ಯಾದವರು ಆಳಿದ ಯಾದಗಿರಿಯ ಒಂದು ನೋಟ
ಪರಿಚಯ
ಪ್ರೇಕ್ಷಣೀಯ ಸ್ಥಳ , ಪುಣ್ಯಕ್ಷೇತ್ರ , ನೋಡಲು ಸುಂದರವಾದ ತಾಣಗಳು, ತಾಂತ್ರಿಕತೆ , ಅಭಿವೃದ್ಧಿ, ಹೀಗೆ ಅನೇಕ ರಿತಿಯ ಪದಗಳು ಬಹುತೇಕ ಬಳಕೆಯಾಗುವದು ಬರಿ ಬೆಂಗಳೂರು ಮೈಸೂರು ಸುತ್ತಮುತ್ತಲಿನ ತಪ್ಪಲು ಪ್ರದೇಶಗಳಿಗೆ ಅಷ್ಟೆ ಹಾಗೂ ನಮ್ಮ ಟಿ.ವಿ.ವಾಹಿನಿಗಳಲ್ಲಿ ಬಿತ್ತರವಾಗುವ ಬಹುತೇಕ ಸನ್ನಿವೇಶಗಳು ಆ ಭಾಗದ್ದೆ ಅಂದರೆ ತಪ್ಪೇನಿಲ್ಲಾ ವಾಹಿನಿಗಳಲ್ಲಿ ಪ್ರಸಾರವಾಗುವ ಅಲ್ಪ ವಿಷಯಗಳು ಮಾತ್ರ ಉತ್ತರ ಕರ್ನಾಟಕದ ಕಡೆಗೆ ವಾಲುತ್ತವೆ. . ಹಿಗಾಗಿ ಈ ಭಾಗದಲ್ಲಿ ಎಂತೆಂತಹ ತಾಣಗಳು ಎಲೆಮರೆಯ ಕಾಯಂತೆ ಮರಿಚಿಕೆಯಾಗುತ್ತಿರುವದು ಕಹಿಯಾದರು ತುಂಬಾ ಸತ್ಯವಾದ ಮಾತು. ಅಂತಹ ತಾಣಗಳಲ್ಲಿ ಐತಿಹಾಸಿಕ ಹಿನ್ನಲೆ ಹೊಂದಿರುವ ನೂತನ ಜಿಲ್ಲೆ ನಮ್ಮ ಯಾದಗಿರಿ. ಯಾದಗಿರಿ ಎಂಬ ಹೆಸರು ಹೇಗೆ ಬಂತು ಅಂದರೆ ಈ ಹಿಂದೆ ಈ ಪ್ರದೇಶವನ್ನು "ಯಾದವ" ಎಂಬ ರಾಜವಂಶದವರು ಆಳುತ್ತಿದ್ದರಂತೆ . "ಯಾದವರ" ಈ ವಂಶವನ್ನು ಕೆಲವು ಕಡೆ ಯದುವಂಶ ಎಂದು ಕೂಡಾ ಕೆಲವು ಕಡೆ ಉಲ್ಲೆಖಿಸಲಾಗಿದೆ ಎಂಬುವದು ಬಲ್ಲ ಮೂಲಗಳಿಂದ ತಿಳಿಯುತ್ತದೆ. ಯಾದಗಿರಿಯಲ್ಲಿ ಒಂದು ಭವ್ಯ ಹಾಗು ದಿವ್ಯವಾದ ಗುಡ್ಡ ಯಾದಗಿರಿಯ ಹೃದಯ ಬಾಗದಲ್ಲಿದೆ ಇದನ್ನು ಬೆಟ್ಟವೆಂತಲು ಕರೆಯಬಹುದಾಗಿದೆ. ಯಾದವರು ಆಳುತ್ತಿದ್ದ ಈ ನಾಡಿಗೆ ಬೆಟ್ಟ ಅಂದರೆ ಗಿರಿ ಸೇರಿರುವದರಿಂದ ಇದನ್ನು ಮುಂದೆ ಯಾದಗಿರಿ ಎಂದು ಕರೆಯಲಾಯಿತು . ಯಾದವನ ಗಿರಿ’, ಯಾದವ ಗಿರಿ’,ಯಾದಗಿರಿ’, ಯಾದ್ಗೀರ್’ ಎಂದು ಸರಳೀಕೃತಗೊಂಡಿದೆ. ಹೀಗೆ ಹಲವು ನಾಮಗಳಿಂದ ಕೂಗಲಾಗುತ್ತಿದೆ.
ಜಿಲ್ಲೆಯ ರಚನೆ
ರಾಜ್ಯದ 30ನೇ ಜಿಲ್ಲೆಯಾಗಿ ಯಾದಗಿರಿ ಡಿಸೆಂಬರ ೩೦ ೨೦೦೯ ರಂದು ಶಹಾಪುರ ಮತ್ತು ಸುರಪುರ ತಾಲ್ಲೂಕುಗಳನ್ನು ಸೇರಿಸಿ ಹೊಸ ಜಿಲ್ಲೆ ರಚನೆಯಾಗಿದೆ . ಆಗಷ್ಟ 27 ೨೦೦೮ ರಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಗುಲ್ಬರ್ಗ ಜಿಲ್ಲೆಯನ್ನು ವಿಭಜಿಸಿ ಯಾದಗಿರಿ ಪಟ್ಟಣವನ್ನು ಕೇಂದ್ರವಾಗಿಸಿಕೊಂಡು ಹೊಸ ಜಿಲ್ಲೆ ರಚಿಸಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಡಿಸೆಂಬರ ೨೩ ೨೦೦೯ ಬುಧವಾರ ವಿಧಾನಸಭೆಯಲ್ಲಿ ಘೋಷಿಸಿದರು. ಯಾದಗಿರಿ ಕರ್ನಾಟಕ ರಾಜ್ಯದ ಗುಲ್ಬರ್ಗ ಜಿಲ್ಲೆಯ ಒಂದು ತಾಲೂಕು ಕೇಂದ್ರ. ಹಾಗೂ ಕರ್ನಾಟಕದ ಶೈಕ್ಷಣಿಕ ಜಿಲ್ಲೆ ಆಗಿತ್ತು ಯಾದಗಿರಿ ತಾಲೂಕಿನ ಉತ್ತರದಲ್ಲಿ ಸೇಡಂ, ವಾಯುವ್ಯದಲ್ಲಿ ಚಿತ್ತಾಪುರ, ಪಶ್ಚಿಮದಲ್ಲಿ ಶಹಾಪುರ ಮತ್ತು ಪೂರ್ವದಲ್ಲಿ ಆಂಧ್ರ ಪ್ರದೇಶದ ಮಹಬೂಬನಗರದ ಮಖ್ತಲ್ ತಾಲೂಕುಗಳಿವೆ 1997ರಲ್ಲೇ ಜಿಲ್ಲೆಯಾಗಬೇಕೆಂದು ಬಡಿದಾಡಿದರು ಯಾದಗಿರಿಗೆ ತನ್ನ ಗರಿಬಿಚ್ಚಿ ಜಿಲ್ಲೆಯಾಗುವ ಕನಸು ನೆನಸಾಗಲಿಲ್ಲಾ ಆದರೆ ಈ ಕನಸು ನೆನಸಾಗಿದ್ದು ಒಂದು ದಶಕದ ನಂತರವೆ ಎಂಬುವದು ಅಷ್ಟೆ ಸತ್ಯದ ಮಾತು. ಬೆಳಗಾವಿ ಜಿಲ್ಲೆಯನ್ನು ವಿಭಜಿಸುವ ಯೋಚನೆ ಸರ್ಕಾರಕ್ಕೆ ಬಂದಾಗ, ಗೋಕಾಕ ಮತ್ತು ಚಿಕ್ಕೋಡಿಯ ಜನರು ರೊಚ್ಚಿಗೆದ್ದು ತಮ್ಮ ನಗರವೇ ಜಿಲ್ಲೆಯಾಗಬೇಕೆಂಬ ಹಠ ಹಿಡಿದರು. ಪರಿಣಾಮವಾಗಿ, ಬೆಳಗಾವಿ ಇನ್ನೂ ಹಾಗೆಯೇ ಇದೆ. ಅಂತಹದೇ ಬಿಸಿ ಗಾಳಿ ಗುಲ್ಬರ್ಗ ಜಿಲ್ಲೆಯಲ್ಲೂ ಬೀಸಿದಾಗ, ಯಾದಗಿರಿ ಮತ್ತು ಶಹಪೂರ ತಾಲ್ಲೂಕುಗಳೂ ಜಿಲ್ಲೆಯ ಸ್ಥಾನಕ್ಕಾಗಿ ಸೆಣೆಸಿದವು. ಹಲವು ವರ್ಷಗಳ ಮಾತಿನ ಚಕಮಕಿಯ ನಂತರ ಕೊನೆಗೆ ನಕ್ಕಿದ್ದು ಯಾದಗಿರಿ ಗುಡ್ಡ. ಯಾದಗಿರಿ , ಒಂದು ಜಿಲ್ಲೆಯಾಗಲು ಬೇಕಾದ ಎಲ್ಲಾ ಲಕ್ಷಣಗಳನ್ನು ಹೊಂದಿದ್ದು ಮೊದಲು ಇಲ್ಲಿಯ ಗುರಮಠಕಲ್ ಕ್ಷೇತ್ರವನ್ನು ನಮ್ಮ ಕಾಂಗ್ರೆಸ್ಸಿನ ಹಿರಿಯ ಧುರೀಣರಾದ ಮಾನ್ಯ ಮಲ್ಲಿಕಾರ್ಜುನ್ ಖರ್ಗೆಯವರಂತಹ ವ್ಯಕ್ತಿ ಪ್ರತಿನಿಧಿಸಿದ್ದರು ಅವರು ಇಲ್ಲಿಂದ ಸತತ ಒಂಬತ್ತು ಬಾರಿ ಆರಿಸಿ ಮಂತ್ರಿಯಾಗಿದ್ದು ಒಂದು ಇತಿಹಾಸವೆ ಸರಿ ಇದಕ್ಕೆ ಮೂಲ ಕಾರಣ ಅವರು ಅಲ್ಲಿ ಮಾಡಿದ ಜನಪರ ಕಾರ್ಯಗಳು ಒಂದು ಕ್ಷೇತ್ರಕ್ಕೆ ಒಬ್ಬ ಎಂ.ಎಲ್.ಎ. ಕೊಡಬೇಕಾದ ಸಂಪೂರ್ಣ ನ್ಯಾಯ ಕೊಟ್ಟಿದ್ದಾರೆ ಅಲ್ಲಿ ಇರುವ ಪ್ರತಿಯೊಂದು ನೋಡಿದವನೆ ಬಲ್ಲ ಆ ಕ್ಷೇತ್ರದ ಅಭಿವೃದ್ಧಿ ಹೇಗಾಗಿದೆ ಎಂದು.
ಅಕ್ಟೋಬರ್ ೩೧ ಕ್ಕೆ ಜಾರಿಯಾಗಬೇಕಿದ್ದ ಜಿಲ್ಲೆಯ ಸ್ಥಾನ ನೆರೆಯ ಹಾವಳಿಯಿಂದ ಮುಂದೂಡಲ್ಪಟ್ಟಿತು . ಅಂದು ಜನರೆಲ್ಲಾ ಇನ್ನು ಜಿಲ್ಲೆಯ ಕನಸು ಭಗ್ನ ಎಂದುಕೊಂಡರು. ಆದರೆ ಮತ್ತೆ ಮತ್ತೆ ಯೋಚಿಸಿದ ರಾಜ್ಯ ಸರ್ಕಾರ ಕೊನೆಗು ಈ ಭಾಗಕ್ಕೆ ನ್ಯಾಯ ಎನ್ನುವಂತೆ ಜಿಲ್ಲೆಯಾಗಿ ಹೊರಬಂತು . ಈಗ ಸದ್ಯ ನಾಲ್ಕುಜನ ಹಿರಿಯ ಎಂ.ಎಲ್.ಎ. ಗಳನ್ನು ಹೊಂದಿರುವ ಯಾದಗಿರಿ ಮತ್ತಷ್ಟು ಸವಾಲುಗಳನ್ನು ಎದುರಿಸುತ್ತಿದೆ ಅವುಗಳನ್ನು ನಿವಾರಿಸುವ ಶಕ್ತಿ ಎಲ್ಲಾ ರಾಜಕಾರಣಿಗಳು ಮಾಡಿದರೆ ಮಾದರಿ ಜಿಲ್ಲೆ ಕೊನೆಯ ಸ್ಥಾನದಿಂದ ಮೊದಲನೆ ಸ್ಥಾನಕ್ಕೆ ಆಗಮಿಸುತ್ತದೆ.
ರಾಜುಗೌಡ ನರಸಿಂಹ ನಾಯಕ
ಇವರು ಮೂಲತ: ಸುರಪುರ ನಾಯಕ ಕುಟುಂಬದ ವ್ಯಕ್ತಿ ಮೊದಲಿಗೆ ಒಬ್ಬ ಒಳ್ಳೆಯ ಕ್ರಿಕೆಟ್ ಪಟುವಾಗಿದ್ದು ಹರೆಯದ ಹುಡುಗ ಇವರು ರಾಜಕೀಯ ಪ್ರವೇಶ ಅನಿರಿಕ್ಷೀತವೆ ಆದರು ಮೊದಲು ಕನ್ನಡ ನಾಡು ಎಂಬ ಪ್ರಾದೇಶಿಕ ಪಕ್ಷ್ಯವನ್ನು ಕಟ್ಟಿ ಆರಿಸಿ ಬಂದರು ತಮ್ಮ ವಡೆದ ತೆಂಗಿನಕಾಯಿ ಗುರುತು ಮುಂದೆ ದೇವರ ದಯೆಯಿಂದ ಕಮಲದ ಹೂ ಆಗುತ್ತೆ ಅಂತಾ ನೆನಸಿರಲಿಲ್ಲಾ ಅನಿಸುತ್ತೆ . ಅವರು ಬಿ.ಜೆ.ಪಿ. ಕಾಲಿಟ್ಟದ್ದು ಒಂದು ಒಳ್ಳೆಯ ಮೂಹೂರ್ತದಲ್ಲೆ ಅದಕ್ಕಾಗಿಯೆ ಬಿ.ಜೆ.ಪಿ ಯಲ್ಲಿ ಅತಿವೇಗದಲ್ಲಿ ಬೆಳೆದು ನಿಂತು ಮಂತ್ರಿಗಿರಿ ಪಡೆದರು. ಇವರು ಜನಪರ ಕಾರ್ಯಗಳನ್ನು ಮಾಡುತ್ತಿದ್ದು ಅವರ ಜನಗಳಿಗೆ ಮೋಸಮಾಡದೆ ಸಾಗುತ್ತಿದ್ದಾರೆ ಎಂಬುವದು ಸತ್ಯದ ಮಾತು. ಇವರು ತಮ್ಮ ಎಳೆಯ ವಯಸ್ಸಿನಲ್ಲಿ ಕ್ರೀಕೆಟ್ ಆಟದಲ್ಲಿ ತುಂಬಾ ಸಲಾ ಸಿಕ್ಸ್ ಹೊಡೆದಿದ್ದಾರೆ ಎಂದು ಕೇಳಿದ್ಧೆವೆ ಈಗ ರಾಜಕೀಯ ಪ್ರವೇಶಿಸಿ ತಮ್ಮ ಅಭಿವೃದ್ಧಿ ಕಾರ್ಯದತ್ತ ನಮ್ಮ ಜಿಲ್ಲೆ ಅಭಿವೃದ್ಧಿಯತ್ತ ತಮ್ಮ ಜಲಕ್ ತೋರಿಬೇಕಾದ ಅಗತ್ಯವಿದೆ. ಸಾಕಷ್ಟು ಕೆಲಸ ಮಾಡುತ್ತಿರುವದು ಸತ್ಯ ಆದರೆ ಸಮುದಾಯಕ್ಕೆ ಸಹಕಾರವಾಗುವ ಕೆಲಸವಾಗಬೇಕು ವಯಕ್ತಿಕ ಕೆಲಸಗಳಿಗೆ ಒತ್ತುಕೊಡುವದು ಬಿಟ್ಟು ಜನಪರ ಕರ್ಯಗಳಿಗೆ ಸಾಮೋಹಿಕ ಕೆಲಸಕ್ಕೆ ಒತ್ತುಕೊಡಬೆಕಾದ ಅಗತ್ಯವಿದೆ. ಸಾಹೇಬರು ಬರಿ ಕ್ರೀಕೇಟ್ ಆಡುತ್ತಾ ಜಿಲ್ಲಯ ಅಭಿವೃದ್ಧಿ ಮಾಡುತ್ತಿನಿ ಎಂಬ ಕೆಟ್ಟ ಕನಸು ಬಿಟ್ಟು ಸ್ವಲ್ಪ ಅಭಿವೃದ್ಧಿ ಕಡೆಗೆ ಗಮನಕೊಡಿ. ಈಗಾಗಲೆ ಶಿಕ್ಷಣದಲ್ಲಿ ಅತೀ ಹಿಂದುಳಿದ ನಮ್ಮ ಜಿಲ್ಲೆ ಮುಂದೆ ಬರುವದು ಯಾವಾಗ ಎಂದು ಯೋಚಿಸಿ. ನೀವು ಕೂಡಾ ಅಲ್ಲಲ್ಲಿ. ದೊಡ್ಡ ಹೀರೋಗಳ ತರಹ ಪೋಸ್ ಕೊಡುವದು ಬಿಡ್ಡು ನಿಮ್ಮನ್ನು ಆರಿಸಿತಂದ ಬಡವರತ್ತ ಗಮನಕೊಡಿ. ಇಲ್ಲವಾದಲ್ಲಿ ಮುಂದಿನ ದಿನಗಳು ನೀವೆ ನೋಡಬೇಕಾಗುತ್ತದೆ. ನನಗೆ ಯಾರು ಪೈಪೋಟಿ ಇಲ್ಲಾ ಎಂದು ತಿಳಿಯಬೇಡಿ ಮತ್ತು ನಮ್ಮ ಜಿಲ್ಲಯ ಅಭಿವೃದ್ಧಿ ಮರೆಯಬೇಡಿ. ಅಷ್ಟೆ ನಾನು ಕೇಳುವದು.
ಎ.ಬಿ.ಮಲಕ್ ರಡ್ಡಿ.
ಇವರು ಯಾದಗಿರಿಯ ಒಬ್ಬ ಎಂ.ಎಲ್.ಎ. ಹಿರಿಯಾ ನಾಯಕ ಹಾಗೂ ಧೂರಿಣರು ಇಲ್ಲಿಯ ಜನಜೀವನ ಸರಿಯಾಗಿ ಅರ್ಥಮಾಡಿಕೊಂಡವರು ಅವರ ಸಮಸ್ಯೆಗಳತ್ತ ಬೆಳಕು ಚೆಲ್ಲುವ ದಿಟ್ಟ ರಾಜಕಾರಣಿಗಳು ಹಲವು ಹುದ್ದೇಗಳನ್ನು ಸರ್ಕಾರದಲ್ಲಿ ನಿಬಾಯಿಸಿ ಸಹಿ ಎನಿಸಿಕೊಂಡವರು ಈ ಭಾಗದ ಉತ್ತಮ ವೈದ್ಯರು ಹೌದು ಬಡವರ ಅನೇಕ ರೋಗಗಳಿಗೆ ಮದ್ದುಕೊಡುವಂತ ಒಬ್ಬ ರಾಜಕೀಯ ವೈದ್ಯನು ಹೌದು ರಾಜಕೀಯದಲ್ಲಿ ಅತ್ಯಂತ ಹಿರಿಯ ಅನುಭವ ಹೊಂದಿರುವ ವ್ಯಕ್ತಿಗಳು ಇವರು . ಮಾನ್ಯರೆ ನೀವು ಹಿರಿಯರು ತಮಗೇನು ಹೇಳಬೇಕಾಗಿಲ್ಲಾ ಎಂದು ತಿಳಿಯುತ್ತೇನೆ ನಿಮಗೆ ಯಾದಗೀರಿಯ ಬಗ್ಗೆ ತುಂಬಾ ಚೆನ್ನಾಗಿ ಅರಿವಿದೆ ನೀವು ಕೂಡಾ ಅದರ ಅಭಿವೃದ್ಧಿಯ ಕಡೆಗೆ ಗಮನಕೊಡಿ. ಜನ ನಿಮ್ಮನ್ನು ಬಲವಾಗಿ ನಂಬಿದ್ದಾರೆ. ಯಾದಗೀರಿಯ ಪ್ರತಿಯೊಬ್ಬ ನಿಮ್ಮನ್ನು ನಂಬಿದ್ದು ಅವರ ಆಶೋತ್ತರಗಳನ್ನು ಈಡೆರುತ್ತಿರಿ ಎಂದು ತಿಳಿದಿದ್ದಾರೆ ಅದಕ್ಕಾಗಿ ಅವರತ್ತ ಗಮನಕೊಡಿ ಎನ್ನುವದೆ ನನ್ನ ಆಶೆಯ.
ಬಾಬುರಾವ್ ಚಿಂಚನಸೂರ.
ಇವರು ಹಣವಂತ ರಾಜಕಾರಣಿಗಳು ಏಕೆಂದರೆ ಇವರು ಕಾಲಿಟ್ಟಕಡೆ ದುಡ್ಡಿನ ಸುರಿಮಳೆ ಸುರಿಯುತ್ತದೆ ಅನೇಕ ಬಡವರು ಹೀಗೆ ಹೇಳುತ್ತಾರೆ ಎಲ್ಲಿ ಮದುವೆ ಮುಂಜಿ ಕಾರ್ಯಕ್ರಮ ನಡೆಯುತ್ತೊ ಅಲ್ಲಿ ಚಿಂಚನಸೂರ ಸಾಹೆಬರು ದುಡ್ಡು ಹಂಚುತ್ತಾರೆ ಎಂದು ಇವರು ಸದ್ಯ ಈಗ ಗುರಮಠಕಲ್ ಕ್ಷೇತ್ರವನ್ನು ಪ್ರತಿನಿಧಿಸುವ ಎಂ.ಎಲ್.ಎ. ಯಾವಾಗಲು ದುಡ್ಡು ಹಂಚುತ್ತಾ ತಿರುಗಾಡುತ್ತಾರೆ ಇವರು ಖರ್ಗೆ ಸಾಹೆಬರು ಮಾಡಿದ ಕೆಲಸಗಳನ್ನು ನೋಡಿಕೊಂಡು ಹೋದರೇನೆ ಸಾಕಅಗಿದೆ ಎನಿಸುತ್ತದೆ ಮೂಲತ: ಚಿಂಚನಸೂರನ ದೊಡ್ಡ ಸಾಹುಕಾರ ಇವರು ಕಾಂಗ್ರೇಸ್ಸಿನಲ್ಲಿ ಇದ್ದ ಹಿರಿಯರು ಹೌದು ಒಳ್ಳೆಯ ವಾಕ್ಚಾರ್ಯವುಳ್ಳ ವ್ಯಕ್ತಿ
ಒಂದಿಷ್ಟು ಸವಾಲುಗಳು ಮತ್ತು ಸಮಸ್ಯಗಳು
ನೀವು ಆದಷ್ಟು ಬೆಗಾ ಗುರಮಠಕಲ್ ಕ್ಷೇತ್ರ ನೋಡಿ ಅದರಂತೆ ಉಳಿದ ತಾಲೂಕು ಕ್ಷೇತ್ರ ಅಬಿವೃದ್ಧಿಯಾಗಬೇಕು.
ಯಾದಗಿರಿಯ ಸ್ಥಳಿಯ ಸಮಸ್ಯೆಗಳು ನೂರಾರು ಅವುಗಳತ್ತ ಗಮನಕೊಡಿ.
-
ಯಾದಗರಿಯ ಹೃದಯ ವಡೆಯುವ ಸಂಭವವಿದೆ ಅಂದರೆ ಯಾದಗಿರಿಯ ಕೆರೆ ಕಟ್ಟುವ ಅದನ್ನು ಅಭಿವೃದ್ಧಿ ಮಾಡುವ ಕೆಲಸ ಸ್ಥಗಿತವಾಗಿದೆ ಇದನ್ನು ನೋಡಿ ಆರಾಮಾಗಿ ಕೂತಿದ್ದೀರಲ್ಲಾ
-
ಇಲ್ಲಿನ ಶಾಲೆಗಳಲ್ಲಿ ಶಿಕ್ಷಕರಿಗೆ ಭಯವೆ ಇಲ್ಲಾ ಅವರವರ ಮನಸ್ಸಿಗೆ ಬಂದತ್ತೆ ಶಾಲೆ ಮುಚ್ಚುವ ತೆರೆಯುವ ಕೆಲಸ ಮಾಡುವ ಅಧಿಕಾರ ಹೊಂದಿದ್ದಾರೆ. ಅವರ ಬಗ್ಗೆ ಶಿಕ್ಷಣ ಇಲಾಖೆ ಏನು ಮಾಡುತ್ತಿದ್ದೇ ಗಮನಿಸಿ
-
ಇನ್ನು ಜಿಲ್ಲಾ ಆಸ್ಪತ್ರೆಯ ಕತೆ ನಿಮಗೆ ಗೊತ್ತಿಲ್ಲಾ ಅನಬೇಡಿ ಅದಕ್ಕೊಂದು ಸೂಕ್ತ ನ್ಯಾಯ ಕೊಡಿ
-
ಯಾದಗಿರಿಯ ಗುಡ್ಡ ಒಂದು ಉತ್ತಮ ಪ್ರೇಕ್ಷಣಿಯ ಸ್ಥಳ ಅದರ ಅಭಿವೃದ್ಧಿಯಾಗಬೇಕು.
-
ಜಿಲ್ಲಾ ಕಛೇರಿಗಳು ಆದಷ್ಟು ಬೇಗಾ ಒಂದೆ ಕಡೆಗೆ ಸಿಗುವಂತಾಗಲಿ
-
ರಸ್ತೆ ಕಾಮಗಾರಿ ತ್ವರಿತಗತಿಯಲ್ಲಿ ಸಾಗಿ ಜನರೆಲ್ಲಾ ಸುಗಮವಾಗಿ ತಿರುಗಾಡುವಂತೆ ಆಗಲಿ.
-
ಜಿಲ್ಲೆಯೆಂಬ ನಗರದ ಬೀದಿದೀಪಗಳ ಕಡೆಗೆ ಆಡಳಿತ ಗಮನಕೊಡಲಿ.
-
ಪ್ರಮುಖವಾದ ಹೆಸರು ಶ್ರೀ ಬಸವೇಶ್ವರರದು ಅವರ ಹೆಸರು ಇಟ್ಟ ಬಸವ ಬಡಾವಣೆಯನ್ನು ಒಮ್ಮೆ ಪರಿಕ್ಷಿಸಿ ಅದರ ಸ್ಥಿತಿ ಏನಾಗಿದೆ ಎಂದು ನೋಡಿ.
-
ಸಿ.ಎಂ. ಎಂಟ್ರಿ ಕೊಟ್ಟಾಗ ಇದ್ದ ರಸ್ತೆಗಳು ದುರಸ್ತಿಯಾಗಿದ್ದವು ಈಗ ಯಾಕೆ ? ಇಲ್ಲಾ ನೋಡಿದ್ದಿರಾ ಯಾದಗಿರಿ ನಗರದ ಒಳಗಿನ ರಸ್ತೆ.
-
ದಿನೆ ದಿನೆ ಯಾದಗಿರಿಯಲ್ಲಿ ಕ್ರೈಂ ಗಳು ಹೆಚ್ಚುತ್ತಿವೆ ಅದರ ಕಡೆ ನಮ್ಮ ಎಸ್.ಪಿ. ಮೇಡಂ ಕ್ಯಾರೆ ಅನ್ನುತ್ತಿಲ್ಲಾ .
-
ದಿನಕ್ಕೊಂದು ರೋಗಗಳು ಯಾದಗಿರಿಯ ಪ್ರವೇಶ ಮಾಡುತ್ತಿವೆ ಆದರೆ ನಮ್ಮ ಆರೋಗ್ಯ ಇಲಾಖೆಯವರು ಮಾತ್ರ ಆರಾಮಾಗಿ ಆರೋಗ್ಯವಾಗಿ ಇದ್ದಾರೆ ಮಾನ್ಯ ಇಲಾಖೆಯ ಅಧಿಕಾರಿಗಳೆ ಹರಡುತ್ತಿರುವ ಡೆಂಗ್ಯೂ ಮತ್ತಿತ್ತರ ರೋಗಗಳ ಕಡೆಗೆ ಗಮನ ಕೊಡಿ.
-
ಯಾದಗಿರಿಯಲ್ಲಿ ಸಿನಿಮಾ ಥೆಟರ್ ಗಳ ಅಭಿವೃದ್ಧಿಯಾಗಲಿ.
-
ಅಂಗಡಿ ಮುಗ್ಗಟ್ಟುಗಳಂತೆ ಸರ್ಕಾರದ ವಿವಿಧ ಇಲಾಖೆಗಳನ್ನು ಇಡಲಾಗಿದೆ ಅವುಗಳಿಗೆ ಒಂದು ಸೂಕ್ತವಾದ ಸ್ಥಾನ ಕಲ್ಪಿಸುವಂತಾಗಲಿ.
-
ಯಾದಗಿರಿಯ ಮಾರುಕಟ್ಟೆ ವ್ಯವಸ್ಥಿತವಿಲ್ಲಾ ಬರಿ ಮಳೆ ಬಂದರೆ ನಡೆನಡೆದಾಡುವಂತಿಲ್ಲಾ ಅದನ್ನು ಸುಧಾರಿಸಿ.
ಬಾಲಕಾರ್ಮಿಕರನ್ನು ನೋಡಿ ಜಿಲ್ಲಾಧಿಕಾರಿಗಳೆ..
ಯಾದವರು ಆಳಿದ ಯಾದಗಿರ ಜಿಲ್ಲೆಯಾಗಿ ಮೂರು ವರ್ಷಗಳು ಕಳೆದು ಹೋದವು ಆದರೆ ಯಾರು ಇನ್ನು ನಮ್ಮ ಭಾವಿ ಪ್ರಜೆಗಳಾದ ಮಕ್ಕಳನ್ನು ಅವರ ಏಳ್ಗೆಯನ್ನು ಗಮನಿಸುತ್ತಿಲ್ಲಾ ಅದರತ್ತ ಚಿತ್ತ ಹರಿಸುತ್ತಿಲ್ಲಾ ನಮ್ಮ ಇಲಾಖೆಗಳು ಅತ್ತ ಚಿಂತಿಸುತ್ತಿಲ್ಲಾ ಯಾರೆ ಕೂಡಾ ಯಾದಗಿರಿಯಲ್ಲಿ ಮಾತಾಡುತ್ತಿಲ್ಲಾ ಮಕ್ಕಳ ಬಗ್ಗೆ ಮಾತಾಡುವ ಜನ ಈ ಜಿಲ್ಲೆಯಲ್ಲಿ ಬಹಳ ವಿರಳ ಎಂದು ಅನಿಸಿದೆ ಇದಕ್ಕೆ ಕಾರಣ ನಮ್ಮ ಕಣ್ಣಮುಂದೆ ತುಂಬಾ ನಿಖರಬಾಗಿ ಗೋಚರಿಸುತ್ತೆ ಒಮ್ಮೆ ಬೇಟಿಕೊಡಿ ಇಲ್ಲಿಯಾ ಹೋಟೆಲ್ ಮತ್ತು ಬಾರ್ ಗಳಿಗೆ .
ಮಾನ್ಯ ಯಡಿಯೂರಪ್ಪನವರು ಯಾದಗಿರಿಯನ್ನು ಜಿಲ್ಲೆಯಾಗಿ ಮಾಡಿದರು ಅದನ್ನು ಮಾದರಿಯಾಗಿ ಮಾಡಿತೀನಿ ಅಂತಾ ಮಾತು ಕೊಟ್ಟರು ನಮ್ಮ ಮೊದಲ ಜಿಲ್ಲಾಧಿಕಾರಿಗಳು ಮಿ.ಜಗದೀಶ ನಿಜವಾಗಿ ಒಂದು ಜಿಲ್ಲೆಯು ಸರಿಯಾಗಿ ಅಬಿವೃದ್ಧಿ ಹೊಂದಿದೆ ಎಂದರೆ ಆ ಜಿಲ್ಲೆಯಲ್ಲಿ ಬಾಲಾಕಾರ್ಮಿಕ ಮಕ್ಕಳು ಬಾಲ್ಯವಿವಾಹಕ್ಕೆ ಒಳಗಾಗುವ ಮಕ್ಕಳು ಸಿಗದಂತೆ ಆಗಬೇಕು ಅಂದಾಗ ಮಾತ್ರ ಅದು ಸರಿಯಾದ ಜಿಲ್ಲೆ ಎಂದು ಹೇಳಬಹುದು ಆದರೆ ನಮ್ಮ ಹೊಸ ಡಿ.ಸಿ. ಸಾಹೆಬರಾದರು ಈ ಬಗ್ಗೆ ಕ್ರಮ ತೆಗೆದುಕೊಳ್ಳುತ್ತಾರೆಯೆ ಎಂಬ ಆತಂಕ ಎದುರಾಗಿದೆ ಏಕೆಂದರೆ ಯಾದಗಿರಿಯಲ್ಲಿ ಈ ಬಾಲಾಕಾರ್ಮಿಕತೆ ತಾಂಡವಾಡುತ್ತಿದೆ. ಪ್ರತಿಯೊಂದು ಹೋಟೆಲ್ ಬಾರ್ ಗಳಲ್ಲಿ ತುಂಬಿದ್ದಾರೆ ನಮ್ಮ ಮಾಲಿಕರು ಯಾವ ಭಯವಿಲ್ಲದೆ ಮಕ್ಕಳನ್ನು ದುಡಿಸಿಕೊಳ್ಳುತ್ತಿದ್ದಾರೆ ಇದನ್ನು ಅರಿತ ನಮ್ಮ ಜಿಲ್ಲಾಡಳಿತ ಮಾತ್ರ ಘಾಡ ನಿದ್ರೆಗೆ ಜಾರಿದೆ ಈ ಬಾಲಕಾರ್ಮಿಕತೆಯಿಂದ ನಮ್ಮ ಶಿಕ್ಷಣಕ್ಕು ಕುಂದು ಬರುತ್ತಿದೆ. ಇತ್ತ ಶಿಕ್ಷಣ ಇಲಾಖೆಯು ಮಕ್ಕಳ ಹಾಜರಾತಿಯ ಮೇಲೆ ಬೊಬ್ಬೆ ಹೊಡಿಯುತ್ತಿದೆ. ಒಟ್ಟಿನಲ್ಲಿ ಯಾದಗೀರಿಯಲ್ಲಿ ಈಗ ಅರ್ಜೆಂಟಾಗಿ ಬಾಲಕಾರ್ಮಿಕರ ಯೋಜನೆ ಸಶಕ್ತಕರಣಗೊಳಿಸಬೇಕಾದ ಅತೀ ಅವಶ್ಯಕತೆಯಿದೆ ಅನಿಸುತ್ತದೆ.
ಘಾಡ ನಿದ್ರೆಯಲ್ಲಿ ಪ್ರವಾಸೊದ್ಯಮ ಇಲಾಖೆ
ಯಾದಗಿರಿ ಒಂದು ಉತ್ತಮ ಪ್ರವಾಸಿ ತಾಣ ಎಂಬುವದಕ್ಕೆ ಎರಡು ಮಾತಿಲ್ಲಾ ಏಕೆಂದರೆ ಈ ಜಿಲ್ಲೆಯಲ್ಲಿ ಅನೇಕ ಪ್ರೇಕ್ಷಣಿಯ ಸ್ಥಳಗಳಿವೆ ವಿಷೇಶ ಸ್ಥಾನಗಳು ದೇವಾಲಯಗಳು ನೀರಿನ ತಾಣಗಳು ಇವೆ ಅವುಗಳನ್ನು ಸರಿಯಾಗಿ ಹೊರಗೆ ತರಬೇಕಾದ ಅಗತ್ಯವಾದ ಕೆಲಸ ಇಲಾಖೆ ಮಾಡಬೇಕಿದೆ.
ದಬದಬೆಯ ಜೋಗ.
ಸುಂದರ ರಮಣೀಯ ತಾಣಗಳು ಬರಿ ಬೆಂಗಳೂರು ಮೈಸೂರಲ್ಲೆ ಇವೆ ಎಂಬುವದು ನಮ್ಮೆಲ್ಲರ ವಾಡಿಕೆ ಆದರೆ ಯಾರು ಇಲ್ಲಿ ಇರುವ ತಾಣಗಳತ್ತ ಗಮನ ಹರಿಸುವದಿಲ್ಲ ಎಂಬುವದು ಸತ್ಯದ ಮಾತು. ಇದಕ್ಕೆ ಒಂದು ಚಿಕ್ಕ ಉದಾಹರಣೆ ಮೊನ್ನೆ ನನ್ನ ಗುರುಗಳು ಹೇಳಿದ ಉದಾಹರಣೆ ನೆನಪಿಗೆ ಬರುತ್ತದೆ ನಾವು ಬೆಂಗಳೂರಲ್ಲೆ ಏನೆ ಮಾಡಿದರು ಅದು ರಾಜ್ಯಮಟ್ಟ ಎಂದು ಪರಿಗಣಿಸುತ್ತೇವೆ ಆದರೆ ಇಲ್ಲಿ ಮಾಡಿದ ಇರುವ ಯಾವುದೆ ವಿಷಯ ರಾಜ್ಯ ಮಟ್ಟ ಆಗಲ್ಲಾ ಅನಿಸುತ್ತೆ ಮೊನ್ನೆ ಅವರು ಬೆಂಗಳೂರಿಗೆ ಒಂದು ಪುಸ್ತಕ ಬಿಡುಗಡೆ ಸಮಾರಂಭಕ್ಕೆ ಹೋಗಿದ್ದರಂತೆ ನಾಲ್ಕು ಜನ ಸೇರಿ ಒಂದು ಲಾಡ್ಜನಲ್ಲಿ ಕೂಡಿಸಿ ಹಿಂದೆ ಬೋರ್ಡ ಬ್ಯಾನರ ಹಾಕಿ ಒಂದಿಷ್ಟು ಫೋಟು ತೆಗೆದುಕೊಳ್ಳಲಾಯಿತು ನಂತರ ಅಲ್ಲೆ ಇರುವ ಪುಸ್ತಕ ಬಿಡುಗಡೆ ಮಾಡಲಾಯಿತು ಅಷ್ಟೆ ಅಲ್ಲಿ ನಡೆದ ಕಾರ್ಯಕ್ರಮ ಹಾಗೆ ಮುಗಿಕೊಂಡು ಮರಳಿದೆ ಮರುದಿನ ಈ ವಿಷಯ ನಮ್ಮ ರಾಜ್ಯದ ಪ್ರತಿಷ್ಠಿತ ಪತ್ರಿಕೆಗಳ ಪ್ರಮುಖ ಸುದ್ಧಿ ಸುಮಾರು ಅರ್ಧಕ್ಕಿಂತ ಹೆಚ್ಚು ಪುಟ ಆ ಪುಸ್ತಕ ಬಿಡುಗಡೆ ಸಮಅರಂಭ ಕಾರ್ಯಕ್ರಮದ ಬಗ್ಗೆ ಬರೆದಿದ್ದರು ಇದು ರಾಜ್ಯದ ವಿಷಯ ಆದರೆ ಜಿಲ್ಲೆಯಲ್ಲಿ ಅನೇಕ ಇದ್ದರು ಅವು ಮಾತ್ರ ರಾಜ್ಯದ ಕಣ್ಣಿಗೆ ಬೀಳಲ್ಲಾ ಯಾಕೆ ಗೊತ್ತಿಲ್ಲಾ ಹಾಗಯೆ ಯಾದಗಿರಿಯಾ ಗುರಮಠಕಲ್ಲ ಹತ್ತಿರದ ದಬದಬೆಯ ಸ್ಥಿತಿಯಾಗಿದೆ
ನಾವು ಕಣ್ಣಾರೆ ಜೋಗದ ಜಲಪಾತ ನೋಡಬೆಕೆಂದರೆ ಈ ದಬದಬೆಗೆ ಹೋದರೆ ಸಾಕು ಸದ್ಯ ಈಗ ನೋಡಲು ಎರಡು ಕಣ್ಣು ಸಾಲದು ಆ ರಮಣೀಯ ದೃಶ್ಯ ನೋಡುಗರನ್ನು ಸೆಳೆಯುತ್ತಿದೆ ಎರಡು ಬೆಟ್ಟಗಳ ನಡುವೆ ನೀರು ಹರೆದು ಬರುತ್ತಿರುವ ಕಾರಣ ಮನಮೋಹಕ ದೃಶ್ಯ ಅಲ್ಲಿ ನಾವು ಕಾಣಬಹುದಾಗಿದೆ ಈಡಿ ರಾಜ್ಯವೆ ನೋಡಬೇಕಾದ ಈ ಪ್ರವಾಸಿ ತಾಣ ಮಾತ್ರ ಇನ್ನು ನಮ್ಮ ಇಲಾಖೆಗೆ ಕಂಡುಬಮದಿಲ್ಲಾ ಅನಿಸುತ್ತಿದೆ ಅದರ ಬಗ್ಗೆ ಚಿಂತನೆಯೆ ಆಗುತ್ತಿಲ್ಲಾ ಅಲ್ಲಿ ಬರುವ ಜನಕ್ಕೆ ಬೇಕಾಗುವ ಮೂಲ ಸೌಕರ್ಯಗಳೆ ಇಲ್ಲಾ ಅದು ಪ್ರವಾಸಿ ತಾಣ ಮಾಡಬೇಕಾದ ಅಗತ್ಯವಿದೆ ಎನಿಸುತ್ತದೆ. ಆದರೆ ಪ್ರಾಸೂದ್ಯಮ ಇಲಾಖೆ ಮಾತ್ರ ಇದು ಯಾವುದೆ ವಿಷಯ ಗಮನಿಸದೆ ಯಾವುದೊ ವಿಚಿತ್ರ ಲೋಕದಲ್ಲಿ ವಿಹರಿಸುತ್ತಿದೆ. ಅತ್ತ ಕಡೆ ಯಾರು ಗಮನವೆ ಕೊಡುತ್ತಿಲ್ಲಾ ಎಂಬುವದು ವಿಚಾರಿಸಬೇಕಾಗಿದೆ. ಈ ಸುಂದರ ತಾಣಗಳನ್ನು ಹೀಗೆ ಕಡೆಗಣಿಸಿದರೆ ಮುಂದಿನ ಪಿಳಿಗೆ ನೋಡಲು ಯಾವ ತಾಣಗಳು ಇಲ್ಲಾವಾಗುತ್ತವೆ ಎಂಬುವದು ಮರೆಯುವಂತಿಲ್ಲಾ.
ನೆನೆಗುದಿಗೆ ಬಿದ್ದಿರುವ ಹೃದಯ ಭಾಗದಲ್ಲಿರುವ ಕೆರೆ ಕಾಮಗಾರಿ
ಕಳಿದ ಎರಡು ಮೂರು ವರ್ಷಗಳಿಂದ ಈ ಕೆರೆಯ ಕೆಲಸ ನೆನೆಗುದಿಗೆ ಬಿದ್ದಿದ್ದು ಯಾರು ಕೇಳದಂತಾಗಿದೆ. ಯಾದಗೀರಿಯ ಹೃದಯ ಭಾಗದಲ್ಲಿರುವ ಈ ಕೆರೆಯು ಈ ಜಿಲ್ಲೆಯ ಪ್ರಮುಖ ಆಕರ್ಷಿಣಿಯ ಭಾಗ ಆದರೆ ಅದೂ ಈಗ ಕೊಳತು ಹೊಲಸಾಗಿ ನಾರುತ್ತಿದೆ ಪಕ್ಕದಲ್ಲೆ ಇರುವ ನಮ್ಮ ಡಿ.ಸಿ. ಸಾಹೇಬರು ಮತ್ತು ಸಿ.ಇ.ಓ. ಸಾಹೇಬರ ಮೂಗಿಗೆ ಆ ವಾಸನೆ ತಾಗುತ್ತಿಲ್ಲಾ ಎಂದು ಅನಿಸುತ್ತದೆ. ಯಾದಗಿರಿ ಗುಡ್ಡದ ಕೆಳಗಿರುವ ಈ ಭಾಗ ನೋಡುಗರ ಕಣ್ಣು ಸೆಳೆಯುವ ತಾಣವಾಗಿದೆ ಆದರೆ ನಮ್ಮ ಅಧಿಕಾರಿಗಳ ದಿವ್ಯ ಕಣ್ಣಿಗೆ ಮಾತ್ರ ಬಿಳುತ್ತಿಲ್ಲಾ . ಈಗಾಗಲೆ ಈ ಜಿಲ್ಲೆಗೆ ಡೆಂಗ್ಯೂ ಜ್ವರ ಎಂಟ್ರಿ ಕೊಟ್ಟಿದ್ದು ಇನ್ನು ಅನೇಕ ರೋಗಗಳಿಗೆ ಈ ಕೆರೆಯೆ ಸ್ವತ: ಆಹ್ವಾನ ಕೊಟ್ಟಂತೆ ಭಾಸವಾಗುತ್ತದೆ. ಈ ಕೆರೆಯ ಅಭಿವೃದ್ಧಿಗೆ ನೂರಾರು ಸಾವಿರ ಹಣ ಖರ್ಚುಮಾಡಬೇಕಾದ ಸರ್ಕಾರ ಕೈಕಟ್ಟಿ ಸುಮ್ಮನೆ ಕುಳಿತು ಅದರ ರೋಗಗಳನ್ನು ನಮ್ಮ ಜನರಿಗೆ ಕೊಡುತ್ತಿದೆ. ಈ ಕೆರೆಯ ನೀರಿನಲ್ಲಿ ಅನೇಕ ರೀತಿಯ ಹುಳುಗಳು ಜಂತುಗಳ ತಾಣವಾಗುತ್ತಿದ್ದು ಹತ್ತಿರಹೋದರೆ ಈಗಾಗಲೆ ಕೊಳತು ನಾರುತ್ತಿದೆ .
ನಗರ ಸಭೆಯ ಮುಂದಿನ ರಸ್ತೆ
ನಗರ ಸಭೆಯ ಜವಾಬ್ದಾರಿ ನಗರದ ಎಲ್ಲಾ ಜನರನ್ನು ಕಾಪಾಡಬೇಕು ಆದರೆ ಅದರ ಮುಂದಿನ ರಸ್ತೆಯೆ ಹದಗೆಟ್ಟು ಹನ್ನೊಂದಾಗಿದೆ ಮಳೆಗಾಲದಲ್ಲಿ ಈ ರಸ್ತೆಯಲ್ಲಿ ಮನುಷ್ಯರಲ್ಲಾ ವಾಹನ ಓಡಾಟವು ಕಷ್ಟಕರವಾಗಿದೆ. ಸಂರ್ಪೂ ಹಾಳಾಗಿರುವ ರಸ್ತೆ ಅದರ ದುರಸ್ತಿಗೆ ಯಾರು ಯೋಚಿಸುತ್ತಿಲ್ಲಾ ಅಲ್ಲಿಯ ಇದು ನಗರ ಸಭೆಯ ಮುಂದಿನ ಸ್ಥಿತಿಗತಿಯಾದರೆ ಇನ್ನು ಇವರು ಊರಿನ ಜನರ ಉದ್ದಾರ ಹೇಗೆ ಮಾಡುತ್ತಾರೆ ತಿಳಿಯದು ಇದು ಅಲ್ಲಿಯ ಅಧಿಕಾರಿಗಳಿಗೆ ತಿಳಿಯುತ್ತಿಲ್ಲಾವೆ ಅಥವಾ ತಿಳಿದು ತಿಳಿಯದಂತೆ ಮಾಡುತ್ತಿದ್ದಾರೆ ಎಂದು ವಿಚಾರಿಸಬೇಕಾಗಿದೆ.
ಈ ಕೊಳತುನಾರುತ್ತಿರುವ ಸಮಸ್ಯೆಗೆ ಅನೇಕ ಬಾರಿ ಆಪರೇಷನ್ ಆಗಿದ್ದರು ಇದು ಸರಿಯಾಗಿ ಆಗುತ್ತಿಲ್ಲಾ ಎಂಬುವದು ಗಮನಿಸಲೆಬೆಕಾದ ವಿಷಯವಾಗಿದೆ. ಅಲ್ಲಿ ಬಹಳ ಜನರ ಓಡಾಟ ಇರುವದರಿಂದ ನಮ್ಮ ನಗರ ಸಭೆ ಎಚ್ಚತ್ತುಕೊಳ್ಳಬೇಕಾದ ಅಗತ್ಯವಿದೆ ಎನಿಸುತ್ತದೆ.
ಶೋಕಿ ಎಸ್.ಪಿ. ಫೋಸುಕೊಟ್ಟು ಫೋಟು ತೆಗೆದುಕೊಳ್ಳುವ ಡಿ.ಸಿ. ಹಣ ಹಂಚುತ್ತಾ ತಿರುಗಾಡುವ ಎಂ.ಎಲ್.ಎ.
ಇದು ಯಾದಗಿರಿಯ ದುರಾದೃಷ್ಟವೆನಿಸುತ್ತೆದೆ , ಏಕೆಂದರೆ ಯಾದಗಿರಿ ನೂತನ ಜಿಲ್ಲೆಯಾಗಿದ್ದು ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದೆ ಅಲ್ಲದೆ ಅನೇಕ ಕ್ರಿಮಿನಲ್ ಗಳಿಗೆ ದಾರಿಯಾಗುತ್ತಿದೆ . ಮತ್ತು ಅನೇಕ ರಿತಿಯಾ ಸಾಗಾಣಿಕೆಯ ತಾಣವಾಗಿಹೋಗುತ್ತಿದೆ. ಆದರೆ ನಮ್ಮ ಅಧಿಕಾರಿಗಳು ಹಾಗೂ ಎಂ.ಎಲ್.ಏ. ಸಾಹೇಬರು ಮಾತ್ರ ತಮ್ಮ ಪಾಡಿಗೆ ತಾವು ಏನು ಗೊತ್ತಿಲ್ಲಾ ಎಂಬಂತೆ ವರ್ತಿಸುತ್ತಿದ್ದಾರೆ. ಎಸ್.ಪಿ. ಆಗಿ ಆಗಮಿಸಿದ ಮಾನ್ಯ ರೂಪ ಮೇಡಂ. ರವರ ಇತಿಹಾಸ ತುಂಬಾನೆ ಇದೆ ಎಂದು ಮಾದ್ಯಮದವರು ಮಾತಾಡುತ್ತಿದ್ದರು ಅವರು ಈ ಲಂಚದಲ್ಲಿ ಅನೇಕ ರಿತಿಯ ವಂಚನೆಗಳಲ್ಲಿ ಹಿಂದೆ ಆಲಿದ ಜಿಲ್ಲೆಗಳಲ್ಲಿ ತಮ್ಮ ಛಾಪು ಮೂಡಿಸಿದ್ದಾರಂತೆ ಅಲ್ಲದೆ ಅದರಲದಲಿ ಹೆಸರು ಕೂಡಾ ಮಾಡಿದ್ದಾರಂತೆ ಇನ್ನು ತಮ್ಮ ಕೈ ಕೆಳಗಿನ ಅಧಿಕಾರಿಗಳಿಗೆ ಮನಬಂದಂತೆ ಮಾತಾಡುವ ಚಾಳಿಯ ಹೆಣ್ಣು ಇವರಂತೆ ಅಲ್ಲದೆ ಯಾವಾಗಲು ನನ್ನ ಗ್ಲಾಮರ್ ಹಾಳಾಗುತ್ತೆ ಎಂಬ ಮಾತಾಡುತ್ತಾರಂತೆ ಇವರು ಅಂತಹವರು ಈ ಪೂಲಿಸ್ ಇಲಾಖೆಗೆ ಸೂಕ್ತ ಅಲ್ಲಾ ಅಂತಾ ಯಾದಗಿರಿ ಜನ ಮಾತಾಡುತ್ತಿದ್ದಾರೆ. ಇನ್ನು ಹಳ್ಳಿಗಳಲ್ಲಿ ಎಸ್.ಪಿ . ಅಂದರೆ ಇವುಳೆಂತವಳು ಜನರ ಎದುರು ಬರುವದೆ ಇಲ್ಲಾ ಅಂತಾಳೆ ಅಂತಾ ಮಾತಾಡುತ್ತಿದ್ದಾರೆ. ಒಳಗೊಳಗೆ ಕ್ರೈಂಗೆ ನಮ್ಮ ಎಸ್.ಪಿ ರವರೆ ಪ್ರಚೋಧನೆ ನಿಡುತ್ತಿರುವದಲ್ಲದೆ . ಇದಕ್ಕೆ ಅವರಿಂದ ಹಣ ಪಡೆದು ಅವರ ಕ್ರೈಂನ್ನು ಮುಚ್ಚಿಹಾಕುತ್ತಿದ್ದಾರೆ ಎಂಬ ಮಾತು ಕೇಳಿ ಬರುತ್ತಿದೆ. ಅಲ್ಲದೆ ಇವರು ಮೊದಲು ಬೀದರ ನಲ್ಲಿದ್ದಾಗ ಇಂತಹ ಪ್ರಕರಣಗಳು ಆಗಿದ್ದು ಇಲ್ಲಿಯು ಮುಂದುವರೆಸಿದ್ದಾರೆ ಎಂಬ ವದಂತಿಗಳಿವೆ. ಈ ಇಲಾಖೆ ಜನರನ್ನು ರಕ್ಷೀಸುವ ಕೆಲಸ ಮಾಡಬೇಕಾಗಿದೆ. ಮಾನ್ಯ ಎಸ್.ಪಿ ಮೇಡಂ. ಇನ್ನಾದರು ಎಚ್ಚೆತ್ತುಕೊಳ್ಳಿ.
ಇನ್ನು ಡಿ.ಸಿ. ಸಾಹೇಬರು ಪ್ರತಿದಿನ ನಮ್ಮ ದಿನಪತ್ರಿಕೆಯಲ್ಲಿ ಮುಖಪುಟಲದಲಿ ಫೋಸ್ ಕೊಟ್ಟು ಪೋಟು ಹಾಕಿರುತ್ತಾರೆ. ಆದರೆ ಎಲ್ಲಿಯು ಅಭಿವೃದ್ಧಿ ಕೆಲಸಗಳ ಮಾಹಿತಿ ಆಗಲಿ ಫೋಟು ಆಗಲಿ ಸಿಗುತ್ತಿಲ್ಲಾ. ಯಾವುದೆ ಅಭಿವೃದ್ಧಿ ಕೆಲಸದತ್ತ ಗಮನ ಹರಿಸಿದ ಸಾಹೇಬರು ಮಾತ್ರ ಆರಾಮಾಗಿ ನಿದ್ರೆಗೆ ಜಾರುತ್ತಿದ್ದಾರೆ. ಬೆಳೆಗ್ಗೆ ಸರಿಯಾದ ಸಮಯಕ್ಕೆ ಸಿಗದ ಇವರು ಅವರ ಮನಸ್ಸಿನಂತೆ ನಡೆಸುತ್ತಿದ್ದಾರೆ. ಒಬ್ಬ ಡಿ.ಸಿ. ಯಾದವನು ಸಾಮಾನ್ಯ ಜನರಿಗೆ ಸರಿಯಾದ ಸಮಯಕ್ಕೆ ತನ್ನ ಕಛೆರಿಯಲ್ಲಿ ಸಿಕ್ಕು ಅವರ ಸಮಸ್ಯೆಗಳಿಗೆ ಸ್ಪಂದಿಸುವದು ವಾಡಿಕೆ ಆದರೆ ಈ ಸಾಹೇಬರು ಹಾಗೆ ಮಾಡುತ್ತಿಲ್ಲಾ. ಅಲ್ಲದೆ ನಮ್ಮ ಡಿ.ಸಿ.ಗಳಿಗೆ ಕೆಲವು ಸಾಮಾನ್ಯ ವಿಷಯಗಳಲ್ಲಿ ಒಂದು ಚಿಕ್ಕ ಉದಾಹರಣೆ ಎಂದರೆ ನಮ್ಮ ಎಲ್ಲಾ ಪತ್ರಿಕಾ ಬಳಗದವರು ಡಿ.ಸಿ. ಆಫಿಸ್ ಮುಂದೆ ತಮ್ಮ ಬೈಕ್ ನಿಲ್ಲಿಸಿ ಉರಾಗ ಉಡಾಲರು ನಿಲ್ಲತ್ತಾರಲ್ಲ ಹಾಗೆ ಡಿ.ಸಿ. ಆಫಿಸ್ ಮುಂದೆ ನಿಲ್ಲುತ್ತಾರೆ ಅವರನ್ನು ಯಾವ ಡಿ.ಸಿ.ಯು ಇಲ್ಲಿಯವರೆಗೆ ಒಂದು ಕುಳಿತುಕೊಳ್ಳಲು ವ್ಯವಸ್ಥೆ ಕಲ್ಪಿಸಲು ವಿಚಾರಿಸುತ್ತಿಲ್ಲಾ.
ನಮ್ಮ ಎಂ.ಎಲ್.ಏ ಸಾಹೇಬರಾದ ಮಾನ್ಯ ಬಾಬುರಾವ್. ಚಿಂಚನಸೂರವರು ಈಗ ಗುರಮಠಕಲ್ ಕ್ಷೇತ್ರ ಪ್ರತಿನಿಧಿಸುತ್ತಿದ್ದು. ಅಲ್ಲಿ ಮಾನ್ಯ ಖರ್ಗೆಜಿಯವರು ಮಾಡಿದ ಕೆಲಸಗಳನ್ನು ಉಳಿಸಿಕೊಂಡು ಹೋಗಲು ಆಗುತ್ತಿಲ್ಲಾ ಎಂಬುದು ತುಂಬಾ ಹೀನಾಯವಾದ ಸ್ಥಿತಿ ಎನಿಸುತ್ತದೆ. ಈಗಾಗಲೆ ಕ್ಷೇತ್ರದ ಕೆಲವು ರಸ್ತೆಗಳು ಸಂಪೂರ್ಣ ಹಾಳಾಗಿದ್ದು. ಅತ್ತ ಕಡೆ ಮಾನ್ಯರು ಗಮನಕೊಡುತ್ತಿಲ್ಲಾ ಖರ್ಗೆಜಿ ಬಿಟ್ಟುಹೋದಮೇಲೆ ಅಲ್ಲಿನ ಸ್ಥಿತಿಗತಿ ಕೆಟ್ಟುಹೋಗುತ್ತಿದೆ. ಜನರೆಲ್ಲಾ ಇವರಿಂದ ಮಾನ್ಯ ಚಿಂಚನಸೂರವರ ಕೆಲಸದಿಂದ ಬೇಸತ್ತಿದ್ದಾರೆ. ಅಲ್ಲದೆ ಇವರು ಬರಿ ಅಲ್ಲಲ್ಲಿ ತಿರುಗಾಡಿ ಬರಿ ದುಡ್ಡಿನ ದರಬಾರ ತೋರಿಸುತ್ತಾ. ದುಡ್ಡು ಹಂಚುತ್ತಾ ನಡೆದಿರುವಂತೆ ತೋರುತ್ತಿದೆ. ಎಲ್ಲಿ ಬಾಬುರಾವ್ ಚಿಂಚನಸೂರ ಇರುತ್ತಾರೋ ಅಲ್ಲಿ ದುಡ್ಡು ಹಂಚುತ್ತಾರೆ ಎಂಬ ಸತ್ಯ ಈ ಕನರಿಗೆ ಅರ್ಥವಾಗುತ್ತಾ ಹೋಗುತ್ತಿದೆ. ಯಾರೊಬ್ಬರು ಅಲ್ಲಿನ ಅಭಿವೃದ್ಧಿಯ ಕಡೆಗೆ ಗಮನ ಕೊಡುತ್ತಿಲ್ಲಾ. ಬರಿ ಕೈ ಬೀಸಿ ಕಾಂಗ್ರೆಸ್ಸಿನ ಹೆಸರ ಹೇಳಿ ಮಾನ್ಯ ಚಿಂಚನಸೂರವರು ತಮ್ಮ ರಾಜಕೀಯ ಹಣ್ಣು ಮಾರುತ್ತಿರುವದು ತುಂಬಾ ಸ್ಪಷ್ಟವಾಗಿ ಕಂಡುಬತುತ್ತಿದೆ. ಹೀಗೆ ಹೋದರೆ ಜನರ ಕಥೆ ಕೇಳುವ ನಾಯಕರು ಇಲ್ಲವಾಗುತ್ತಾರೆ.