ಯಾರಿವನು? ಎಲ್ಲರ ಮನ ಗೆದ್ದವನು
ಕವನ
ನನ್ನ ಪ್ರೀತಿಯ ಸಹಚರಿಯ
ಗುಣಗಳೆನಿತು ಅತಿಶಯ
ಸಹಿಸಲಾರೆ ಅಗಲಿಕೆಯ
ಮಾಡಿಕೊಡಲೇನು ಪರಿಚಯ.
ಕರದಲ್ಲಿ. ಕೊರಳಲ್ಲಿ.
ನಡುವಲ್ಲಿ. ಕಿವಿಯಬಳಿ.
ಪರ್ಸಲ್ಲಿ, ಕಿಸೆಯಲ್ಲಿ
ಎಲ್ಲೆಲ್ಲೂ ಇವನಿರುವ
ಜಾತಿಮತ ಇವನಿಗಿಲ್ಲ
ರಾಜ್ಯಭಾಷೆ ತಕರಾರಿಲ್ಲ
ಸುಖ ದುಃಖಗಳಲ್ಲೆಲ್ಲ
ಜೊತೆಯಾಗಿರುವ
ಮಾತು ಸಂದೇಶಗಳಲ್ಲಿ
ಭಾವನೆಯ ಬೆಸೆಯುತಲಿ
ಜನಮನವ ಜೋಡಿಸುತಲಿ
ದೇಶ ಒಂದಾಗಿಸುತಿರುವ
ಇವನಿಂದ ಇಂದು
ವಿಶ್ವವಹುದಂತೆ ಕಿರಿದು
ನಿಶ್ಯಬ್ಧವಾದರಿವ
ಎಲ್ಲವೂ ಬರಿದು
ಇವನಿದ್ದರೆ ಕರದಲ್ಲಿ
ಜಗವಿದ್ದಂತೆ ಮುಷ್ಠಿಯಲಿ
ಮೂರ್ತಿ ಚಿಕ್ಕದಾದರು
ದೊಡ್ಡವ ಕೀರ್ತಿಯಲಿ
ಎಲ್ಲರಿಗೂ ಪ್ರಿಯ
ಎಲ್ಲರಾ ಗೆಳೆಯ
ಆಯಿತೇನು ಪರಿಚಯ
ಅವನೇ ಮೊಬೈಲ್ ಮಹರಾಯ.
Comments
ಉ: ಯಾರಿವನು? ಎಲ್ಲರ ಮನ ಗೆದ್ದವನು
In reply to ಉ: ಯಾರಿವನು? ಎಲ್ಲರ ಮನ ಗೆದ್ದವನು by Radhika
ಉ: ಯಾರಿವನು? ಎಲ್ಲರ ಮನ ಗೆದ್ದವನು
In reply to ಉ: ಯಾರಿವನು? ಎಲ್ಲರ ಮನ ಗೆದ್ದವನು by saraswathichandrasmo
ಉ: ಯಾರಿವನು? ಎಲ್ಲರ ಮನ ಗೆದ್ದವನು
In reply to ಉ: ಯಾರಿವನು? ಎಲ್ಲರ ಮನ ಗೆದ್ದವನು by dayanandac
ಉ: ಯಾರಿವನು? ಎಲ್ಲರ ಮನ ಗೆದ್ದವನು
ಉ: ಯಾರಿವನು? ಎಲ್ಲರ ಮನ ಗೆದ್ದವನು
In reply to ಉ: ಯಾರಿವನು? ಎಲ್ಲರ ಮನ ಗೆದ್ದವನು by ನಂದೀಶ್ ಬಂಕೇನಹಳ್ಳಿ
ಉ: ಯಾರಿವನು? ಎಲ್ಲರ ಮನ ಗೆದ್ದವನು
ಉ: ಯಾರಿವನು? ಎಲ್ಲರ ಮನ ಗೆದ್ದವನು
In reply to ಉ: ಯಾರಿವನು? ಎಲ್ಲರ ಮನ ಗೆದ್ದವನು by vinyasa
ಉ: ಯಾರಿವನು? ಎಲ್ಲರ ಮನ ಗೆದ್ದವನು
ಉ: ಯಾರಿವನು? ಎಲ್ಲರ ಮನ ಗೆದ್ದವನು
In reply to ಉ: ಯಾರಿವನು? ಎಲ್ಲರ ಮನ ಗೆದ್ದವನು by Saranga
ಉ: ಯಾರಿವನು? ಎಲ್ಲರ ಮನ ಗೆದ್ದವನು
ಉ: ಯಾರಿವನು? ಎಲ್ಲರ ಮನ ಗೆದ್ದವನು
In reply to ಉ: ಯಾರಿವನು? ಎಲ್ಲರ ಮನ ಗೆದ್ದವನು by Maanu
ಉ: ಯಾರಿವನು? ಎಲ್ಲರ ಮನ ಗೆದ್ದವನು