ಯಾಕ್ಲಾ ಮಗ ಟೆನ್ಷನ್?

ಯಾಕ್ಲಾ ಮಗ ಟೆನ್ಷನ್?

ನನಗೆ ಗೊತ್ತಿತ್ತು ನನ್ನ ಕೈಯಲ್ಲಿ ಸಾಧ್ಯ ಆಗಲ್ಲ, ನನ್ನ ಹತ್ರ ಮಾಡೋದಿಕ್ಕೆ ಆಗಲ್ಲ ಅಂತ ಆದ್ರೂ ಮನೆಯವರ ಒತ್ತಾಯಕ್ಕೆ ಒಪ್ಪಿ ಬೇಕಾಗದ ವಿಚಾರವನ್ನು ಅಪ್ಪಿ ಅಂತೂ ಇಂತೂ ಬಿ ಕಾಂ ಗೆ ಸೇರಿಯೇ ಬಿಟ್ಟೆ...ನನಗೆ ನಿಜವಾಗಲೂ ಬೇಡವಾದ ಕಾಂಬಿನೇಷನ್ ಅದು ಆದ್ರೂ ಮನೆಯವರು ಹೇಳಿದ್ರು ನಮ್ಮನ್ನು ಈ ಭೂಮಿಗೆ ತಂದು ಬಿಟ್ಟು ಬೆಳೆಸಿದ ಅವರ ಮಾತನ್ನ ಕೇಳಬೇಕು ಅನ್ನೋದು ನನ್ನ ಅಭಿಪ್ರಾಯ, ಕೊನೆಗೂ ಬಿ ಕಾಂ ಏನೋ ಮುಗಿತಾ ಬಂದಿತ್ತು ಕ್ಲಾಸ್ ಕೇಳಿದ್ದು ಅಷ್ಟರಲ್ಲೇ ಇತ್ತು ಪಾಠ ಕೇಳಿದ್ದಕ್ಕಿಂತ ನಿದ್ದೆ ಮಾಡಿದ್ದೆ ಹೆಚ್ಚು, ಕ್ಲಾಸ್ ಗೆ ಹೋಗಿದ್ದಕ್ಕಿಂತ ಬಂಕ್ ಹಾಕಿದ್ದೇ ಜಾಸ್ತಿ ಒಟ್ಟು ಬಲವಂತಕ್ಕೆ ಬಸ್ ಹತ್ತೋ ಕೆಲಸ ನನ್ನಿಂದ ದಿನನಿತ್ಯ ಆಗ್ತಿತ್ತು...ಕೊನೆಗೆ ಫೈನಲ್ ಇಯರ್ ನ ಲಾಸ್ಟ್ ಸೆಮ್ ಎಲ್ಲರೂ ತಲೆ ಕೆಳಗೆ ಮಾಡಿ ಓದುತ್ತಿದ್ರು ನನ್ನ ಹತ್ರ ಮಾತ್ರ ಪುಸ್ತಕ ಅಕ್ಕಪಕ್ಕದ ಟೇಬಲ್ ನಲ್ಲೂ ಸುಳಿತಾಯಿರಲಿಲ್ಲ, ಆದ್ರೂ ಏನಾದ್ರು ಮಾಡ್ಬೇಕು ಬಂದ ತಪ್ಪಿಗೆ ಬ್ಯಾಕ್ ಉಳಿಸಿಕೊಳ್ಳದೆ ಪಾಸ್ ಆದ್ರೆ ಟೆನ್ಷನ್ ಇರಲ್ಲ ಅಂತ ಒಂದು ಸ್ವಲ್ಪ ಮಮ ಅಂತ ಪುಸ್ತಕ ಮುಟ್ಟಿ ತಲೆ ಕೆಡಿಸಿಕೊಂಡು ಓದಿದೆ ಓದಿ ಓದಿ ಓದಿ ಓದಿ ಗುಡ್ಡೆ ಹಾಕಿ ಕೊನೆಗೂ ಎಕ್ಸಾಂ ಬರೆದೆ 6 ಸಬ್ಜೆಕ್ಟ್ ಪಾಸ್ ಆಗ್ತೀನಿ ನನ್ನ ನಂಬಿಕೆ...ಪಾಸ್ ಆದ್ರೆ ಬ್ಯಾಂಕಿಂಗ್ ಎಂಬಿಎ ಎಲ್ಲಾ ಮಾಡಬೇಕೇನೋ ಅನ್ನೋ ಭಯ, ನಂಗೆ ಇಷ್ಟ ಇದ್ದಿದ್ದು ನಾಟಕ, ಸಿನಿಮಾ ಆ ಕ್ಷೇತ್ರ ಬರೀ ಕನಸಾಗುತ್ತೇನೋ ಎನ್ನುವ ಆತಂಕ, ತಲೆಯಲ್ಲಿ ಒಂದು ಕಡೆ ಪತ್ರಿಕೋದ್ಯಮದ ಕಡೆ ಒಲವು, ಬರವಣಿಗೆಯ ಮೇಲೆ ಪ್ರೀತಿ ಇವೆಲ್ಲಾ ನನ್ನನು ಕೈ ಕಟ್ಟಿ ಕುಳಿತುಕೊಳ್ಳುವಂತೆ ಮಾಡ್ತಿತ್ತು, ಕೊನೆಗೂ ರಿಸಲ್ಟ್ ಬಂತುವಿಧಿಯ ಕೈವಾಡ ಬೇರೆ ಇತ್ತು ನಾನ್ ಒಂದು ಸಬ್ಜೆಕ್ಟ್ ನಲ್ಲಿ ಫೇಲ್ ಆಗಿದ್ದೆ, ಒಂದು ವರ್ಷ ನಂತರ ನನಗೆ ಪರೀಕ್ಷೆ ಅಲ್ಲಿ ತನಕ ಕೈಗೆ ಕೆಲಸ ಇರ್ಲಿಲ್ಲ, ಹಾಗಂತ ಫೇಲ್ ಆಗಿದ್ದಕ್ಕೆ ನಾನ್ ಟೆನ್ಷನ್ ಆಗಲೂ ಇಲ್ಲ ಸೀದಾ ಒಂದು ಲೋಕಲ್ ಚಾನಲ್ ಗೆ ಹೋದೆ ನನ್ನ ನನ್ನ ಡೈರೆಕ್ಟ್ ಸಂದರ್ಶನ ಮಾಡಿದ್ರು ನನ್ನ ಬರವಣಿಗೆ ನೋಡಿ ಒಪ್ಪಿಕೊಂಡು ನನ್ನನು ಸಹಿಸಿಕೊಂಡು ಮೀಡಿಯಾ ಪೀಲ್ಡ್ ನಲ್ಲಿ ಕೆಲಸ ಕೊಟ್ರು, ಆಮೇಲೆ ನನಗೆ ಆತ್ಮತೃಪ್ತಿಯಾಗಿರುವ ಕೆಲಸವನ್ನ ಯಾರ ಹಂಗಿಲ್ಲದೆ ನಾನೇ ಹುಡುಕಿಕೊಂಡು ನನ್ನ ಪ್ರೀತಿಯ ಪತ್ರಿಕೋದ್ಯಮದ ದೃಶ್ಯ ಮಾಧ್ಯಮಕ್ಕೆ ನನ್ನ ದರ್ಶನ ಪಡೆದೆ ಯುನಿವರ್ಸಿಟಿ ಪರೀಕ್ಷೆಯಲ್ಲಿ ಫೇಲ್ ಆಗಿರಬಹುದು ಆದ್ರೆ ಜೀವನ ಅನ್ನೋ ಪರೀಕ್ಷೆನಲ್ಲಿ ಏಳು ಬೀಳುಗಳ ನಡುವೆಯೂ ಪಾಸ್ ಆಗ್ತಿದಿನಿ ಅಂನ್ನೋದೆ ಸಂತೋಷ ಹಾಗೂ ನಗ್ನ ಸತ್ಯ, ಜೀವನದಲ್ಲಿ ಒಂದು ಕಡೆ ಸೋಲಬಹುದು ಆದ್ರೆ ಮತ್ತೊಂದು ಕಡೆ ನಮಗೆ ಅನಿರೀಕ್ಷಿತವಾದ ಜಾಗದಲ್ಲಿ ಗೆಲುವು ಇದ್ದೆ ಇರುತ್ತೆ ಆದ್ರೆ ನಮ್ಮನ್ನು ನಾವೇ ಹುಡುಕುವ ಕೆಲಸ ಮಾಡ್ಬೇಕು ಅಷ್ಟೇ.. ಎಲ್ಲದಕ್ಕೂ ಮೊದಲು ನಮ್ಮನ್ನು ನಾವು ನಂಬಬೇಕು ಆಮೇಲೆ ಇಡೀ ಜಗತ್ತು ನಮ್ಮನ್ನು ನಂಬಬೇಕು...ಸೋತಿದ್ದಿಕ್ಕೆಲ್ಲ ಯಾಕ್ಲಾ ಮಗ ಟೆನ್ಷನ್ ಗೆಲ್ಲೋಣ ಬಿಡೋಲೋ...- ಬರೆದವನು ನಾನೇ...