ಯಕೃತ್ತಿನ ಜೀವಕೋಶಗಳಿಗೆ ಇನ್ನಿಲ್ಲ ವಿಯಕೃತ್ತಿನ ಜೀವಕೋಶಗಳಿಗೆ ಇನ್ನಿಲ್ಲ ವಿನಾಶ, ಕುತ್ತು! ನಾಶ, ಕುತ್ತು!
ಓದಿ--ಸುಧೀಂದ್ರ ಹಾಲ್ದೊಡ್ಡೇರಿ ಅವರ ನೆಟ್‍ನೋಟ---ವಿ.ಕ.ದಿಂದ
ನಮ್ಮ ದೇಹಕ್ಕೆ ಯಾವುದೇ ಒಂದು ಮದ್ದು ಒಗ್ಗುತ್ತದೆಯೆ? ಎಂಬ ಪರಿಶೀಲನೆ ನಡೆಸುವಾಗ ಅದು ‘ಲಿವರ್’ ಅಥವಾ ‘ಯಕೃತ್ತು’ವಿನ ಮೇಲೆ ಯಾವ ಬಗೆಯ ಪರಿಣಾಮಗಳನ್ನು ಬೀರುತ್ತದೆ ಎಂದು ತಿಳಿಯುವುದು ಅವಶ್ಯ. ಹೀಗಾಗಿ ಆವಿಷ್ಕಾರವಾದ ಹೊಸ ಮದ್ದಿನ ಮೊದಲ ಮಾದರಿಗಳನ್ನು ಯಕೃತ್ತಿನ ಮೇಲೆ ಪ್ರಯೋಗಿಸಿ ಅಡ್ಡ ಪರಿಣಾಮಗಳ ಬಗ್ಗೆ ದೀರ್ಘ ಕಾಲ ಅಧ್ಯನಗಳನ್ನು ನಡೆಸಲಾಗುತ್ತದೆ. ಏಕೆಂದರೆ, ನಮ್ಮ ದೇಹದ ಜೀರ್ಣಾಂಗ ವ್ಯವಸ್ಥೆಯಲ್ಲಿ ‘ಯಕೃತ್ತಿನ ಪಾತ್ರ ಬಹು ದೊಡ್ಡದು. ಪಿತ್ತರಸ ಸ್ರವಿಸುವ ಈ ನಾಳಿಯ ಗ್ರಂಥಿಯು ಜಠರದ ಬಲಭಾಗದಲ್ಲಿರುತ್ತದೆ. ನಾವು ಸೇವಿಸುವ ಆಹಾರದಲ್ಲಿನ ಕೊಬ್ಬನ್ನು ಇದು ಕರಗಿಸುತ್ತದೆ. ಗ್ಲುಕೋಸ್ ಅನ್ನು ಸಂಗ್ರಹಿಸಬಹುದಾದ ಶಕ್ತಿರೂಪವಾದ ಗ್ಲೈಕೋಜೆನ್ ಆಗಿ ಪರಿವರ್ತಿಸುತ್ತದೆ. ಪ್ರೋಟಿನ್‍ಗಳ ಆಧಾರ ಸ್ತಂಭಗಳಾದ ಅಮೈನೊ ಆಮ್ಲವನ್ನು ಇದು ರೂಪಿಸುತ್ತದೆ. ಮೂತ್ರಕ್ಕೆ ಸೇರುವ ವ್ಯರ್ಥ ಸಾಮಗ್ರಿ ಯೂರಿಯ ಅನ್ನು ಇದೇ ಉತ್ಪಾದಿಸುತ್ತದೆ. ದೇಹಕ್ಕೆ ಅಗತ್ಯವಾದ ಕೆಲವೊಂದು ರಕ್ತ ಪ್ರೋಟಿನ್‍ಗಳನ್ನು ಹಾಗೂ ಕಿಣ್ವಗಳನ್ನು ಇದು ಉತ್ಪಾದಿಸುತ್ತದೆ. ದೇಹವಿಡೀ ಪರಿಚಲಿಸುವ ರಕ್ತ ಯಕೃತ್ತಿನ ವ್ಯಾಪ್ತಿಯಡಿಯಲ್ಲಿ ಬಂದಾಗ ಜೀವಾಣು ವಿಷಗಳ ಇರುವಿಕೆಯ ಬಗ್ಗೆ ಅದು ತಪಾಸಣೆ ನಡೆಸುತ್ತದೆ. ಸಾಧ್ಯವಾದಷ್ಟು ಮಟ್ಟಿಗೆ ಅಂಥ ವಿಷಗಳನ್ನು ನಿವಾರಿಸುತ್ತದೆ. ಅಂದರೆ ನಮ್ಮ ಯಕೃತ್ತು ಸರಿಯಾಗಿ ಕೆಲಸ ಮಾಡುತ್ತಿದ್ದರೆ ದೇಹದ ಸ್ವಾಸ್ಥ್ಯವೂ ಚೆನ್ನಾಗಿದೆಯೆಂದು ಅರ್ಥ. ಓದಿ--ಸುಧೀಂದ್ರ ಹಾಲ್ದೊಡ್ಡೇರಿ ಅವರ ನೆಟ್‍ನೋಟ---ವಿ.ಕ.ದಿಂದ