ಯಶುಪ್ರಿಯರ ಐದು ಹನಿಗಳು
ಕವನ
ಮನಸ್ಸು
ಅವನು ಸಿದ್ಧನಿರಲಿಲ್ಲ
ತಪ್ಪೊಪ್ಪಿ ಬಾಗಲು..
ಟೀಕೆಗಳು ಬರುತ್ತಲೇ
ಮುಚ್ಚಿದ ಬಾಗಿಲು.!
ಸಾಮರಸ್ಯ
ಒಗಟು ಒಗಟಾಗಿರಲಿ
ಅದೇ ಅದರ ಸವಿಸ್ವಾರಸ್ಯ!
ಒರಟು ಒಳಗಿಂದ ಹೊರಗಿರಲಿ
ಬೆಸೆದು ಭಾವಗಳ ಸಾಮರಸ್ಯ!!
ತಪ್ಪು
*ಅವರೇಕೆ ನಿನ್ನ ದೂರುವರು*
*ನಿನ್ನದೇನೋ ತಪ್ಪಿರಬೇಕು*
*ಇಲ್ಲವೆಂದಾದರೆ ಅವರ ಲೆಕ್ಕ*
*ಎಲ್ಲೋ ತಪ್ಪಿರಬೇಕು!!*
ಅಂತರ
*"ಗೆಲ್ಲಲೇ ಬೇಕೆಂಬ*
*ಕೆಚ್ಚಿರುವವನಿಗೂ*
*ಸೋಲಿಸಲೇ ಬೇಕೆಂಬ*
*ಹುಚ್ಚಿರುವವನಿಗೂ*
*ಅಜಗಜಾಂತರವಿದೆ"*
*ದೇವರು ಮತ್ತು ಅಹಂ
ಸೋತಾಗ ದೇವರ ದೂರುವಿರಿ
ಬೇಕಾದಾಗ ಮಂಡಿಯೂರುವಿರಿ
ಅವನು ಕೊಟ್ಟರೆ ಮರೆಯುವಿರಿ
ತಾನೇ ಸಾಧಿಸಿದೆನೆಂದು ಮೆರೆಯುವಿರಿ
- *ಯಶುಪ್ರಿಯ ಪಕ್ಷಿಕೆರೆ*
ಚಿತ್ರ್
![](https://saaranga-aws.s3.ap-south-1.amazonaws.com/s3fs-public/drop.jpeg)