ಯುಗಕೆ ನವ ಯುಗಾದಿ!
ಕವನ
ವರುಷ ವರುಷ ಉರುಳಿದರು
ಜನರ ಮನದ ಹೃದಯದಲಿ
ಸವಿ ಜೇನನು ತುಂಬಲು
ಯುಗಾದಿಯು ಬಂದಿದೆ
ನವ ಗೀತೆಯ ಹಾಡುತಿದೆ
ಹಕ್ಕಿ ಪಿಕಗಳಿಂಚರಕೆ
ಇಳೆಯು ತನ್ನ ಮರೆಯುತಲೆ
ನವೋಲ್ಲಾಸ ಹೊಂಗಿರಣಕೆ
ಯುಗಾದಿಯು ಬಂದಿದೆ
ನವ ಜ್ಯೋತಿಯ ಹರಡುತಿದೆ
ಬಂಧುರತೆಯ ಭಾವನೆಯೊಲು
ಸೃಷ್ಟಿ ಲಯದ ತಾಣದೊಳಗೆ
ನಮ್ಮನೆಲ್ಲ ಕುಣಿಸಲಿಂದು
ಯುಗಾದಿಯು ಬಂದಿದೆ
ನವ ಪಥವ ತುಳಿಯುತಿದೆ
ಜೊಮ್ಮನೆಯ ಗಾನ ಪ್ರಭೆಗೆ
ಥಕ ಥೈಯ ಜಿನುರೆನುತ
ನಡು ಬಗ್ಗಿಸಿ ಕುಣಿದಾಡುತ
ಯುಗಾದಿಯು ಬಂದಿದೆ
ನವ ಜಾಗೃತಿ ತುಂಬುತಿದೆ
ಭಾರತೀಯ ಮನದೊಳಗೆ
ಕುಸುಮ ಸುಧೆಯ ಚೆಲ್ಲಲು
ಗಂಧಯುಕ್ತ ಭಾವನೆಯೊಲು
ಯುಗಾದಿಯು ಬಂದಿದೆ
ಯುಗ ಧರ್ಮವ ಸಾರುತಿದೆ
-ಹಾ ಮ ಸತೀಶ ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಚಿತ್ರ್
