ಯಡ್ಡಿಯ ಸೈಕಲ್ ಗೆಲುವು

ಯಡ್ಡಿಯ ಸೈಕಲ್ ಗೆಲುವು

ಬರಹ

ಮೊನ್ನೆ ತಾನೆ ಶಿರಾದಿಂದ ಹೊರಟು ದೊಡ್ಡಬಳ್ಳಾಪುರ ಮಾರ್ಗವಾಗಿ ಬಂದಾಗ ಮನಸ್ಸಿನಲ್ಲೊಂದು ತಣ್ಣನೆಯ ಭಾವನೆ ಮೂಡಿತು. ಬಹುಶಃ ಯಡಿಯೂರಪ್ಪನವರ ಈ ಯೋಜನೆ ಇಷ್ಟು ಬೇಗ ಯಶಸ್ವಿಯಾಗುತ್ತೆ ಎಂದು ಯಾರು ಊಹಿಸಿರಲಿಲ್ಲ.

ಹೌದು ಅಂದು ನಾ ಕಂಡಿದ್ದು ಮಳೆಯನ್ನು ಲೆಕ್ಕಿಸದೆ ಸೈಕಲ್ ತುಳಿಯುತ್ತಾ ಹೊರಟಿದ್ದ ಹೈಸ್ಕೂಲ್ ವಿದ್ಯಾರ್ಥಿನಿಯರ ದೃಶ್ಯ. ಇವರೆಲ್ಲಾ ಬಹಳ ಜೋರಾಗಿ ಕಾಲಿಗೆ ಕೆಲಸ ಕೊಟ್ಟು ಎದುಸಿರು ಬಿಡುತ್ತಾ ಮಳೆಯನ್ನು ನೂಕುತ್ತಾ ಹೊರಟಿದ್ದರು. ಇವರೆಲ್ಲಾ ಮನೆ ಸೇರುವ ತವಕದಲ್ಲಿದ್ದರು. ಯಡಿಯೂರಪ್ಪ ಅವರನ್ನು ಮಳೆ ಭರದಲ್ಲಿ ಬಹುಶಃ ನೆನಸಿಕೊಂಡಿರಬೇಕು.

ಯಡಿಯೂರಪ್ಪನವರು ಈ ಯೋಜನೆ ಜಾರಿಗೊಳಿಸುವ ಯೋಚನೆ ಸಮಾಜದ ಮುಖ್ಯವಾಹಿನಿಗೆ ತಿಳಿಸಿದಾಗ, ಇದೊಂದು ಕೇಸರಿ ಪಕ್ಷದ ಪುಕ್ಕಟೆ ಪ್ರಚಾರ ಎಂದು ಮೂಗು ಮುರಿದರೇ ಹೆಚ್ಚು. ಆದರೆ ಅವರು ಯಾರು ಇಂದು ಸೊಲ್ಲೆತ್ತುವ ಸ್ಥಿತಿಯಲಿಲ್ಲ. ಏಕೆಂದರೆ ಅವರೇ ಇದರ ಅನುಕೂಲ ಹಾಗೂ ವ್ಯಾಪಕತೆ ಅರಿತಿದ್ದಾರೆ. ಒಟ್ಟಿನಲ್ಲಿ ಹಸಿದವನಿಗೆ ರೊಟ್ಟಿ ನೀಡಿದಂತಾಯಿತು ಯಡಿಯೂರಪ್ಪನವರ ಈ ಯೋಜನೆ. ಯಾರು ಏನೇ ಹೇಳಲಿ... ಅನೇಕ ವಿದ್ಯಾರ್ಥಿಗಳು ಇಂದು ಯಡಿಯೂರಪ್ಪನವರ ರಥವನ್ನೇರಿಯೇ ಪ್ರತಿನಿತ್ಯ ಶಾಲೆ ತಲುಪುತ್ತಿದ್ದಾರೆ.

ಯಾರೋ ಕೆಲವರು ಇದನ್ನು ಬಳಸದೇ ಇರಬಹುದು. ಅಥವಾ ಅವರಿಗೆ ಅದರ ಅವಶ್ಯಕತೆ ಬೇಕಿರಲಿಲ್ಲ. ಶಾಲೆಗೆ ಮಾತ್ರ ಸೈಕಲ್ ಬಳಸದೆ ಅನೇಕ ಕಾರ್ಯಗಳಿಗೆ ಸೈಕಲ್ಗಳು ಬಳಕೆಯಾಗುತ್ತಿವೆ. ಕೆಲವೊಂದು ಗುಣಮಟ್ಟ ಇಲ್ಲದೆ ಸೈಕಲ್‌ಗಳು ಕಿರಿ ಕಿರಿ ಉಂಟು ಮಾಡಿರಬಹುದು. ಅದು ಅವರ ನಸೀಬಿನ ದುರ್ಗತಿ ಎನ್ನಬಹುದು.

ಸುಮಾರು ದೂರ ಕಾಲ್ನಡಿಗೆಯಲ್ಲಿ ಸಾಗಬೇಕಿದ್ದ ವಿದ್ಯಾರ್ಥಿಗಳು ಇಂದು ಸೈಕಲ್ ತುಳಿಯುತ್ತಾ ರಸ್ತೆಗಳಲ್ಲಿ ಸಮವಸ್ತ್ರ ಧರಿಸಿ ಹೊರಡುವ ಪರಿ ಅಮೋಘವಾದದು. ಮೊದಲೇ ಹಳ್ಳಿಗಳಲ್ಲಿ ಮುಂಜಾನೆ ೪-೫ ಗಂಟೆಗೆ ಎದ್ದು ದನಕರುಗಳ ಸೇವೆ ಮಾಡಲೇಬೇಕಾದ ವಿದ್ಯಾರ್ಥಿಗಳು ಜ್ಯಾಸ್ತಿನೇ ಇದ್ದಾರೆ. ಬಳಿಕ ಹೊಲ ಗದ್ದೆಗಳಿಗೋ ಇಲ್ಲವೋ ಮನೆಗೆ ನೀರು ತುಂಬುವ ಹೆಂಗಳೆಯರು ಒಂದೆಡೆಯಾದರೆ, ದನಕರುಗಳಿಗೆ ಹುಲ್ಲು ತರುವ ಅನಿವಾರ್ಯತೆಯಲ್ಲಿ ಹಲವಾರು ಹುಡುಗರು ಇರುತ್ತಾರೆ. ಅಲ್ಲದೆ ಮಾಡಲೇಬೇಕಾದ ಕಾರ್ಯವಾಗಿದೆ. ಇದರಿಂದಾಗಿ ಸರಿಯಾದ ಸಮಯಕ್ಕೆ ಅದನ್ನೆಲ್ಲಾ ಮುಗಿಸಿ ಶಾಲೆಗೆ ತಕ್ಕ ಸಮಯಕ್ಕೆ ಹೋಗುವುದೆಂದರೆ ತುಸು ಕಷ್ಟವೇ..

ಈ ರೀತಿಯ ಕೆಲಸ ಮುಗಿಸಿ ಶಾಲೆಗೆ ಹೊರಡಬೇಕೆಂದರೆ ಕಾಲು ಸೋತು ಮನಸ್ಸು ಮಾಯವಾಗಿರುತ್ತದೆ. ಕಡಿಮೆ ಸಮಯದಲ್ಲಿ ಹಲ್ಲುಜ್ಜುವುದೋ ಇಲ್ಲವೋ ಸ್ನಾನ ಎಂಬ ಪದವನ್ನು ಬಲವಂತವಾಗಿ ಮರೆತು ಶಾಲೆಗೆ ಹೊರಡುವ ದರ್ದು ಅವರಿಗಿರುತ್ತೆ. ಆಗ ಎರಡು ಮೂರು ಕಿಮೀಗಳು ನಡೆಯುವುದೆಂದರೆ ಶಾಲೆನೂ ಬೇಡ ಎಂಥದೂ ಬೇಡ. ಆ ಸಮಯದಲ್ಲಿ ಸೈಕಲ್ ಇದ್ದರೆ ಅವರನ ಮುಖದಲ್ಲಿ ಸ್ವಲ್ಪ ಮಂದಹಾಸ ನೋಡಬಹುದು.

ಒಟ್ಟಿನಲ್ಲಿ ಹೊಟ್ಟೆ ಹಸಿದವನಿಗೆ ಒಣಗಿದ್ದೋ ಇಲ್ಲ ಹಾಳಾಗಿದ್ದು ತಿಂದು ದೇಹಸ್ವತ್ತು ಚೇತನಗೊಳಿಸಬೇಕಾಗುತ್ತದೆ. ರೊಟ್ಟಿಯ ಜರೂರು ಅವನಿಗಿರುತ್ತೆ. ಅದಕ್ಕಾಗಿ ಅವನು ಹಾತೊರೆಯುತ್ತಾನೆ. ಅದನ್ನೇ ಕೆಲವರು ಅವರ ಯೋಚನೆ, ವಿಶ್ಲೇಷಣೆ ಹಾಗೂ ಅವರ ಸಿದ್ದಾಂತಗಳ ನೆಲದಲ್ಲಿ ಮೂಗಿಗೆ ನೇರವಾಗಿ ನೋಡುತ್ತಾರೆ. ವಿವರಣೆ ನೀಡ್ತಾರೆ. ಬುದ್ದಿಜೀವಿ ಎನ್ನುವ ವ್ಯಕ್ತಿಗೆ ಅವನ ಸಿದ್ದಾಂತದ ನೆಲೆಯಲ್ಲಿ ವಿಭಿನ್ನವಾಗಿ ಗಮನಿಸಬಹುದು. ಮಾನವಿಕ ನೆಲೆ ಮೊದಲಾಗಿ ಸಿದ್ದಾಂತ ನಂತರವಾದವನಾದ ಸಾಧಾರಣ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ವ್ಯಕ್ತಿಗೆ ಸೈಕಲ್ ವಿತರಣೆ ಉತ್ತಮ ಎಂದೆನ್ನಿಸಬಹುದು.

ಉತ್ತರ ಕರ್ನಾಟಕದಲ್ಲಿ ಶಾಲೆಗಳು ಸಮೀಪದಲ್ಲೇನು ಇರುವುದಿಲ್ಲ. ಅಥವಾ ಮಲೆನಾಡು ಪ್ರದೇಶವಾದ ಕೊಡಗು ಮಡಿಕೇರಿ ಅಂತಹ ದಟ್ಟರಣ್ಯಗಳಲ್ಲಿ ಶಾಲೆಗಳಿಗೆ ನಡೆದೇ ಸಾಗಬೇಕಾಗಿದೆ. ಇಂತಹ ಭಾಗಗಳಲ್ಲಿ ಕಾಡಿನಲ್ಲಿ ಗುಡ್ಡದ ಬುಡದಲ್ಲಿಯೇ ಶಾಲೆಗಳಿದ್ದರೂ ಹಿತ್ತಲ ಪ್ರದೇಶಕ್ಕೆ ಬರಲು ಕಿಮೀಗಟ್ಟಲೇ ಸುತ್ತಿ ಬರಬೇಕಾಗುತ್ತೆ. ಅವರಾದರು ಯಡಿಯೂರಪ್ಪನವರನ್ನು ನೆನಸಿಕೊಳ್ಳುದೆ ಬಿಟ್ಟಾರೇನು.

ಎನಿ ಹ್ಯಾವ್... ಯಡಿಯೂರಪ್ಪನವರೇ ನಿಮ್ಮ ಕನಸಿನ ಯೋಜನೆ ಖ್ಯಾತಿಯಂತೂ ಆಗಿದೆ. ಅದಕ್ಕೇ ಇರಬೇಕು ಚುನಾವಣೆ ಸಮಯದಲ್ಲಿ ನಿಮ್ಮ ಕಮಲದ ಸೈಕಲ್‌ನಲ್ಲಿ ಬಂಗಾರಪ್ಪನವರ ಸೈಕಲ್ ಪಂಚರ್‍ ಆಗಿ ಕೈಕೊಟ್ಟಿದ್ದು....

- ಬಾಲರಾಜ್ ಡಿ.ಕೆ