ಯಾರಿರದ ಬಯಲೊಳಗೆ
ಕವನ
ಯಾರಿರದ ಬಯಲೊಳಗೆ
ಕುಳಿತಿರುವೆ ಏತಕೆ
ಸೋರಿರುವ ಮನದೊಳಗೆ
ಅಮಲದುವು ಇಳಿಯಿತೆ
ಪ್ರೀತಿ ಸುಡುಗಾಡಿನೊಳು
ಒಲವದುವು ಇರುವುದೆ
ಪ್ರೇಮದುಯ್ಯಾಲೆಯು
ತುಂಡಾಗಿ ಬಿದ್ದಿತೆ
ಈರ್ಷ್ಯೆ ಇರುವೆಯ ತಂಡ
ಸಿಹಿ ಸವಿಗೆ ಮುತ್ತಿತೆ
ಸಪ್ನಗಳ ಚೆಲು ತೋಟ
ಹುಡಿಯಾಗಿ ಹೋಯಿತೆ
ಹೃದಯ ಬಾಂಧವ್ಯವನು
ಇಲ್ಲವಾಗಿಸಿ ಹೋದೆ
ಮನಸಿನೊಳಗಿನ ಮಣಿಯ
ದೂರಕೆಸೆಯುತ ನಿಂತೆ
ಎಲ್ಲ ಮರೆಯುತ ಬಂದೆ
ಎಲ್ಲಿರುವೆ ಮೋಹಿನಿಯೆ
ನಡೆ ನುಡಿಯ ಅರಿಯುತಲಿ
ಒಂದಾಗುವ ಬಾರೆ
-ಹಾ ಮ ಸತೀಶ ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಚಿತ್ರ್