ಮೌನೇಶ್ ಎಲ್.ಬಡಿಗೇರ್ ಅವರಿಗೆ ಛಂದ ಪುಸ್ತಕ ಬಹುಮಾನ.
ಛಂದ ಪುಸ್ತಕ ಫಲಿತಾಂಶ:
ಈ ಸಾಲಿನ ಛಂದ ಪುಸ್ತಕ ಬಹುಮಾನವನ್ನು ಶ್ರೀ ಮೌನೇಶ್ ಎಲ್.ಬಡಿಗೇರ್ ರವರು ತಮ್ಮ ಕಥಾಸಂಕಲನದ ಹಸ್ತಪ್ರತಿಗೆ ಪಡೆದುಕೊಂಡಿದ್ದಾರೆ. ಕನ್ನಡ ರಂಗಭೂಮಿಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಮೌನೇಶ್ ಸದ್ಯ ಬೆಂಗಳೂರಿನಲ್ಲಿ ವಾಸಿಸುತ್ತಾರೆ. ನೀನಾಸಂನಿಂದ ರಂಗಶಿಕ್ಷಣ ಡಿಪ್ಲೊಮಾ ಪದವಿಯನ್ನು ಪಡೆದುಕೊಂಡಿರುವ ಮೌನೇಶ್, ಹವ್ಯಾಸಿ ಪತ್ರಕರ್ತರೂ ಹೌದು. ಈ ಸಾಲಿನ ಬಹುಮಾನದ ನಿರ್ಣಯವನ್ನು ನಾಡಿನ ಹಿರಿಯ ಸಾಹಿತಿಗಳಾದ ಶ್ರೀ.ಓ.ಎಲ್. ನಾಗಭೂಷಣಸ್ವಾಮಿ ಮಾಡಿರುತ್ತಾರೆ. ನಾಡಿನ ಯುವ ಕತೆಗಾರರನ್ನು ಗುರುತಿಸುವ ಈ ಸ್ಪರ್ಧೆಗೆ ಸುಮಾರು 50 ಹಸ್ತಪ್ರತಿಗಳು ಪ್ರವೇಶ ಕೋರಿ ಬಂದಿದ್ದವು. ಎಲ್ಲರಿಗೂ ಛಂದ ಪುಸ್ತಕವು ಧನ್ಯವಾದಗಳನ್ನು ಅರ್ಪಿಸುತ್ತಿದೆ.
"ಛಂದ ಪುಸ್ತಕವು" ಈ ಪುಸ್ತಕವನ್ನು ಪ್ರಕಟಿಸಿ ಕತೆಗಾರರಿಗೆ ಹತ್ತು ಸಾವಿರ ರೂಪಾಯಿ ಬಹುಮಾನ, ಪ್ರಶಸ್ತಿ ಪತ್ರ ಮತ್ತು ಪಾರಿತೋಷಕವನ್ನು ನೀಡುತ್ತದೆ. ಮೇ ಮೊದಲನೆಯ ವಾರದಲ್ಲಿ ಪುಸ್ತಕ ಬಿಡುಗಡೆ ಸಮಾರಂಭವನ್ನು ಬೆಂಗಳೂರಿನಲ್ಲಿ ನಡೆಸಲಾಗುತ್ತದೆ.
ಬಹುಮಾನಿತ ಮೌನೇಶ್ ಎಲ್.ಬಡಿಗೇರ್ ಅವರಿಗೆ ಸಂಪದಿಗರೆಲ್ಲರ ಶುಭಹಾರೈಕೆಗಳು.