ಯಾವ ಕೊರತೆ?
ಬರಹ
ಹಕ್ಕಿಯ ಹಾಡಿಗೆ ರಾಗಗಳುಂಟೆ
ಹರಿಯುವ ನದಿಗೆ ಜಾಗದನಂಟೆ
ಬೀಸುವ ಗಾಳಿಗೆ ಯಾರ ಚಿಂತೆ
ಸುರಿಯುವ ಮಳೆಗೆ ಸುಳಿಯುಂಟೆ
ಕುಣಿಯುವ ನವಿಲಿಗೆ ತಾಳಗಲಿವೆಯೇ
ಬಣ್ಣದ ಚಿಟ್ಟೆಗೆ ಅಂದದ ಕೊರತೆಯೇ
ವನ್ಯ ಮೃಗಗಳಿಗೆ ಸ್ನೇಹದ ಬರವೆ
ಹಸಿರಿನ ವನಕೆ ಭೇದಗಲಿವೆಯೇ
ಕಾಣುವ ಕಣ್ಣು ಕುರುಡಾಯಿತೇಕೆ
ಕೇಳುವ ಕಿವಿಯು ಕಿವುಡಾಯಿತೇಕೆ
ಶಾಂತಿ ಚಿತ್ತದಿ ಸಂತಸ ಮನಕೆ
ನೆಮ್ಮದಿ ಬದುಕಿಗೆ ಬೇರೆ ಬೇಕೆ