ಮೌನ ಬೆಳಕು

ಮೌನ ಬೆಳಕು

ಕವನ

ಮೌನ ಬೆಳಕು ಇಂದೂ

ನನಗೆ ಮುತ್ತಾ ಇತ್ತಿತ್ತ    || ಪ ||

        

ಸೊಗಸಲ್ಲಿ ಬಂದು ಕೂತು

ನನ್ನನ್ನು ತಬ್ಬಿತ್ತ

ಮನದೊಳಗೆ ಆಸೆಯ ಹರಡಿ

ಮೈದಡವಿ ಸೆಳೆದಿತ್ತ

ನಗುಮೊಗವ ಚೆಲ್ಲಿತ್ತ

ಸಿಹಿಗನಸ ತುಂಬುತಲಿ

ಮೈಬಳುಕಿಸಿ ನಡುತಿರುಗಿಸಿ

ಕೈಹಿಡಿದು ನಿಂತಿತ್ತss       ||೧||

 

ಚೆಲುವಿಂದ ತಂಪುಗಾಳಿ 

ಒಲವನ್ನು ಚಿಮ್ಮಿಸಿತ್ತ

ಸವಿಯುಡುಗೆಯನ್ನು ತೊಡಿಸಿ

ಸಿಹಿಯನ್ನು ಉಣಿಸಿತ್ತ

ಮುನಿಸನ್ನು ಮುರಿಯುತ ತಾನು

ಹರುಷವನು ನೀಡಿತ್ತ

ಖುಷಿಯಾಗುತ

ಮನಸೆಳೆಯುತ ಹಾಡಿತ್ತss  ||೨||

 

ಜೀವನದ ಕನಸನ್ನು 

ನನಸಾಗಿ ತುಂಬಿತ್ತ

ನನಸಿನೊಳು ಹೊಸ ಬದುಕ

ಸುತ್ತೆಲ್ಲ ಹರಡಿತ್ತ

ಚಂದ್ರ ಬೆಳಕಿನ ರೀತಿ 

ಒಲವನ್ನು ತೋರಿತ್ತ

ಸೆರೆಯಾಗುತ ಮೈತಣಿಸುತ್ತ

ಒಂದಾಗಿತ್ತss                   ||೩||

 

-ಹಾ ಮ ಸತೀಶ ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ

ಚಿತ್ರ್