ಯಾಂತ್ರಿಕತೆಯೆ ನೀನೆ ನಿತ್ಯಂ
ಕವನ
ಯಾಂತ್ರಿಕತೆಯೆ ನೀನೆ ನಿತ್ಯಂ
------------------------------
ಅನುದಿನಂ ಪೊಸದಿನಂ ಪೊಸರಾತ್ರಿಯುಂ ಕಾಣ್ವೆ.
ಪಳೆದಿನಂ ಪಳೆರಾತ್ರಿಯುಂ ಮರೆಯುತಲೆ ಇರುವೆ.
ನಡೆದು, ನುಡಿದು, ನೋಯ್ದು, ನಲಿದು ಅಳಿಯುತಿರುವೆ ಸಲ್ಪಂ.
ಅರಿಯದೆಯೆ ನಾ ಪಾಲಿಸುತಿಹೆ ದಿನ, ಈ ಬಾಳ ಕಲ್ಪಂ.
ಯಾಂತ್ರಿಕತೆಯ ಮಹಾಮಾಯೆ ಬಿಡದೆ ಎನ್ನ ಅಪ್ಪಿರಲು,
ಅದರ ಅಂಕೆಯೊಳ್ ನಾನು ದಿನವ ನೂಕುತಿರಲು,
ಇದರ ಕೈಪಿಡಿತದಿಂದೊರಬರಲು ಸಾಧ್ಯವೇನೆಂದು,
ಚಿಂತಿಸಲಾಗ ಪೊಳೆಯಿತೆನಗೆ ಗುಪ್ತ ಸತ್ಯವೊಂದು.
ಯಾಂತ್ರಿಕತೆಯು ಬರಿಯೆ ಎನ್ನನೋರ್ವನೆ ಪಿಡಿದಿಲ್ಲ,
ವಿಶ್ವ ಮಹಾ ಪರಿಧಿಯನೆ ಅದು ಪರ್ವಿಸಿಹುದದೆಂದು.
ಇಂಗದಿರನು ಭ್ರಮಿಸಿಹನು ಇಳೆಯ ಸುತ್ತಲು.
ಇಳೆಯು ಪರಿಭ್ರಮಿಸಿಹುದು ರವಿಯ ಸುತ್ತಲು.
ಅಲೆಗಳೆದ್ದಿಹುದು ತೇಲಿ ಕಡಲೆದೆಯ ಮೇಲೆ.
ಅಲೆದಲೆದು ಬಂದಿಳಿದಿಹುದು ಭೂಶಿರದ ಮೇಲೆ.
ಹೊರಗಮನಕೆಲ್ಲೆಲ್ಲೂ ಸ್ವಂತತ್ರ ಸಂಚಲನ.
ಅಡಗಿಹುದೊಳಗೆ ಯಂತ್ರಿಕತೆಯ ಗುಪ್ತ ಚರಣ.
ಅಹಿರ್ನಿಶಿಯು ನಡೆಯುತಿಹುದೀ ವಿಶ್ವವ್ಯಾಪಾರ.
ಸರ್ವ ಘಟನೆಗಳಿಗೂ ಯಾಂತ್ರಿಕತೆಯೆ ಕರ್ತಾರ.
ನಮಿಸುವೆನು ಯಾಂತ್ರಿಕತೆಯೆ ನೀನೆ ನಿತ್ಯಂ.
ನಡೆಯುವೆನು ನಿನ್ನೆಂದೆ ನೀನೆ ಸರ್ವಂ.
- ಚಂದ್ರಹಾಸ (೧೮ - ೦೫ - ೨೦೧೨)
Comments
ಉ: ಯಾಂತ್ರಿಕತೆಯೆ ನೀನೆ ನಿತ್ಯಂ
In reply to ಉ: ಯಾಂತ್ರಿಕತೆಯೆ ನೀನೆ ನಿತ್ಯಂ by nanjunda
ಉ: ಯಾಂತ್ರಿಕತೆಯೆ ನೀನೆ ನಿತ್ಯಂ