ಯಾರು ನನ್ನವರು

ಯಾರು ನನ್ನವರು

ಬರಹ

ಬೆವರ ಸುರಿಸಿ ಉತ್ತು ಬಿತ್ತು
ದವಸ ದಾನ್ಯ ಬೆಳೆದುಇತ್ತವರೇ
ತಮಗಿಲ್ಲದಿದ್ದರೂ ನಮಗೆ ನೀಡಿದವರೇ

ಸೊಗಸಾಗಿ ಮಾಡಿ ತಿಂದು ಉಂಡು
ಕಾಲ ಕಳೆವ ಮಡದಿ ಮಕ್ಕಳೇ(ಜನಗಳೆ)

ಕಲ್ಲು ಹೊತ್ತು ಕುಳಿ ಕಿತ್ತು
ಮನೆ ಕಟ್ಟಿ ಬಣ್ಣ ಹೊಡೆದು ನಮಗೆ ನೆಲೆ ಮಾಡಿದವರೆ
ಕೂಲಿ ಪಡೆದು ನಮ್ಮ ಮರೆತು ಹೋದವರೆ

ಮನೆ ಬಹಳ ದೊಡ್ಡದೆಂದು ಬಂಧು ಬಳಗ ಬಂದು ನೆಲೆಸಿ
ನೆರಳ ಸುಖವ ಪಡುವವರೆ ಯಾರು ನನ್ನವರು

ಅಂಗಳದಲೆಲ್ಲ ಕಸ ಕಡ್ಡಿ ಹರಡಿ ಮಣ್ಣು ಮಸಿ ಎಲ್ಲ ಕದಡಿ
ಮನೆಯಂಗಳದಲ್ಲಿರುವ ಹೊಗಿಡಗಳ ತುಳಿದು
ಹಾಳು ಮಾಡುವ ಮನೆ ಮಕ್ಕಳು ಮಹಿಳೆಯೇ

ಯಾರು ನನ್ನವರು ಯಾರು ನನ್ನವರು

-ಕವನಪ್ರಿಯ