ಯಶೋಧಾನಂದನ
ಬರಹ
ಮಾಧವನ ಜನನದಿಂದ
ಭುವನ ಬೃಂದಾವನ./೧/.
ಕೇಶವನಾಗಮನದಿಂದ
ಚಂದನಂದನವನ./೨/.
ಕಂಸಜರಾಸಂಧರಿಂದ
ಕಂಪಿಸಿರಲು ಅವನಿ ಜನ./೩/.
ಧರೆಯನುಳಿಸಲೆಂದು ಬಂದ
ದೇವಕೀನಂದನ./೪/.
ಅಶರೀರವಾಣಿಯಿಂದ
ಕದಡಿರಲು ಕಂಸ ಮನ./೫/.
ಕ್ರೋಧಾವೇಷದಿಂದ
ವಸುದೇವಕಿ ಬಂದನ./೬/.
ಆರ್ಬಟಿಸುವ ಕಂಸನಿಂದ
ಹಸುಳೆಯರ ನಿಧನ./೭/.
ದೇವಕಿಯ ಗರ್ಭದಿಂದ
ದೇವಹರಿಯ ಜನನ./೮/.
ಕಂಸನಾ ಸೆರೆಯಿಂದ
ಗೋಕುಲಕೆ ಪಯಣ./೯/.
ಯಶೋದಾನಂದರಿಂದ
ಗೋಪಾಲನ ಪಾಲನ./೧೦/.
ಹಾಲಾಹಲದಿಂದ
ಪೂತನಿಯ ಮರಣ./೧೧/.
ರಾಕ್ಷಸರ ಮಾಯೆಯಿಂದ
ವ್ಯರ್ಥವಾದ ಪ್ರಯತ್ನ./೧೨/.
ಬೆಳೆಯುತಿರುವ ಕೃಷ್ಣನಿಂದ
ಕಂಸ ಚಿಂತಾಕ್ರಾಂತನ./೧೩/.
ಗೋಕುಲದಾ ಮನೆಗಳಿಂದ
ಗೋವಿಂದನ ಕಳ್ಳತನ./೧೪/.
ಗೋಪಿಯರ ಗುಂಪಿನಿಂದ
ಗೋಪಾಲನ ತುಂಟತನ./೧೫/.
ತಾಯಿಗೇ ಬಾಯಿಯಿಂದ
ವಿಶ್ವರೂಪ ದರ್ಶನ./೧೬/.
ಯಮುನಾ ನದಿಯಿಂದ
ಕಾಳಿಂಗ ಮರ್ದನ./೧೭/.
ಬಲರಾಮಕೃಷ್ಣರಿಂದ
ಮಥುರಾಕ್ರಮಣ./೧೮/.
ವೀರಬಾಲಕೃಷ್ಣನಿಂದ
ಕಂಸನಾ ದ್ವಂಸನ./೧೯/.
ದೇವಕೀನಂದನಿಂದ
ಅಮ್ಮನಾಲಿಂಗನ./೨೦/.
ಅಹೋರಾತ್ರ.