ಯಾರಿರಬಹುದು?
ಮೊನ್ನೆ ಮೊಬೈಲನಲ್ಲಿ ಹಾಡು ಕೇಳುತ್ತಿದೆ.ಒಂದು ಹಾಡು ತುಂಬ ಕಾಡತೊಡಗಿತ್ತು.ಅದೊಂದು ಭಾವಗೀತೆ.ಆ ಗೀತೆಯನ್ನು ಬರೆದ ಕವಿ ಯಾರೆಂದು ತಿಳಿಯಲಿಲ್ಲ.ಆದರೆ ಆ ಹಾಡು ಮೊದಲ ಕೇಳುವಿಕೆಯಲ್ಲೆ ಇಷ್ಟವಾಯಿತು.ಇಲ್ಲಿ ಆ ಭಾವಗೀತೆಯನ್ನು ಕೊಡುತ್ತೇನೆ.ಕವಿತೆಯನ್ನು ಬಿಟ್ಟು ಕವಿ ಕಾಣೆಯಾಗಿದ್ದಾರೆ.ಯಾರು ಆ ಕವಿ?
ಗಳಿಗೆ ಗಳಿಗೆಗೂ ಹೊಸಹೊಸ ರೀತಿಗೆ ಈ ಜಗ ಓಡುತಿದೆ.
ಪ್ರಗತಿಯ ಹಂತಕ್ಕೋ,ಪ್ರಳಯದುರಂತಕ್ಕೋ,
ಹಳತ ನೋಡುತ್ತಾ ಕಿಲಕಿಲ ನಗುತಲಿ ಈ ಜಗ ಓಡುತಿದೆ........