ಯಾಕೋ ತಿಳಿಯದೇ.............?
ಕವನ
ತೆವಳುವ ಕಾಲು ನಡೆಯಲು ಕಲಿತರೂ
ಬದುಕ ಬವಣೆಗಳ ಜಂಜಾಟದಲ್ಲಿ
ಮತ್ತೆ ತೆವಳುತ್ತಿವೆ ಯಾಕೋ ತಿಳಿಯದು...
ಹೂವಿನಂತೆ ನಗು ತುಂಬಿದ ಮೋಗವೇಕೊ
ಬಾಡಿದ ಪುಷ್ಪಗಳಂತೆ ಮುದುಡಿ ಹೋಗಿ
ಅರಳುವುದನ್ನು ಮರೆತಿದೆ ಯಾಕೋ ತಿಳಿಯದು....
ಹಾಲಿನಂತಿದ್ದ ಮನಸ್ಸು ಥಟ್ ನೆ ಬದಲಾಗಿ
ವಿಷಕಾರುವ ಹಾವಿನಂತೆ ಬುಸುಗುಟ್ಟುತಿದೆ
ಯಾಕೋ ತಿಳಿಯದು........
ಕಾಲದ ಚಕ್ರದಲ್ಲಿ ತಿರುಗವ ಬದುಕಿದು
ಬಾಲ್ಯದ ಜೀವನ ಬೇಕೆನಿಸುವ ಹೊತ್ತಿಗೆ
ಚಕ್ರದ ಅಡಿಯಲ್ಲಿ ಸಿಲುಕಿ ನಜ್ಜುಗುಜ್ಜಾಗಿರುವ
ಬದುಕು ಮತ್ತೆ ಬರುವುದೇ ಆ ಕಾಲ.........ಯಾಕೋ ತಿಳಿಯದು........?
Comments
ಉ: ಯಾಕೋ ತಿಳಿಯದೇ.............?
In reply to ಉ: ಯಾಕೋ ತಿಳಿಯದೇ.............? by gopaljsr
ಉ: ಯಾಕೋ ತಿಳಿಯದೇ.............?