ಮೌನ ಬೆಳಕು

ಮೌನ ಬೆಳಕು

ಕವನ

ಮೌನ ಬೆಳಕು ಇಂದೂ

ನನಗೆ ಮುತ್ತಾ ಇತ್ತಿದೆ        || ಪ||

ಸೊಗಸಲ್ಲಿ ಬಂದು ಕೂತು

ನನ್ನನ್ನು ತಬ್ಬುತ

ಮನದೊಳಗೆ ಆಸೆಯ ಹರಡಿ

ಮೈದಡವಿ ಸೆಳೆಯುತ

ನಗುಮೊಗವ ಚೆಲ್ಲುತಿರು ಸಿಹಿಗನಸ ತುಂಬುತಲಿ

ಮೈಬಳುಕಿಸಿ ನಡುತಿರುಗಿಸಿ

ಕೈಹಿಡಿಯು ನೀನು         ||೧||

 

ಚೆಲುವಿಂದ ತಂಪುಗಾಳಿ ಒಲವನ್ನು ಚಿಮ್ಮಿಸಿ

ಸವಿಯುಡುಗೆಯನ್ನು ತೊಡಿಸಿ

ಸಿಹಿಯನ್ನು ಉಣಿಸುತ

ಮುನಿಸನ್ನು ಮುರಿಯುತ ತಾನು

ಹರುಷವನು ನೀಡುತ

ಖುಷಿಯಾಗುತ ಮನಸೆಳೆಯುತ ಹಾಡಿದೆss                         ||೨||

 

ಜೀವನದ ಕನಸನ್ನು ನನಸಾಗಿ ತುಂಬುತ

ನನಸಿನೊಳು ಹೊಸ ಬದುಕ

ಸುತ್ತೆಲ್ಲ ಹರಡುತ

ಚಂದ್ರ ಬೆಳಕಿನ ರೀತಿ ಒಲವನ್ನು ತೋರುತ

ಸೆರೆಯಾಗುತ ಮೈತಣಿಸುತ

ಒಂದಾಗುತ                   ||೩||

***

ಗಝಲ್

 

ಜೊತೆಯಾಗಲಿಲ್ಲ *ಕೊರಗದೇ* ಮುಂದೆ ಸಾಗಿದೆ

ಕೈಹಿಡಿಯಲಿಲ್ಲ *ಮರುಗದೇ* ಮುಂದೆ ಸಾಗಿದೆ

 

ಜೀವನದ ಕಾಲಚಕ್ರಗಳು ಹೀಗೆಯೇ ಏಕೆ

ಚೈತನ್ಯವು *ಕರಗದೇ* ಮುಂದೆ ಸಾಗಿದೆ

 

ಸಿದ್ಧಹಸ್ತರ ನಡುವೆಯೇ ಬದುಕುವುದು ಹೇಗೆ

ಗಂಭೀರತೆಯ *ಅರಿಯದೇ* ಮುಂದೆ ಸಾಗಿದೆ

 

ಮಧುವನ್ನು ಸವಿಯ ತಾಣವೆನ್ನುವರು ಹೌದೆ

ಬಾಳಿನರ್ಥವ *ಕೆದಕದೇ* ಮುಂದೆ ಸಾಗಿದೆ

 

ಬೇರೆಯದೇ ತಟ್ಟೆಯಲ್ಲಿ ಸವಿಯೂಟವೇ ಈಶಾ

ಕಾಣೆಯಾದವರ *ಕರೆಯದೇ* ಮುಂದೆ ಸಾಗಿದೆ

 

-ಹಾ ಮ ಸತೀಶ ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ

ಚಿತ್ರ್