ಯಾವ ಸವಿ ಉಳಿದಿಹುದೊ...?

ಯಾವ ಸವಿ ಉಳಿದಿಹುದೊ...?

ಕವನ

ಯಾವ ಸವಿ ಉಳಿದಿಹುದೊ

ಹಳೆಯ ನೆನಪಿನ ನೆಲದಿ

ಹಸಿರಾದ ಬೆಟ್ಟದಡಿ ಮಲ್ಲಿಗೆಯು ಮುದುಡಿ

ಊರ ಹೊರಗಿನ ಬಯಲು

ಕಾಯುತಿದೆ ಇಂದಲ್ಲಿ

ನಾನೆಲ್ಲಿ ಬರುವೆನೋ ಬಾರದಿರುವೆನೊ ನೋಡಿ

 

ಬಂದುಬಿಡು ಎನ್ನುವರು

ಮನೆಯೊಳಗೆ ಯಾರಿಹರು

ಇದ್ದವರು ಗತಿಸಿಹರು ಬಹುವರುಷದಾ ಹಿಂದೆ

ಬೇಲಿಯನು ಹಾಕಿಹರು

ಕಾಲಿಡಲು ಸ್ಥಳವೆಲ್ಲಿ

ನಡೆದಾಡುವ ನೆಲದಿ ಮುಳ್ಳುಗಳೆ ಮುಂದೆ

 

ಹೃದಯ ನೋವನುಯಿಂದು

ಯಾರ ಜೊತೆ ಹಂಚಲೊ

ಹಂಚದಿರು ಹೇಳುತಿದೆ ಒಳ ಮನವುಯಿಂದು

ಕನಸುಗಳು ಬರಬಹುದು

ನನಸುಗಳು ಕಾಣುವವೆ

ಶಕ್ತಿ ತನುವಿನ ಜೊತೆಗೆ ಬಾಳುತಿರುವೆನಿಂದು

 

-ಹಾ ಮ ಸತೀಶ ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ

ಚಿತ್ರ್