ಅತ್ತ ಅಳಲಾರದ

ಇತ್ತ ಸಾಯಲಾರದೆ.... ಅತ್ತ ಬಾಳಲಾರದೆ.....

ತನ್ನೊಡನೆ ತಾನೆ ಹೋರಾಡಿ...

ತನ್ನಿಂದ ತಾನೆ ಸೋಲುವವನೆ.....?

 

ಜಗತ್ತಿಗೆ ತನ್ನ ತಾನೆ ತೆರೆದುಕೊೞದೆ...

ತನ್ನೊಳಗಿನ ಜಗತ್ತಿಗೆ ತನ್ನನ್ನೆ ತೋರಿಸಲಾಗದೆ....

ಜನರ ಸಂತಸಗಳಿಗೆ ಅಸೂಹೆಗೊಂಡು...

ಜನರಿಗೆ ಸಂತಸ ನೀಡಲಾರದವನೆ.....?

ನಿಜ ಹೇಳಿ

          ಮೌನಿ ಎಂದರೆ ಯಾರು........?

 

 

Comments