ಯಾಚನೆ, ಯಾತನೆ (ಘಜಲ್)
ಘಜಲ್ ನ ಕಲ್ಪನೆಯಲ್ಲಿ ಬರೆದ ಜೋಡಿ ಪದ್ಯಗಳಿವು (1990). ಘಜಲ್ ರೂಪುರೇಷೆ ಹೇಗಿರಬೇಕು, ಯಾವ ನಿಯಮಕ್ಕೊಳಪಟ್ಟಿರಬೇಕು ಇತ್ಯಾದಿಗಳ ತಿಳುವಳಿಕೆ ಇರದಿದ್ದರೂ (ಈಗಲೂ ಇಲ್ಲಾ!) , ಶರಾಬು, ನಲ್ಲೆ, ನೋವು, ವಿಷಾದ, ಪ್ರೇಮ ಇತ್ಯಾದಿಗಳ ಮತ್ತೇರಿಸುವ ಹೂರಣವಂತೂ ಇರುತ್ತದೆಂದು ಕೆಲವು ಹಿಂದಿ ಘಜಲ್ ಕೇಳಿದ್ದರ ಕಾರಣದಿಂದ ಸ್ವಲ್ಪ ಅನುಭವವಾಗಿತ್ತು. ಅದನ್ನೆ ಬಳಸಿ ರಚಿಸಿದ ಗೀತೆಗಳಿವು.
ಮೊದಲನೆಯದು 'ಯಾಚನೆ', ಶರಾಬಿನ ನಷೆಯಲ್ಲೆ ಪ್ರಿಯತಮೆಯ ಪ್ರೇಮಕಾಗಿ ಯಾಚಿಸುತ ಮತ್ತಷ್ಟು ವಿರಹ ಹಾಗೂ ಶರಾಬಿನ ಧಾರೆ ಸ್ಪುರಿಸುವ ಚಿತ್ರಣ. ಬರಿ ಯಾಚನೆಯ ಗೋಳಷ್ಟೆ ಇಲ್ಲಿ ಅನುರಣಿತ.
01. ಯಾಚನೆ:
_____________________
ಪ್ರೇಮದ ಬಟ್ಟಲು ಬರಿದಾಗಿದೆ
ಸಖಿ
ತುಂಬಿಸು ಬೇಗ
ನಿನ್ನ ಪ್ರೀತಿಯ ಶರಾಬು..
ಕಾತರಿಸಿ ಕಾದಿಹ
ಈ ಚಂದ್ರಿಕೆಯ ಇರುಳಲ್ಲಿ
ಮಧು ಪಾತ್ರೆಯಾ
ಬಗ್ಗಿಸು
ನಿಷೆಗೆ
ನಶೆಯೇರಿಸು
ಹಾಗಾದರೂ ನಂದಲಿ
ಈ ವಿರಹದಾ ಮತಾಪು!
ಗಾಢರಾತ್ರಿಯಲಿ ತಂಗಾಳಿ
ನಿನ್ನ
ನೆನೆದು ಅಳುತಲಿದೆ
ಎಣ್ಣೆಯಿರದ ಹಣತೆಯಂತೆ!
ಆರುವಂತಿಲ್ಲ ಸಖಿ ಹಣತೆ
ನಿನ್ನ
ಕಣ್ಸುಧೆಯನ್ನೇ ಸುರಿಸು
ಉರಿವ ಬೆಳಕಿಗೂ ಮತ್ತೇರಿಸು;
ಹೀಗೆ ದೂರ ನಿಂತೆ
ಬರಿ ನೋವ ಸುರಿವೆಯಲ್ಲ
ಬದಲು
ಹಾಳು ಶರಾಬಾದರೂ ಸುರಿ!
ಗುಲಾಬಿ ದಳಗಳ ಮೆತ್ತೆಗೆ
ಸವರಿ
ಮುತ್ತಿಕ್ಕುತಿದೆ ದುಂಬಿ
ಸಖಿ
ಮತ್ತೇರಿ ಅಳುತಿದೆ ಮೋಡಾ
ಸಿಹಿಯ ನೆನಪಿಗೋ ಏನೋ
ತುಟಿ
ಬಿರುಕು ನೆಲವಾಗಿದೆ
ಕರಗಿದ ಮೋಡಗಳಂತೂ
ತಂಪೆರೆದಿಲ್ಲ
ಬಿಸಿ ಚುಂಬನವಾದರೂ ನೀಡು
ಹಾಳು ಶರಾಬಾದರೂ ಕೊಡು!
ಯಾಚಿಸಿ ಯಾಚಿಸಿ ಸಾಕಾಗಿ, ಸೋಲುಂಡ ಯಾಚನೆ ದಿಕ್ಕುತಪ್ಪಿದಂತಾಗಿ 'ಯಾತನೆ'ಯ ಹಾದಿ ಹಿಡಿದಾಗಿನ ದುಃಖ, ವೇದನೆ, ವಿರಹ - ಮತ್ತೆ ಶರಬಿನ ಮೊರೆಹೊಕ್ಕು ಎಲ್ಲ ಮರೆಯುವ ಹವಣಿಕೆ, ವಿದ್ರಾವಕ ಯಾತನೆಯಾಗಿ ಪ್ರಕಟಗೊಂಡ ರೀತಿ ಇಲ್ಲಿದೆ - 'ಯಾತನೆ'ಯಲ್ಲಿ.
2. ಯಾತನೆ
_________________________
ಅಂದು
ನೀನೆ ಸುರೆಯಾಗಿದ್ದೆ
ನಾ ಮನಸಾರೆ ಹೀರಿದ್ದೆ
ಆ ಸುರೆಯೆದುರು ಈ ಶರಾಬೇನು?
ಸೆರೆಯಾಗಿಸಿ ಸುರೆಗೆ
ನೀ ನನ್ನ ಕೈ ಬಿಟ್ಟೆ
ಅಯ್ಯೋ..
ನೆನಪುಗಳ ಶೂಲ ಇರಿಯುತಿದೆ
ಗೆಜ್ಜೆಯ ಇನಿದನಿ ಕೆಣಕುತಿದೆ
ಮತ್ತೆ ದೂರಾಗುತಿಹೆಯಲ್ಲ...
ಹೋಗುವ ಮುನ್ನ
ಹಾಳು ಶರಾಬಾದರು ಸುರಿ!
ನಿನ್ನ
ಮರೆಯಲೆಂದೇ
ಹೀರುತ್ತೇನೆ ಶರಾಬು -
ಬಟ್ಟಲೊಳಗೂ ಬರುತ್ತಿ, ನೀನೆಂತಾ ಕ್ರೂರಿ?
ನಿನ್ನೆ ಕುಡಿದು
ಅಬ್ಬಾ! ಅನ್ನುವುದಕ್ಕಿಲ್ಲ
ಎದೆಯಲಿ ನುಗ್ಗಿ
ನೆನಪುಗಳ ಕಲ್ಲರೆಯುತ್ತಿ..
ನೋಡು ಸಖಿ,
ಕೈಯೇಕೋ ನಡುಗುತಿದೆ
ಬಟ್ಟಲು ಬರಿದಾಗುತಿದೆ
ಖಾಲಿ ಬಟ್ಟಲ ತುಂಬಾ
ಮತ್ತೆ ವಿರಹವೆ ತುಳುಕುತಿದೆ
ಈಗಲಾದರೂ ಬಂದು
ನಡುಗುವ ಕೈಹಿಡಿ
ಇಲ್ಲಾ,
ಹಾಳು ಶರಾಬಾದರೂ ಸುರಿ!
-------------------------------------------------------
ನಾಗೇಶ ಮೈಸೂರು, ( ೧೯೯೦ )
-------------------------------------------------------
Comments
ಉ: ಯಾಚನೆ, ಯಾತನೆ (ಘಜಲ್)
In reply to ಉ: ಯಾಚನೆ, ಯಾತನೆ (ಘಜಲ್) by H A Patil
ಉ: ಯಾಚನೆ, ಯಾತನೆ (ಘಜಲ್)
In reply to ಉ: ಯಾಚನೆ, ಯಾತನೆ (ಘಜಲ್) by partha1059
ಉ: ಯಾಚನೆ, ಯಾತನೆ (ಘಜಲ್)
In reply to ಉ: ಯಾಚನೆ, ಯಾತನೆ (ಘಜಲ್) by H A Patil
ಉ: ಯಾಚನೆ, ಯಾತನೆ (ಘಜಲ್)
ಉ: ಯಾಚನೆ, ಯಾತನೆ (ಘಜಲ್)
In reply to ಉ: ಯಾಚನೆ, ಯಾತನೆ (ಘಜಲ್) by ಗಣೇಶ
ಉ: ಯಾಚನೆ, ಯಾತನೆ (ಘಜಲ್)
In reply to ಉ: ಯಾಚನೆ, ಯಾತನೆ (ಘಜಲ್) by nageshamysore
ಉ: ಯಾಚನೆ, ಯಾತನೆ (ಘಜಲ್)
In reply to ಉ: ಯಾಚನೆ, ಯಾತನೆ (ಘಜಲ್) by ಗಣೇಶ
ಉ: ಯಾಚನೆ, ಯಾತನೆ (ಘಜಲ್)
ಉ: ಯಾಚನೆ, ಯಾತನೆ (ಘಜಲ್)
In reply to ಉ: ಯಾಚನೆ, ಯಾತನೆ (ಘಜಲ್) by makara
ಉ: ಯಾಚನೆ, ಯಾತನೆ (ಘಜಲ್)