ಯಥೇಚ್ಛವೋ ಯಥೇಷ್ಟವೋ?

ಯಥೇಚ್ಛವೋ ಯಥೇಷ್ಟವೋ?

Comments

ಬರಹ

 

ನಮ್ಮಲ್ಲಿ ಬೇಕಾದಷ್ಟು , ಧಂಡಿಯಾಗಿ ಎಂಬ ಅರ್ಥದಲ್ಲಿ ಯಥೇಚ್ಛ ಶಬ್ದ ಬಳಸುತ್ತೀವಿ.

 

ಆದರೆ ಇದೇ ಅರ್ಥದಲ್ಲಿ ಯಥೇಷ್ಟ ಶಬ್ದ ಬಳಸಿದ್ದು ಇವತ್ತು ಓದಿದೆ.

 

 

ಯೋಚನೆ ಮಾಡಿ ನೋಡಿದಾಗ ಎರಡೂ ಸರಿ ಇರಬಹುದು ಅಂತ ಅನ್ನಿಸುತ್ತದೆ.

 

ಯಥೇಚ್ಛ - ಯಥಾ ಇಚ್ಛಾ : ಇಚ್ಛೆಯಿದ್ದಷ್ಟು ಅರ್ಥಾತ್ ಬೇಕಾದಷ್ಟು

 

ಯಥೇಷ್ಟ - ಯಥಾ ಇಷ್ಟ : ಇಷ್ಟವಿದ್ದಷ್ಟು ಅರ್ಥಾತ್ ಬೇಕಾದಷ್ಟು

 

ಅಲ್ಲವೇ?

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet