ಯಶವಂತಪುರ ಮೇಲ್ಸೇತುವೆ

ಯಶವಂತಪುರ ಮೇಲ್ಸೇತುವೆ

ಬರಹ

ಕಡೆಗೂ ರಾಷ್ಟ್ರೀಯ ಹೆದ್ದಾರಿ-೪ ಯಶವಂತಪುರದ ಬಳಿ ನಿರ್ಮಿಸಲಾಗುತ್ತಿದ್ದ ಫ್ಲೈಓವರ್ ಸಿದ್ದವಾಗಿ ಉಪಯೋಗಕ್ಕೆ ಲಭ್ಯವಿದೆ. 

yeshwantpur

ನೆನ್ನೆ ನಾನು ಹರಿ ಐ.ಐ.ಎಸ್.ಸಿ ಬಳಿ ಹೊಗುತ್ತಿರಬೇಕಾದರೆ ತೆಗೆದ ಚಿತ್ರ. ಮುಖ್ಯಮಂತ್ರಿ ಯಡಯೂರಪ್ಪ ನೆನ್ನೆ ಇದನ್ನು ಉದ್ಘಾಟನೆ ಮಾಡಿದರು. 

ಏಷ್ಟೋ ವರ್ಷಗಳು ಉರುಳಿಹೋದವೋ ತಿಳಿಯದು ಇದಕ್ಕೆ. ಹಾಗೆಯೇ ಕೆಲಸವೂ ಇನ್ನೂ ಮುಗಿದಿಲ್ಲ. ಜನರು ಇಂತಹ ಕೆಲಸಗಳು ನೆಡೆಯುವಾಗ ಉಪಯೋಗಿಸುವ ಪರ್ಯಾಯ ಮಾರ್ಗಗಳಿಗೆ ಟಾರ್ ಅನ್ನಾದರೂ ಹಾಕಿ ಅಲ್ಲಿ ಸುಲಭವಾಗಿ ಸಂಚಾರವ್ಯವಸ್ಥೆ ಅನುಕೂಲ ಮಾಡಿಕೊಡೋದಲ್ಲವೇ. ಆ ಅಭ್ಯಾಸವೇ ನಮ್ಮಲ್ಲಿಲ್ಲವೇನೋ. 

ಕೆಲಸ ಮುಗಿದ ಬಳಿಕವೂ ಫ್ಲೈಓವರ್ ಅಕ್ಕಪಕ್ಕದ ರಸ್ತೆಗಳಲ್ಲಿ ಗುಂಡಿಗಳನ್ನು ಹುಡುಕುವುದೇ ಬೇಡ.. ಹೆಜ್ಜೆ ಇಟ್ಟಲ್ಲೆಲ್ಲಾ ಗುಂಡಿಗಳೇ.  ಇವುಗಳನ್ನು ಮರೆಯದೇ ಬೇಗ ಸರಿ ಮಾಡ್ತಾರಲ್ಲಾ?

underpass

ಕೊನೆ ಕೊಸರು: ಇದೆಲ್ಲದರ ಜೊತೆ ಮತ್ತೊಂದು ತಮಾಷೆ.. ಬೆಂಗಳೂರಿನಲ್ಲಿ ಸ್ವೈನ್ ಫ್ಲೋ(ಹಂದಿ ಜ್ವರ) ಬಂತೆ? ಈ ಪ್ರಶ್ನೆ ಮೂಡಿದ್ದು ನಮ್ಮ ಟ್ರಾಫಿಕ್ ಫೋಲೀಸರು ಧರಿಸಿದ್ದ ಮಾಸ್ಕ್ ನೋಡಿ. ಅಮೇರಿಕಾದಲ್ಲಿ ಜನರಿಗೆ ಹಂಚಲಾದ ಹಸಿರು ಬಣ್ಣದ ಮಾಸ್ಕ್ ಬೆಂಗಳೂರಿನ ಟ್ರಾಫಿಕ್ ಫೋಲಿಸರ ಮುಖದ ಮೇಲೆ ನೋಡಿ ಆಶ್ಚರ್ಯವಾಯ್ತು. ಆ ಸಣ್ಣ ಮಾಸ್ಕ್ ಬೆಂಗಳೂರಿನ ವಾಯುಮಾಲಿನ್ಯದಿಂದ ನಿಜವಾಗಿಯೂ ಅವರನ್ನು ಕಾಪಾಡುತ್ತದೆಯೇ?

ಚಿತ್ರ: ಹರಿ