ಯಾವ ಚೆಲುವಿನ ಭಾವ
ಕವನ
ಯಾವ ಚೆಲುವಿನ ಭಾವ
ಮೂಡಿ ನನ್ನೊಳು ಸೇರೆ
ಪ್ರೀತಿ ಪ್ರೇಮದ ತೀರ ಕರೆಯಿತಿಂದು
ಸವಿಯಾಸೆ ಮುಗಿಲಾಗಿ
ಕ್ಷಣದೊಳಗೆ ಕರಗುತಲಿ
ತನುವೊಳಗೆ ಹೃದಯವೂ ಬಂದಿಯಿಂದು
ಕತ್ತಲೆಯ ಸನಿಹದೊಳು
ಮಲಗಿ ವರಗುತಲಿರೆ
ಪ್ರಣಯ ಕಾವ್ಯಕೆಯಿಂದು ಚೆಲುವು ಬಂತು
ಮೆತ್ತನೆಯ ಹಾಸಿಗೆಯು
ಹೂವ ಹಾಸುತ ಕರೆಯೆ
ಮೈಯೆಲ್ಲ ನಲಿವಿನಲಿ ಹೊರಳಿ ಕುಂತು
ಹಸಿಯ ಮನಸಿನ ಗೋಡೆ
ಗಟ್ಟಿಗೊಳ್ಳುತ ಸಾಗೆ
ಮತ್ತೆ ಕನಸಿಗೆ ಜೀವ ಶರಣು ಬರಲು
ಬಂದ ಕರ್ಮವ ಪಡೆದು
ಜೀವನವ ಸವೆಸುತಲಿ
ನನಸ ಮಾರ್ಗದಿ ನಡೆಯೆ ಮುಕ್ತಿ ಸಿಗಲು
ಹಾ ಮ ಸತೀಶ ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಚಿತ್ರ್