ಯಾರಾರೇನೇನೊಯ್ದರೊ ತ್ಸುನಾಮಿ ಹೊತ್ತಲಿ..

ಯಾರಾರೇನೇನೊಯ್ದರೊ ತ್ಸುನಾಮಿ ಹೊತ್ತಲಿ..

ಕವನ


ಕಂಪನಗಳ ನಾಡು,
ಜಪಾನಿನಲಿ
ಭೂಕಂಪದ ತ್ಸುನಾಮಿ 
ಮುನ್ಸೂಚನೆ;
ರೇಡಿಯೊ ವರದಿ
ಸರಕಾರದ ಆದೇಶ
ಖಾಲಿ ಮಾಡಿ ಹೊರಡಲು -
ತೀರ ಆಗತ್ಯದವನ್ಹೊತ್ತು ಮಾತ್ರ.

ಅವ ಸತಿಗೆ ನುಡಿದ:
ಮೂವತ್ತು ಕ್ಷಣದಲಿ ಹುಡುಕಿ
ಏನತ್ಯಾವಶ್ಯಕವೊ ನೋಡುವ
ಬೇಗ ಹೊರಡು, ಹುಡುಕು;
ಲಗುಬಗೆಯಲಿ 
ಹೊರಟವರು 
ಹುಡುಕೆತ್ತಿ 
ಅತ್ಯಗತ್ಯದ ವಸ್ತು.

ಸುರಕ್ಷಿತ ದೂರ
ತಲುಪಿದಾಗ ಪತಿಗೆ
ಕುತೂಹಲ;
ಕೇಳಿದ - ಏನ್ಹೊತ್ತು ತಂದೆ,
ಅತ್ಯಾವಶ್ಯಕ ವಸ್ತು?
ಚಿನ್ನ, ಬಂಗಾರವೊ, ಚಿತ್ರವೊ
ಮತ್ತಾವುದೊ ಎಂಬ
ಸ್ವಗತ...

ಅವಳು ಮಾತಾಡಲಿಲ್ಲ -
ಪುಟ್ಟ ಕೈ ಚೀಲ 
ತೆರೆದಳು 
ಮುಚ್ಚಿದ ಬಾಯಿ;
ಚೀಲದ ತುಂಬ
ಬರೀ -
ಟಿಶ್ಯೂ ಪೇಪರುಗಳು!!!

Comments

Submitted by venkatb83 Wed, 03/27/2013 - 18:57

"ಬರೀ -
ಟಿಶ್ಯೂ ಪೇಪರುಗಳು!!!"

ನಾನು ಬೇರೇನೋ ಊಹಿಸಿದ್ದೆ..>!! ಕನ್ನಡಿ- ಮೇಕಪ್ ಬಾಕ್ಸ್ ಇತ್ಯಾದಿ...
ಆದ್ರೆ ಇಲಿ ನಡೆದದ್ದೇ ಬೇರೆ...
ಒಳ್ಳೆ ಅಂತ್ಯ.. ;()))

ಅವ್ರಿಗೆ ಅತ್ಯಾವಷ್ಯಕವಾದದ್ದೇ ಅವ್ರು ತೆಗೆದಿದ್ದಾರೆ ಬಿಡಿ...!!

ಶುಭವಾಗಲಿ..

\।

Submitted by nageshamysore Fri, 03/29/2013 - 20:07

ಹಲೊ ವೆಂಕಟ್ ಅವರೆ, ಕಾಮೆಂಟ್ಸಿಗೆ ಧನ್ಯವಾಧ! ಇದು, ಒಂದು ಸತ್ಯ ಕಥೆ - ಜಪಾನಿನ ನನ್ನ ಗೆಳೆಯರೊಬ್ಬರ ಪತ್ನಿಯವರದು. ನನಗೆ ಇಂದಿಗು ಸೋಜಿಗ. ಆಕೆ ಬರಿ ಟಿಶ್ಯೂ ಪೇಪರು ಹೊಯ್ದಿದ್ದೇಕೆ ಅಂತ. ಆದರೆ, ಅಂತರಾಳದಲ್ಲಿ ಅದರ ಗೂಢಾರ್ಥ ಬಹಳವಿದೆ ಅನಿಸ್ತು. ಅದನ್ನೆ ಬರೆದೆ - ಬೈದಿವೆ, ಆಕೆ ಅಷ್ಟೆ ಏಕೆ ಕೊಂಡೊಯ್ದಳು ಅಂತ ಆಕೆಯ ಜಪಾನಿ ಪತಿಗೂ ತಿಳಿದಿಲ್ಲವಂತೆ!