ಮೌನ ತರವೆ

ಮೌನ ತರವೆ

ಕವನ

ಮೌನ ತರವೆ ಹೇಳೂ

ಬಹುದಿನಗಳಾಯ್ತೂ ನಿನ್ನೊಳು

 

ಖುಷಿಯಾಗೆ ಇದ್ದೆಯಲ್ಲೆ

ಬಹು ಸನಿಹದಿ

ಕೈಹಿಡಿದು ಸಾಗುತ್ತಿದ್ದೆ

ಜೊತೆ ಜೊತೆಯಲಿ

ಏನಾಯ್ತು ನಲ್ಲೆಯೀಗ

ಬೆಳದಿಂಗಳಿಲ್ಲವೆ 

ರಾತ್ರಿ ಹಗಲೇ ಗತಿಯು ನನಗೆ

ಇನ್ನೇನಿದೆ

 

ಜೀವನದ ಸೊಗಡನ್ನು

ಸವಿಯುತ್ತ ಸಾಗಿದೆವು

ಕಾಮನೆಯ ಲೋಕದಲ್ಲಿ

ಈಜಾಡಿ ನಲಿದೆವು

ಎನ್ನರಸಿ ಇಂದೇಕೆ

ಸಂಶಯ ಹೃದಯದಲಿ

ಅರಸೊತ್ತಿಗೆ ಕಾಣದೆ

ಹೋದೆಯಾ

 

ಸಂಸಾರವೆಂಬುದೂ

ಸಾಗರವು ನೀ ತಿಳಿಯು

ಎರಡು ಕೈ ಸೇರಿದರೆ

ಸುಖದೊಳಗೆ ಎಂದೂ

ಜ್ಯೋತಿಯು ನೀನಾಗು

ಬಳಿಯಲ್ಲೆ ನಾನಿರುವೆ

ಸವಿಯಾಗುತ ಸೇರುತ

ಬಾಳುವ

 

-ಹಾ ಮ ಸತೀಶ ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ

ಚಿತ್ರ್