ಯಾರ ಒಲವಿಗೆ...?
ಕವನ
ಯಾರ ಒಲವಿಗೆ,
ಯಾವ ಸೆಳವಿಗೆ?
ಕವಿಯಾದವನು ನಾನು??
ಕಾವ್ಯ ಹೊಸೆದ
ಸವ್ಯನುಲಿವ
ದಿವ್ಯಾರ್ಥದ ಘನತೆಗೇ?
ಕತ್ತಲಲ್ಲಿ
ಪ್ರೀತಿ ತು೦ಬಿ
ಬೆಳಕನೀವ ಹಣತೆಗೇ?
ಕ೦ಟದಿ ಜನಿಸಿ
ಮೈಮನ ತಣಿಸಿ
ಹಾಡಾಗುವ ಆಸೆಗೇ?
ಕಣ್ಣ೦ಚಲಿ ನಿ೦ತ
ಮನದಾಳದ ಮಾತು
ನನಸಾಗುವ ಕನಸಿಗೇ?
ಗೋಶ್ಟಿಗಳಲಿ
ಕಾವ್ಯ ಸ್ಪುಟಿಸಿ
ಚಪ್ಪಾಳೆ ತ೦ದ ಹಿರಿಮೆಗೇ?
ಪ್ರೀತಿ ಕಳೆದು ,
ದೂರ ನಿ೦ತು
ಆಕೆಯನರಸುವ ಕವಿತೆಗೇ?
ಕವಿತೆ ಹೋಸೆದ ಮನಸಿಗೇ?
ನಿನ್ನ ಬರಹದ ಬಿಸುಪಿಗೆ
ಸಾಟಿಯಾಗದ
ನನ್ನೀ ಕಾವ್ಯ ಕ೦ಡ ಕೊರತೆಗೇ?
ಮಸಿ ಹಡೆವ
ಲೇಖನಿ ತ೦ದ
ಕಾಗದದ ಜೊತೆಗಿನ ಒಸಗೆಗೇ?
ಯಾರ ಒಲವಿಗೆ?
ಯಾವ ಸೆಳವಿಗೆ
ಕವಿಯಾದವನು ನಾನು?
Comments
ಉ: ಯಾರ ಒಲವಿಗೆ...?