ಯಜಮಾನ

ಯಜಮಾನ

ಕವನ

ಬದುಕೆಂಬ ಪುಟ್ಟ ನೆನಪಿನ ಪೆಟ್ಟಿಗೆಗೆ..

ಜೀವ ಎನ್ನುವ ಬದುಕಿನ ಛಾಯೆಗೆ..

ಪ್ರೀತಿಯ ಅಪ್ಪುಗೆಯ ಮಮತೆಯ ನೆನಪೊಂದಿಗೆ...

ಬದುಕಿನ ಪ್ರತಿ ಘಳಿಗೆಗೆ ಕೈ ಹಿಡಿದು ಸಾಗಿಸಿದ "ಯಜಮಾನ "...

ಬದುಕಿನ ಪಯಣದಲಿ ನೀ ನನ್ನ ಜೊತೆಗಾರನಾಗಿ...

ನಾ ಸಾಗುವ ದಾರಿಗೆ ಬೆಳಕಿನ ದೀಪವಾಗಿ...

ತಪ್ಪಿನ ಅರಿವಿಗೆ ನೀ ನನಗೆ ಗುರುವಾಗಿ...

ಪ್ರೀತಿಯ ಮನೆಯ ಯಜಮಾನ ನಾಗಿ...

ಹಗಲು ರಾತ್ರಿ ಶ್ರಮಿಸಿ ನಮ್ಮ ಬದುಕಿಗೆ ಸುಖಿಯಾಗಿ...

ಕಷ್ಟವ ದೂರದಿ ಸರಿಸಿ, ಭಯದ ಅಂಜಿಕೆ ಹೋಗಲಾಡಿಸಿ...

ಬದುಕೆಂಬ ನನ್ನ ಪುಟ್ಟ ಜೀವನಕ್ಕೆ ನೀ ಅಂಬಿಗನಾಗಿ....

ಕೈ ಹಿಡಿದು ದಾರಿಯನ್ನು ನಡೆಸಿದೆ ನೀ ಯಜಮಾನನಾಗಿ...

ಆ ನಿನ್ನ ಪ್ರೀತಿಯ, ವಿಶ್ವಾಸಕ್ಕೆ ನಾನಿಂದು ನೆನೆದು...

ಕಣ್ಣೀರು ಒರೆಸಿದಷ್ಟು ನೆನಪಾಯಿತು ನನ್ನ ಬಾಲ್ಯದ ಆ ದಿನಗಳು ಮನದಲ್ಲಿ ಇಂದು...

ನಿನ್ನ ಜೊತೆ ಸಾಗಿದ ದಿನಕ್ಕೆ ನಮಿಸುವೆ  ಮನದಾಳದಿಂದ ಇಂದು..

ಕಣ್ಣೀರು ಒಂದೆಡೆ...ನಿನ್ನ ಪ್ರೀತಿ ಇನ್ನೊಂದು ಕಡೆ...

ನೆನಪೊಂದೆ ಶಾಶ್ವತ ನಿನ್ನ ಜೊತೆಗಿನ ಆ ದಿನಗಳು ಇಂದು...

ನನ್ನ ಬದುಕಿಗೆ ಅಂದು...

ನನ್ನದೊಂದು ಬದುಕಿಗೆ ನೀನೊಬ್ಬನೇ "ಯಜಮಾನ "...

ನಿನ್ನ ಹೆಗಲ ಮೇಲೆ ಕುಳಿತಾಗ ನನ್ನಲ್ಲೇನೋ ಸಮಧಾನ....

ಚಿಕ್ಕದೊಂದು ಬದುಕಿಗೆ ನೀ ನೀಡಿದ ದೊಡ್ಡ ಕಾಣಿಕೆ ನನ್ನಲ್ಲಿ ಜೋಪಾನ....

("ಯಜಮಾನ " ಅಪ್ಪ-ಮಗನ  ಸುಂದರ ಬಂಧನ ವರ್ಣನೆ...)

-ಉಮೇಶ್ ಮಲ್ನಾಡ್

ಚಿತ್ರ ಕೃಪೆ: ಇಂಟರ್ನೆಟ್ ತಾಣ

ಚಿತ್ರ್