ಯಕ್ಷಗಾನದ ಸವಿ ನೆನಪುಗಳ ಹೀಗೊಂದು ಗಝಲ್

ಯಕ್ಷಗಾನದ ಸವಿ ನೆನಪುಗಳ ಹೀಗೊಂದು ಗಝಲ್

ಕವನ

ಎನಿತು ಅಂದ ಚೆಂದವೋ ಈ ಕಲೆ ನೋಡಿದೊಡನೇ ಮೈಮರೆತಿದ್ದೆವಲ್ಲಾ ಸಖಿ

ಸೆಳೆತವೇನೋ ಯಕ್ಷಗಾನದ ಹೆಸರು ಕೇಳಿದೊಡನೇ ಮನದೊಳಗೆ ಹರ್ಷಿಸುತ್ತಿದ್ದೆವಲ್ಲಾ ಸಖಿ

 

ಸಂಜೆಯ ಹೊತ್ತಲಿ ಬಯಲಾಟ ವೀಕ್ಷಣೆಗೆ ಕಾದು ಕುಳಿತಿರುವ ಪರಿ ನೆನಪಿದೆಯೇ

ಚೌಕಿಯ ಒಳಗ್ಹೋಗಿ ಮೆಲ್ಲಗೆ ವೇಷಭೂಷಣಗಳ ಪ್ರೇಮದಿಂ ಸ್ಪರ್ಶಿಸುತ್ತಿದ್ದೆವಲ್ಲಾ ಸಖಿ

 

ಹಿಮ್ಮೇಳ ಮುಮ್ಮೇಳಗಳು ಅನರ್ಘ್ಯ ರತ್ನವಲ್ಲವೇ ಗೆಳತಿ 

ವಿಭಿನ್ನ ವಿನ್ಯಾಸದ ಕಿರೀಟಗಳು  ಜನ ಪ್ರಿಯವಾಗಿದ್ದವಲ್ಲಾ ಸಖಿ

 

ಪಾತ್ರಧಾರಿಗಳ ಮಾತುಗಾರಿಕೆಯು ಪ್ರಸಂಗದ ಜೀವಾಳ ತಾನೇ 

ಭಾಗವತರ ಕಾವ್ಯರೂಪದ ಹಾಡುಗಾರಿಕೆಯು ಮನಸೂರೆಗೊಂಡಿದ್ದರಲ್ಲಿ ಸಂದೇಹವಿಲ್ಲವಲ್ಲಾ ಸಖಿ

 

ವಿವಿಧ ನಾಟ್ಯ ಪ್ರಕಾರಗಳು ಮೆರುಗನು ಇಮ್ಮಡಿಸುವುದಲ್ಲವೇ

ಖಳನಾಯಕನ ಅಬ್ಬರದ ಆಗಮನವು ಕುತೂಹಲ ಹೆಚ್ಚಿಸುತ್ತಿದ್ದವಲ್ಲಾ ಸಖಿ

 

ಇರುಳಿಡೀ ನಡೆವ ಪೌರಾಣಿಕ ಸಾಮಾಜಿಕ ಪ್ರಸಂಗಗಳು ರೋಮಾಂಚನಗೊಳಿಸುವುದು 

ಭಾವಾಭಿನಯದಿಂದ ಆಡಿ ತೋರಿಸುವ ಕಥಾಭಾಗವು ಮನುಜರ ಹೃದಯ ಗೆಲ್ಲಿಸುತ್ತಿದ್ದವಲ್ಲಾ ಸಖಿ

 

ಬಾಲ್ಯದ ಸವಿನೆನಪುಗಳು ಶ್ರೀ ಯ ಬದುಕಲಿ ಎಂದು ಹೀಗೆಯೇ ಉಳಿಯಲಿ ದೇವಾ

ಸುಂದರ ದೊಡ್ಡಾಟ ಸಣ್ಣಾಟಗಳು ಕರಾವಳಿ ಜಿಲ್ಲೆಯ ಮನೆ ಮಾತಾಗಿದ್ದವಲ್ಲಾ ಸಖಿ

 

-ಪದ್ಮಶ್ರೀ ಪ್ರಶಾಂತ್

ಚಿತ್ರ ಕೃಪೆ: ಇಂಟರ್ನೆಟ್

ಚಿತ್ರ್