ಯಾರಿವಳು ?

ಯಾರಿವಳು ?

ಕವನ

 

ಶ್ರಾವಣದಲ್ಲಿ ಇವಳ ಕಣ್ಣೀರು 
ನೆನೆದು ನನ್ನ ಹೄದಯದ ತುಂಬೆಲ್ಲ
ಆಣೆಕಲ್ಲಿನ ಕವಿತೆ ಆರಿಸಿ ಬಾನ ಬಾಳಲಿ ಮಿಂಚಾಗಿ
ಬಟ್ಟ ಬಯಲಿನಂತಾದವಳು.
 
ನನ್ನನ್ನು ತೊರೆದು ಬದುಕಿನ ಬಯಕೆಯೊಳಗೆ
ಬೆಳದಿಂಗಳ ಉಸಿರುಗಳನ್ನು ಜಿನುಗುವ 
ಹಸಿರುತೋರಣಗಳನ್ನು ಪೋಣಿಸುತ್ತ
ಕವಿತೆಯ ಬಣ್ಣಿಸಹೊರಟಳು.
 
ಯಾರ ಮನದಾಸೆಯ ಕಾಡಿನಲಿ ಹೂವಿನ
ಕಂಪಾಗಿ ಅಕ್ಕರೆಯಿಂದ ಅಪ್ಪಿಕೊಂಡು
ತನು-ಮನ ನಡುವಿನ ಕಂದಕದಲಿ
ನಾಳೆಯ ಬುಗ್ಗೆಗಳನ್ನು 
ಚಿಮ್ಮಿಸ ಹೊರಟವಳೋ.
 
ನನ್ನಲ್ಲೇ ಮೈಮರೆತು ಒಪ್ಪಿಗೆಯ ಅಪ್ಪುಗೆಯ
ಸುತ್ತ ಹರಡಿಸಿ ಕಂಡು-ಕಂಡವರ
ಕೈಗೆ-ಕಾಲಿಗೆ ಬೀಳದೇ ಕನಸುಗಳ ನಾಂದಿಯಿಟ್ಟವಳೋ.
 
ನನ್ನಲ್ಲಿಲ್ಲದ ಚೆಲುವತನಕೆ ಯಾಕೆ
ಮರುಗಿ ಕಣ್ಣೆದರು ಕಾಣದ 
ಜೀವದಾಟಕ್ಕೆ ನಿನ್ನೆಯ ಇಹಗಳನು
ವಿಶ್ಲೇಷಿಸತೊಡಗಿದವಳೋ
 
 
ಇಲ್ಲೇ ಈ ಮೂಳೆ-ಮಾಂಸದ 
ಹಿಂದೆ ಹಗಳಿರಳು ನನ್ನ-ತನ್ನವಗಳ
ಹೆಣೆಕೆಗಳನು ಬಿಚ್ಚಲು
ನಾಚಿಕೆಯಂದ ಕೆಂಪಾಗಿ ಹೋದವಳೋ.
-
 

 

Comments

Submitted by Maalu Sun, 10/07/2012 - 14:11

ಚೆನ್ನಿದೆ ನಿಮ್ಮ ಕವಿತೆ.
'ಆಣೆಕಲ್ಲಿನ...'
ಅದು 'ಆಲಿಕಲ್ಲಿನ' ಇರಬೇಕು.
ಆಲಿಕಲ್ಲು ಎಂದರೆ ಘನೀಭೂತವಾದ ನೀರು.