ಯಾರಿವರು ?

ಯಾರಿವರು ?

ಕವನ

         ಯಾರಿವರು?

ನೆಮ್ಮದಿಯ  ತವರು 

 ಎಲ್ಲಿಹುದೆಂದು  ತಿಳಿಯದವರು  

  ಕಚ್ಚಾಡುವವರು

 ತಡಕಾಡುವವರು

 ಧನದ ರಾಶಿ  ಪೇರಿಸುವವರು

ಅವಕಾಶವಿದೆ  ಬಾಳ ಹಿಡಿದೆತ್ತಿ

 ಸುಮಧುರಗೊಳಿಸಲು

 ಬೇಡವಿದು

ಸ್ವಂತಕ್ಕೆ  ನುಂಗುವುದೇ 

ಇವರ  ತಾಕತ್ತು

 ನಡೆಯುತಿದೆ  ಕರಾಮತ್ತು

 ತಾಯ್ನಾಡ  ಒಡಲ  ಬಗೆದು

 ಭಾಷಣದಿ  ಹರಿಯಬಿಡುವರು

ಸರ್ವ ಜನರ  ಉದ್ಧಾರವ 

ಪವಾಡವೋ

ಕೇಳುಗ ರಿಗೇನು  ಸಹ್ಯವೋ

 ಮರೆತು ಬಿಡುವ  ಜನರಿದ್ದೊಡೆ

ಪುನರಾವರ್ತನೆ  ಎಲ್ಲಕಡೆ

 ಬಯಸುವುದು  ಸ್ವಾರ್ಥ 

ಸೇವೆಯ  ಸೋಗು

 ಇವರಿಗೊಂದು  ಭೂಷಣ

 ಇದರಿಂದ  ಸಿಗುವುದು

 ನಾನಾ  ರೀತಿಯಲಿ

 ಝಣ ಝಣ

ಇದೆ  ಒಂದಕ್ಕೊಂದು ಕೊಂಡಿ

 ಎಲ್ಲಿರುವುದೋ  ಆದಿ ಅಂತ್ಯ

 ತಿಳಿಯದವರು  ಇವರು 

ಸರ್ವ ಜನರ  ಸುಖದಿ 

ಅಡಗಿಹುದು  ತಮ್ಮ  ಹಿತ