ಯಾವ ಹೂವುಗಳನ್ನು ಯಾವ ದೇವರಿಗೆ ಅರ್ಪಿಸಬೇಕು?

ಯಾವ ಹೂವುಗಳನ್ನು ಯಾವ ದೇವರಿಗೆ ಅರ್ಪಿಸಬೇಕು?

ಹಿಂದೂ ಪೂಜಾ ವಿಧಿ ವಿಧಾನಗಳ ಸಂದರ್ಭದಲ್ಲಿ ಹೂವುಗಳಿಗೆ ಪ್ರತ್ಯೇಕ ಸ್ಥಾನವಿದೆ. ದೇವರಿಗೆ ಹೂವುಗಳನ್ನು ಅರ್ಪಿಸದೆಯೇ ಪೂಜಾ ಸಂಪನ್ನಗೊಳ್ಳುವುದಿಲ್ಲ. ಆದರೆ ಯಾವ ದೇವರಿಗೆ ಯಾವ ಹೂವು ಇಷ್ಟ ಎಂಬುದನ್ನು ಮೊದಲೇ ಅರಿತುಕೊಂಡು ಪೂಜೆಯನ್ನು ಸಲ್ಲಿಸಿದರೆ ದೇವರ ಅನುಗ್ರಹಕ್ಕೆ ನಾವು ಶೀಘ್ರವೇ ಪಾತ್ರರಾಗುತ್ತವೇ. ಅದಕ್ಕೆಂದೇ ಇಂದಿನ ಲೇಖನದಲ್ಲಿ ಯಾವ ಹೂವನ್ನು ಯಾವ ದೇವರಿಗೆ ಅರ್ಪಿಸಲಾಗುತ್ತದೆ ಎಂಬುದನ್ನು ತಿಳಿದುಕೊಳ್ಳಲಿದ್ದೇವೆ.

ಪೂಜೆಗೆ ಹೂವು ಏಕೆ ಅತಿ ಮುಖ್ಯ?

ವಾತಾವರಣದಲ್ಲಿ, ನಿರ್ದಿಷ್ಟ ದೇವರುಗಳು ಕೆಲವೊಂದು ಹೂವುಗಳಿಗೆ ಆಕರ್ಷಿತರಾಗಿರುತ್ತಾರೆ. ಅವರುಗಳು ಆವರ್ತನೆಗಳನ್ನು ಸ್ವೀಕರಿಸಿದಾಗ ಅದನ್ನು ಮರಳಿ ವಾತಾವರಣಕ್ಕೆ ಕಳುಹಿಸುತ್ತಾರೆ ಇದನ್ನು "ಪವಿತ್ರಕ" ಎಂದು ಕರೆಯಲಾಗುತ್ತದೆ. ಇದನ್ನು ಇನ್ನಷ್ಟು ವಿವರವಾಗಿ ತಿಳಿದುಕೊಳ್ಳಲು ದಾಸವಾಳ ಹೂವನ್ನು ಪರಿಗಣನೆಗೆ ತೆಗೆದುಕೊಳ್ಳೋಣ.

ದಾಸವಾಳದಲ್ಲಿದೆ ದೈವಿಕ ಶಕ್ತಿ!

ಭೂಮಿಯಲ್ಲಿ ಗಣೇಶ ಸಿದ್ಧಾಂತಗಳಿದ್ದು ಇದು ಹೂವಿನ ಕೇಂದ್ರ ಭಾಗವನ್ನು ಆಕರ್ಷಿಸುತ್ತದೆ. ಇದು ವರ್ತುಲಗಳ ಮಾದರಿಯಲ್ಲಿ ಆವರ್ತನೆಗಳನ್ನು ಕಳುಹಿಸುತ್ತದೆ. ಗಣೇಶ ಸಿದ್ಧಾಂತವು ಕಾಂಡದ ಮೂಲಕ ಹೀರಿಕೊಳ್ಳಲ್ಪಡುತ್ತದೆ ಮತ್ತು ದಾಸವಾಳದ ದಳದ ಮೂಲಕ ವಾತಾವರಣಕ್ಕೆ ಮರಳುತ್ತದೆ. ಪ್ರಾಣ ಶಕ್ತಿಯನ್ನು ಉತ್ಪತ್ತಿ ಮಾಡಲು ದಾಸವಾಳ ಕಾರಣವಾಗುತ್ತದೆ. ದಾಸವಾಳದ ಸ್ವಭಾವ ರಾಜ ಸತ್ವವಾಗಿದೆ. ಇದರ ದಳಗಳು ದೈವಿಕ ಶಕ್ತಿಯನ್ನು ಉತ್ಪಾದಿಸುತ್ತದೆ ಮತ್ತು ದೈವಿಕ ಚೈತನ್ಯವನ್ನು ಉಂಟು ಮಾಡುತ್ತದೆ. ಇದರಿಂದ ವಾತವಾರಣದಲ್ಲಿರುವ ಋಣಾತ್ಮಕ ಶಕ್ತಿ ನಾಶವಾಗುತ್ತದೆ.

ನಿರ್ದಿಷ್ಟ ದೇವರುಗಳಿಗೆ ನಿರ್ದಿಷ್ಟ ಹೂವುಗಳ ಪೂಜೆ ಏಕೆ?

ಇದು ಹಿಂದೆ ವೈಜ್ಞಾನಿಕ ಸತ್ಯ ಅಡಗಿದೆ. ಪ್ರತಿಯೊಂದು ಹೂವು ಕೂಡ ತನ್ನದೇ ಆದ ಸುವಾಸನೆ ಮತ್ತು ಬಣ್ಣವನ್ನು ಒಳಗೊಂಡಿದೆ. ಅಂದರೆ ಪ್ರತಿಯೊಂದು ಹೂವಿನ ಆವರ್ತನೆ ಶಕ್ತಿ ವಿಭಿನ್ನವಾಗಿದೆ. ನಿರ್ದಿಷ್ಟ ದೇವರುಗಳ ದೈವಿಕ ಶಕ್ತಿಯನ್ನು ನಿರ್ದಿಷ್ಟ ಹೂವುಗಳು ಹೀರಿಕೊಳ್ಳುತ್ತವೆ.

ಹೂವುಗಳು ತಾಜಾ ಇರಬೇಕು ಎಂದು ಏಕೆ ಹೇಳುತ್ತಾರೆ?

ದೇವರುಗಳಿಗೆ ಅತ್ಯಂತ ಉತ್ತಮವಾಗಿರುವುದನ್ನೇ ನೀಡಬೇಕು ಎಂದು ವೇದಗಳು ತಿಳಿಸುತ್ತವೆ. ಆದ್ದರಿಂದ ಹೂವುಗಳ ವಿಚಾರದಲ್ಲಿ ಕೂಡ ಇದೇ ಸಿದ್ಧಾಂತವನ್ನು ಪಾಲಿಸಲಾಗುತ್ತದೆ. ಕ್ರಿಮಿಗಳಿಂದ ಹಾನಿಗೊಳ್ಳದ ತಾಜಾ ಹೂವುಗಳನ್ನೆ ದೇವರ ಪೂಜೆಗೆ ಬಳಸಲಾಗುತ್ತದೆ. ಇದರಿಂದ ದೇವರು ಸಂತುಷ್ಟಗೊಂಡು ನಮ್ಮನ್ನು ಅನುಗ್ರಹಿಸುತ್ತಾರೆ ಎಂದು ನಂಬಲಾಗಿದೆ. ಆದ್ದರಿಂದ ನಾವು ನೀಡುವುದು ಉತ್ತಮವಾಗಿದ್ದರೆ ನಮಗೆ ಮರಳಿ ಬರುವುದು ಉತ್ತಮವಾಗಿರುತ್ತದೆ. ಅಂತೆಯೇ ಹೂವು ಒಣಗಿದ್ದರೆ ಅದರ ಸಾಮರ್ಥ್ಯ ಇಳಿಮುಖವಾಗುತ್ತದೆ.

ಹೂವುಗಳನ್ನು ಪೂಜೆಗೆ ಬಳಸುವಾಗ ಕೆಲವೊಂದು ನಿಯಮಗಳಿವೆ

*ಹೂವನ್ನು ಎಡಗೈಯಲ್ಲಿ ಸ್ಪರ್ಶಿಸಬಾರದು ಮತ್ತು ಅದನ್ನು ಮೂಸಿ ನೋಡಬಾರದು.

* ಸುವಾಸನೆ ರಹಿತ ಹೂವುಗಳನ್ನು ಪೂಜೆಗೆ ಬಳಸಬಾರದು

*ಸರಿಯಾಗಿ ಅರಳಿರದ ಹೂವನ್ನು ದೇವರಿಗೆ ಅರ್ಪಿಸಬಾರದು

*ಮೊಗ್ಗನ್ನು ಕೂಡ ಬಳಸುವ ಹಾಗಿಲ್ಲ

*ಬೇರೆಯವರ ಮನೆಯಿಂದ ಕದ್ದು ತಂದಿರುವ ಹೂವುಗಳನ್ನು ಬಳಸಬಾರದು

*ನೀರಿನಲ್ಲಿ ಅದ್ದಿದ ತೊಳೆದ ಹೂವುಗಳನ್ನು ಕೂಡ ಬಳಸಬಾರದು

ಪೂಜೆಗೆ ಬಳಸಬಹುದಾದ ಹೂವುಗಳು

*ತಾವರೆಯ ಮೊಗ್ಗನ್ನು ದೇವರಿಗೆ ಅರ್ಪಿಸಬಹುದು

*ಹೂದೋಟದವರ ಮನೆಯಿಂದ ತಂದ ಹೂವನ್ನು ಕದ್ದಿದ್ದು ಎಂದು ಪರಿಗಣಿಸಲಾಗುವುದಿಲ್ಲ

*ನಾವು ಹೂವಿನ ಮೇಲೆ ನೀರನ್ನು ಚಿಮುಕಿಸಬಹುದು ಆದರೆ ಹೂವನ್ನು ನೀರಿನಲ್ಲಿ ಮುಳುಗಿಸಬಾರದು.

ಸೂರ್ಯಾಸ್ತದ ನಂತರ ಏಕೆ ಹೂವನ್ನು ಕೀಳಬಾರದು?

ಸನಾತನ ಹಿಂದೂ ಧರ್ಮವು ಪ್ರತಿಯೊಂದು ಕಾರ್ಯಕ್ಕೂ ಸಮಯವನ್ನು ನಿಗದಿಪಡಿಸಿದೆ. ಅಂತೆಯೇ ಹೂವು ಕೀಳುವುದಕ್ಕೆ ಕೂಡ. ಸಂಜೆಯ ಹೊತ್ತು ಹೂವು ಕೀಳುವುದನ್ನು ನಿಷೇಧಿಸಲಾಗಿದೆ. ಸೂರ್ಯಾಸ್ತದ ಸಮಯದಲ್ಲಿ ಋಣಾತ್ಮಕ ಶಕ್ತಿ ಅಧಿಕವಾಗಿರುತ್ತದೆ ಮತ್ತು ಹೂವುಗಳು ದುಷ್ಟತನವನ್ನು ಹೀರಿಕೊಳ್ಳುತ್ತವೆ. ಆದ್ದರಿಂದ ಈ ಸಮಯದಲ್ಲಿ ಹೂವು ಕೀಳುವುದನ್ನು ನಿಷೇಧಿಸಲಾಗಿದೆ. ಆದರೆ ಬೇಲ, ಚಮೇಲಿ, ರಜನೀಗಂಧ ಮೊದಲಾದ ಹೂವುಗಳು ಸಂಜೆಯ ಹೊತ್ತು ಅರಳುತ್ತವೆ ಅಂತೆಯೇ ಇತರ ಹೂವುಗಳಿಗೆ ಹೋಲಿಸಿದರೆ ಅವುಗಳ ಸುವಾಸನೆ ಅಧಿಕವಾಗಿರುತ್ತವೆ.

ಹೂವುಗಳನ್ನು ಕೀಳುವುದಕ್ಕೆ ನಿಯಮಗಳು

*ಸ್ನಾನ ಮಾಡದೆಯೇ ಚಪ್ಪಲಿಗಳನ್ನು ಧರಿಸಿಕೊಂಡು ಹೂವುಗಳನ್ನು ಕೀಳಬಾರದು.

*ನೀವು ಹೂವು ಕೀಳುವಾಗ ಅದಕ್ಕೆ ನೋವಾಗದ ರೀತಿಯಲ್ಲಿ ಹಿಂಸೆಯನ್ನುಂಟು ಮಾಡದೆಯೇ ಗೌರವಯುತವಾಗಿ ಕೀಳಬೇಕು.

ಹೂವು ಕೀಳುವಾಗ ಮಂತ್ರವನ್ನು ಪಠಿಸಬಹುದು.

ಯಾವ ಹೂವು ಯಾವ ದೇವರಿಗೆ?

ಶಿವ ದೇವರಿಗೆ

ಯಾವುದೇ ಬಿಳಿ ಹೂವು. ನೀಲಿ ತಾವರೆ, ಮಾಲುಶ್ರೀ, ಕನೀರ್ ಇತರ ಹೂವುಗಳಾದ ಬೇಲ ಎಲೆಗಳು, ದತ್ತೂರ ಹೂವು, ನಾಗಕೇಶರ, ಹರಿಶಿಂಗಾರ್, ಶಿವನ ಮೆಚ್ಚಿನ ಹೂವುಗಳಾಗಿವೆ. ಆದರೆ ಶಿವ ಪೂಜೆಯ ಸಮಯದಲ್ಲಿ ನೀವು ಬಿಲ್ವಪತ್ರೆಯಿಲ್ಲದೆ ಪೂಜೆ ಮಾಡುವಂತಿಲ್ಲ. ಕೇತಕಿ ಹೂವು ನಿಷೇಧವಾಗಿದೆ.

ಗಣೇಶ

ಯಾವುದೇ ಕೆಂಪು ಬಣ್ಣದ ಹೂವು. ದಾಸವಾಳ ಗಣೇಶನಿಗೆ ಮೆಚ್ಚಿನ ಹೂವಾಗಿದೆ. ತಾವರೆ, ಚಂಪ, ಗುಲಾಬಿ, ಮಲ್ಲಿಗೆ, ಸೂರ್ಯಕಾಂತಿ, ಗರಿಕೆ ಹುಲ್ಲು, ಬಿಲ್ವ ಪತ್ರೆಯನ್ನು ಪೂಜೆಗೆ ಬಳಸಬಹುದು. 21 ಬಗೆಯ ಹೂವುಗಳನ್ನು ಗಣೇಶ ಪೂಜೆಯ ಸಮಯದಲ್ಲಿ ಬಳಸಬೇಕು.

ಪಾರ್ವತಿ

ಶಿವನಿಗೆ ಅರ್ಪಿಸುವ ಎಲ್ಲಾ ಹೂವುಗಳನ್ನು ಪಾರ್ವತಿ ದೇವಿಗೆ ಅರ್ಪಿಸಬಹುದು. ಬಿಳಿ ತಾವರೆ, ಬೇಲ, ಪಲಾಶ್, ಮದಾರ್, ಅಪಮರ್ಗ್, ಚಂಪಾ ಮತ್ತು ಚಮೇಲಿಯನ್ನು ಬಳಸಬಹುದು.

ದುರ್ಗಾ

ಎಲ್ಲಾ ಕೆಂಪು ಹೂವುಗಳು. ತಾವರೆ, ಮೋಗ್ರಾ ಹೂವು, ಬೇಲಾ ಹೂವುಗಳನ್ನು ಅರ್ಪಿಸಬಹುದು.

ವಿಷ್ಣು

ವಿಷ್ಣುವಿಗೆ ತಾವರೆ ಎಂದರೆ ಬಲು ಪ್ರೀತಿ. ಕೆಂಪು ತಾವರೆ, ಮಾಲುಶ್ರೀ, ಜೂಹಿ, ಕದಂಬ, ಕೇವಾರ, ಚಮೇಲಿ, ಚಂಪಾ, ಅಶೋಕ, ಮಲ್ತಿ, ಬಸಂತಿ ಹೂವುಗಳನ್ನು ವಿಷ್ಣು ಪೂಜೆಗೆ ಬಳಸಬಹುದು.

ಲಕ್ಷ್ಮೀ ಪೂಜೆ

ತಾವರೆ ಆಕೆಗೆ ಪ್ರಿಯವಾದ ಹೂವಾಗಿದೆ. ಹಳದಿ ಗೈಂದ, ದೇಸಿ ಗುಲಾಬ್, ಗುಲಾಬಿ ಬಣ್ಣದ ತಾವರೆ ಆಕೆಗೆ ಪ್ರಿಯವಾದುದು.

ದತ್ತಾತ್ರೇಯ

ಮಲ್ಲಿಗೆ, ಬಿಲ್ವ ಪತ್ರೆ, ಅದುಂಬರ್ ಎಲೆಗಳು

ಹನುಮಾನ್

ಚಮೇಲಿ ಹೂವು, ತುಳಸಿ ಮಾಲೆ

ಬ್ರಹ್ಮ- ಬಿಳಿ ಕಮಲ

ಮಹಾಕಾಳಿ- ಹಳದಿ ಕನೇರ

ಸರಸ್ವತಿ ಪೂಜೆ- ಬಿಳಿ ಹೂವು, ಬಿಳಿ ತಾವರೆ, ಪಾಲಾಶ್

ಸೂರ್ಯ- ತಾವರೆ ಹೂವು

ಶನಿ - ನೀಲಿ ಬಣ್ಣದ ಹೂವು

ಕೃಷ್ಣ ಪೂಜೆ

ತುಳಸಿ ಎಲೆಗಳು, ನೀಲಿ ತಾವರೆ, ಪಾರಿಜಾತ, ನಂದಿ ಬಟ್ಟಲು

ಯಾವ ಹೂವು ಯಾವ ದೇವರಿಗೆ ನಿಷೇಧಿತವಾಗಿದೆ

*ಶಿವ - ಚಂಪ, ಕೇತಕಿ, ಕೇವಾಡ. ಈ ಹೂವುಗಳು ಶಿವನಿಂದ ಶಾಪಗ್ರಸ್ತಗೊಂಡಿವೆ.

*ಪಾರ್ವತಿ - ಅರ್ಕ, ಅಮ್ಲ

*ಗಣೇಶ - ಕೇತಕಿ ಹೂವು, ತುಳಸಿ

*ರಾಮ - ಅರಳಿ

*ಸೂರ್ಯ - ಬಿಲ್ವ

*ಭೈರವ - ನಂದಿ ಬಟ್ಟಲು

ಓಂ ನಮೋ ಭಗವತೇ ವಾಸುದೇವಾಯ

(ಆಧಾರ)