ಯಾರ ಗೆಜ್ಜೆಯ ದನಿಯು

ಯಾರ ಗೆಜ್ಜೆಯ ದನಿಯು

ಕವನ

ಯಾರ ಗೆಜ್ಜೆಯ ದನಿಯ ಸಪ್ಪಳ

ನನ್ನನಿಲ್ಲಿಗೆ ಕರೆಸಿತೊ

ಯಾವ ಪ್ರೀತಿಯ ಸ್ವರದ ಕರೆಗೆ

ಹೃದಯ ಒಲುಮೆಯ ಕಂಡಿತೊ

 

ಹೊತ್ತು ಕಂತಿರೆ ಚಂದ್ರ ನಗುತಿರೆ

ನಿನ್ನ ನೆನಪದು ಮೂಡಿತೊ

ಎಲ್ಲೊ ಮರೆಯಲಿ ಕುಳಿತು ಕಾಡಿರೆ

ನನ್ನ ಮೈಮನ ಸೋತಿತೊ

 

ಮಧುರ ಧ್ವನಿಯದು ರಾಗ ಹೊಮ್ಮಿಸೆ

ದೇಹ ಮಿರ ಮಿರ ಮಿಂಚಿತೊ

ಮೋಹ ತುಂಬಿದ ಒಡಲು ಕುಣಿಯಲು

ತನುವು ಮನ್ಮಥನಾಯಿತು

 

ಬಾರೆ ಕೋಮಲೆ ನನ್ನ ಶ್ಯಾಮಲೆ

ಮನವು ತಡೆಯದೆ ಕೇಳಿತು

ಕೈಯ ಹಿಡಿಯೆ ಎದುರು ಬಾರೆ

ಮೈಯ ಕಣಕಣ ಬೇಡಿತು

***

ಹೊಳೆದದ್ದು

ವಿಷಯದಾಳದ ಅರಿವಿದ್ದರೆ ಬರೆಯೋಣ, 

ಇಲ್ಲದಿದ್ದರೆ ಕಲಿತು ಬರೆಯೋಣ, 

ಅದೂ ಆಗದಿದ್ದರೆ ಸುಮ್ಮನಿರೋಣ ! 

ಯಾಕೆಂದರೆ ನಮಗೂ ಕ್ಷೇಮ; 

ಅಂತಹ ಬರಹಗಳನ್ನು ಓದುವ ಓದುಗರಿಗೆ ಇನ್ನೂ ಕ್ಷೇಮ !

-ಹಾ ಮ ಸತೀಶ ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ

ಚಿತ್ರ್