ಯಡಿಯೂರಪ್ಪವನವರು ಪ್ರಜಾಸತ್ತೆಯ ನಿಜ ನಾಯಕರ ಪೈಕಿ ಒಬ್ಬರಾದಾರೇ?!

ಯಡಿಯೂರಪ್ಪವನವರು ಪ್ರಜಾಸತ್ತೆಯ ನಿಜ ನಾಯಕರ ಪೈಕಿ ಒಬ್ಬರಾದಾರೇ?!

ಬರಹ

        ದಕ್ಷಿಣ ಭಾರತದ ಪ್ರಪ್ರಥಮ ಬಿಜೆಪಿ ಸರಕಾರ ಕಕಮಕವಾಗಿದೆ. ಕಚಗುಳಿ ಸನ್ನಿವೇಶ ಬಂದಾಗಲೆಲ್ಲಾ ಅದನ್ನು ಹೈಕಮಾಂಡ್ ಮೇಲೆ ಹಾಕಿ ಪಾರಾಗುವುದು ಸಾಮಾನ್ಯವಾಗಿ ಕಾಂಗ್ರೆಸ್ ತಂತ್ರ. ಈ ತಂತ್ರಗಾರಿಕೆಯನ್ನದು, ತನ್ನ ರಾಜಕೀಯ ಸಂಸ್ಕೃತಿ ಎನ್ನುವ ಮಟ್ಟಿಗೆ ಅನುಸರಿಸುತ್ತಾ ಬಂದಿದೆ. ಸ್ಥಳೀಯ ನಾಯಕರ ಹೇಡಿತನ ಎಂದು ಇದನ್ನು ಬಿಜೆಪಿ ಹಾಗೂ ಇತರ ಪಕ್ಷಗಳು ಛೇಡಿಸಿರುವುದುಂಟು. ಆದರೆ ಆ ಪಕ್ಷದ್ದೇ ಮುಖ್ಯಮಂತ್ರಿಯೊಬ್ಬರು ಆ ಹೈಕಮಾಂಡ್‌ಗೆ ಚೆಳ್ಳೇಹಣ್ಣು ತಿನ್ನಿಸಹೋಗುತ್ತಿರುವುದು ಆಪ್ಯಾಯಮಾನ ಎನಿಸುತ್ತದೆ!


ಮತದಾರರಿಂದ ಚುನಾಯಿಸಲ್ಪಟ್ಟ ಶಾಸಕಾಂಗಕ್ಕೆ ಯಾವ ರೀತಿಯಲ್ಲೂ ನೇರವಾಗಿ ಸಂಬಂಧಪಡದ ಯಾರೋ ಒಬ್ಬರು, ಇಬ್ಬರು, ಎಲ್ಲೋ ಕುಳಿತು ರಾಜ್ಯದ ಮುಖ್ಯಮಂತ್ರಿ ಯಾರು ಎಂದು ನಿರ್ಧರಿಸುವ ಪಾಳೇಗಾರಿಕೆ ಅಸಹ್ಯವೆನಿಸುತ್ತದೆ. ಯಾರೋ ಸ್ಪೆಕ್ಟ್ರಂ ಮಾರಟ ಮಾಡಿಕೊಂಡಿದ್ದಕ್ಕೆ, ಇನ್ನೊಬ್ಬರು ಹೌಸಿಂಗ್ ಸೊಸೈಟಿಯಲ್ಲಿ ಗುಳುಂ ಮಾಡಿದ್ದಕ್ಕೆ ಸಮಾನ ತಂತ್ರಗಾರಿಕೆ ಮಾತ್ರವಾಗಿ ಒಂದು ಪಕ್ಷ ತನ್ನ ಮುಖ್ಯಮಂತ್ರಿಯನ್ನು ಚದುರಂಗದ ಪ್ಯಾದೆ ಕಾಯಿಯಾಗಿ ಬಲಿಹಾಕುವುದು ರಾಜ್ಯದ ಮತದಾರರ ಅವಹೇಳನವಾಗುತ್ತದೆ. ಕಾಂಗ್ರಸ್ ಹಾಗೂ ಇತರ ಪಕ್ಷಗಳೂ ಸೇರಿದಂತೆ ರಾಜಕೀಯ ಯಜಮಾನರುಗಳಿಗೆ ಈ ಕುರಿತು  ನೇರವಾಗಿ ಬಿಸಿಮುಟ್ಟಿಸುವ ಹುರುಡು ತೋರಿದರೆ ಯಡಿಯೂರಪ್ಪನವರು ಪ್ರಜಾಸತ್ತೆಯ ನಿಜನಾಯಕರ ಪೈಕಿ ಒಬ್ಬರಾದಾರು!

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet