ಯಾವ್ಯಾವ ನಕ್ಷತ್ರ ಹಾಗೂ ರಾಶಿಯವರಿಗೆ ಯಾವ ರುದ್ರಾಕ್ಷಿ ಸೂಕ್ತ?

ಯಾವ್ಯಾವ ನಕ್ಷತ್ರ ಹಾಗೂ ರಾಶಿಯವರಿಗೆ ಯಾವ ರುದ್ರಾಕ್ಷಿ ಸೂಕ್ತ?

ರುದ್ರಾಕ್ಷಿ ಬಗ್ಗೆ ಆಸಕ್ತಿ ಇರುವವರಿಗೆ ಈ ಮಾಹಿತಿ. ಜನ್ಮನಕ್ಷತ್ರ ಹಾಗೂ ಜನ್ಮರಾಶಿಗೆ ಅನುಗುಣವಾಗಿ ಧರಿಸಬೇಕಾದ ರುದ್ರಾಕ್ಷಿಗಳ ವಿವರ ನೋಡೋಣ...

ಕೃತ್ತಿಕಾ, ಉತ್ತರಾ, ಉತ್ತರಾಷಾಢ ನಕ್ಷತ್ರಗಳಲ್ಲಿ ಜನಿಸಿರುವವರಿಗೆ ಏಕಮುಖ, ದ್ವಾದಶಮುಖ, ಏಕಾದಶಮುಖ ರುದ್ರಾಕ್ಷಿ ಧಾರಣೆ.

ರೋಹಿಣಿ, ಹಸ್ತ, ಶ್ರವಣ ನಕ್ಷತ್ರದವರಿಗೆ ದ್ವಿಮುಖ ರುದ್ರಾಕ್ಷಿ ಧಾರಣೆ.

ಮೃಗಶಿರ, ಚಿತ್ತ, ಧನಿಷ್ಟ ನಕ್ಷತ್ರದವರಿಗೆ ತ್ರಿಮುಖಿ ಹಾಗೂ ಷಣ್ಮುಖಿ ರುದ್ರಾಕ್ಷಿ ಧಾರಣೆ.

ಆಶ್ಲೇಷ, ಜ್ಯೇಷ್ಟ, ರೇವತಿ ನಕ್ಷತ್ರದಲ್ಲಿ ಜನಿಸಿದವರಿಗೆ ಚತುರ್ಮುಖ ರುದ್ರಾಕ್ಷಿ ಧಾರಣೆ.

ಪುನರ್ವಸು, ವಿಶಾಖ, ಪೂರ್ವಾಭಾದ್ರಾದವರಿಗೆ ಪಂಚಮುಖಿ ರುದ್ರಾಕ್ಷಿ ಧಾರಣೆ.

ಪುಷ್ಯ, ಅನುರಾಧಾ, ಉತ್ತರಾಭಾದ್ರ ನಕ್ಷತ್ರದವರಿಗೆ ಸಪ್ತಮುಖಿ, ಚತುರ್ದಶಮುಖಿ ರುದ್ರಾಕ್ಷಿ ಧಾರಣೆ.

ಆರಿದ್ರ, ಸ್ವಾತಿ, ಶತಃಭಿಷ ನಕ್ಷತ್ರದವರಿಗೆ ಅಷ್ಟಮುಖಿ ರುದ್ರಾಕ್ಷಿ ಧಾರಣೆ.

ಅಶ್ವಿನಿ, ಮಖ, ಮೂಲಾದವರಿಗೆ ನವಮುಖಿ ರುದ್ರಾಕ್ಷಿ ಧಾರಣೆ,

ಭರಣಿ, ಹುಬ್ಬ, ಪೂರ್ವಾಷಾಢದವರಿಗೆ ದ್ವಿಮುಖಿ ಹಾಗೂ ಷಟ್ಮುಖಿ ರುದ್ರಾಕ್ಷಿ ಧಾರಣೆ ಮಾಡಬಹುದು.

*ಇನ್ನು ಜನ್ಮ ರಾಶಿಯ ದ್ರಷ್ಟಿಯಿಂದ ನೋಡಿ ಹೇಳುವುದಾದರೇ...*

ಮೇಷ ರಾಶಿಯವರು 2/4/5 ಮುಖದ ರುದ್ರಾಕ್ಷಿ,

ವೃಷಭ ರಾಶಿಯವರು 6/2/13 ಮುಖದ ರುದ್ರಾಕ್ಷಿ,

ಮಿಥುನ ರಾಶಿಯವರು 4/8 ಮುಖದ ರುದ್ರಾಕ್ಷಿ,

ಕಟಕ ರಾಶಿಯವರು 5/1/2/14 ಮುಖದ ರುದ್ರಾಕ್ಷಿ,

ಸಿಂಹ ರಾಶಿಯವರು 7/1/9ಮುಖದ ರುದ್ರಾಕ್ಷಿ,

ಕನ್ಯಾ ರಾಶಿಯವರು 3/6ಮುಖದ ರುದ್ರಾಕ್ಷಿ,

ತುಲಾರಾಶಿಯವರು 9/7 ಮುಖದ ರುದ್ರಾಕ್ಷಿ,

ವೃಶ್ಚಿಕ ರಾಶಿಯವರು 10/1/4/14ಮುಖದ ರುದ್ರಾಕ್ಷಿ,

ಧನು ರಾಶಿಯವರು 11/15/9/12ಮುಖದ ರುದ್ರಾಕ್ಷಿ,

ಮಕರ ರಾಶಿಯವರು 1/10/6ಮುಖದ ರುದ್ರಾಕ್ಷಿ,

ಕುಂಭ ರಾಶಿಯವರು 14/7/11ಮುಖದ ರುದ್ರಾಕ್ಷಿ,

ಮೀನ ರಾಶಿಯವರು 12 ಮುಖದ ರುದ್ರಾಕ್ಷಿಯನ್ನು ಧರಿಸಬಹುದಾಗಿದೆ 

ಇವುಗಳನ್ನು ಧರಿಸುವಾಗ ಆಯಾ ವಿಧದ ರುದ್ರಾಕ್ಷಿಗೆ ಸಂಬಂಧಿಸಿದ ಮಂತ್ರಗಳನ್ನು ಪಠಿಸಿದರೆ ಉತ್ತಮ ಫಲಿತಾಂಶ ಪಡೆಯಬಹುದು.

ಇನ್ನು ಒಬ್ಬೊಬ್ಬರದ್ದು ಒಂದೊಂದು ರೀತಿಯ ನಂಬಿಕೆ; ಅಭಿಪ್ರಾಯ ಇರುತ್ತದೆ ಹಾಗಾಗಿ ಅದರ ಕುರಿತು ನಾನು ಹೇಳುವುದಿಷ್ಟೇ...

" ಲೋಕೋ ಭಿನ್ನ ರುಚಿ "

(ಸಂಗ್ರಹ ಮಾಹಿತಿ)