ಯಾರು ಇರದ ನಾಡಿನಿಂದ

ಯಾರು ಇರದ ನಾಡಿನಿಂದ

ಕವನ

ಯಾರು ಇರದ ನಾಡಿನಿಂದ

ಜನಿಸಿ ಇಳೆಗೆ ಬಂದೆನೊ

ನೆಲದ ಹಸಿರನುಂಡು ಬೆಳೆದೆ

ತಾಯ ಜೊತೆಗೆ ನಲಿದೆನೊ

 

ಕಷ್ಟವಿರಲಿ ನಷ್ಟವಿರಲಿ

ಅಪ್ಪನಿದ್ದ ಸನಿಹದಿ

ನನ್ನ ಕರೆದು ಲಲ್ಲೆ ಮಾಡಿ

ನೋವ ಮರೆವ ಕ್ಷಣದಲಿ

 

ಹರಕು ದಿಂಬು ಹರಿದ ಚಾಪೆ

ನನಗೆ ರಾತ್ರಿ ಗೆಳೆಯರು

ಬೆಳಗು ಆಗೆ ತೋಟದೊಳಗೆ

ಕುಣಿವ ನವಿಲೆ ಮಿತ್ರರು

 

ಬಡತನವೆ ನನ್ನ ಉಸಿರು

ದೇವ ಕೊಟ್ಟ ಉಡುಗೊರೆ

ಅದನೆ ಹೊದ್ದು ನಡೆದೆನಂದು

ನನ್ನ ಬಾಳ ಪಯಣದೆ

 

ನನ್ನನೆತ್ತಿ ಸಲಹಿದವರ

ಮರೆಯಲಾರೆ ಎಂದಿಗು

ಅವರ ಋಣವು ತೀರುವರೆಗು

ಇರುವೆ ನಾನು ನೆಲದೊಳು

 

ನನ್ನ ನೋವು ನನಗೆ ಗೊತ್ತು

ವೇದನೆಯ ಕುಂಭವು

ಹೊರಗೆ ಬರಲು ದಾರಿ ಇಹುದು

ತಾಳ್ಮೆ ಬೇಕು ಮನದೊಳು

 

-ಹಾ ಮ ಸತೀಶ, ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ

ಚಿತ್ರ್