ಯುಗದ ಕವಿ ಕುವೆಂಪು
ಅರಿಯಲೇಬೇಕು ಯುಗದ ಕವಿ ಕುವೆಂಪುರವರನ್ನು,
ಓದಲೇಬೇಕು ಜಗದ ಕವಿ ಕುವೆಂಪುರವರ ಸಾಹಿತ್ಯವನು/ಬರಹವನು,
ಅರಿತು-ಓದಿದಾಗ ಪ್ರತಿಯೋರ್ವನು ಬಯಸುವನು ಮನುಜನಾಗಬೇಕೆಂಬುದನು...
ಸೃಷ್ಟಿಸಿಹರು ಅಕ್ಷರ ಲೋಕದಲಿ ಹೊಸದೊಂದು ಸಂಚಲನವನು,
ಜಗದಗಲ ಹರಡಿಸಿದರು ಕನ್ನಡ ಭಾಷೆಯ ತತ್ವ-ಸತ್ವ- ಹಿರಿಮೆಯ ಕಂಪನು,
ಆರಾಧಿಸಿ-ಪೂಜಿಸಿದರು ಈ ನಿಸರ್ಗ ಮಾತೆಯನು,
ಬರೆದಿಹರು ವಿಶ್ವಮಾನವ ಗೀತೆಯನು,
ಸಾರಿಹರು ವಿಶ್ವಮಾನವನಾಗೆಂಬ ಸಂದೇಶವನು,
ಓ ನನ್ನ ಚೇತನ ಆಗು ನೀ ಅನಿಕೇತನ ಗಾಯನದ ಜೊತೆಗೆ ಬದುಕಿನ ಬಂಡಿಯ ಸಾಗಿಸಿ,
ಜಾತಿ-ಮತ-ಕಟ್ಟುಪಾಡುಗಳ ದಿಕ್ಕರಿಸಿ,
ಪ್ರತಿಯೊಬ್ಬರನು ಜಾತ್ಯಾತೀತರನ್ನಾಗಿಸಿ ನೈತಿಕರನ್ನಾಗಿ ರೂಪಿಸಿ,
ನಾವು - ನಮ್ಮವರೆಂದು ನಾವೆಲ್ಲಾ ಮಾನವ ಕುಲ ಬಾಂಧವರೆಂದು ಎಲ್ಲರನು ಪ್ರೀತಿಸಿ...
"ಮನುಷ್ಯಜಾತಿ ತಾನೊಂದೆ ವಲಂ "ಎಂಬುದನು ಅರಿತು ಸ್ವೀಕರಿಸಬೇಕು,
ಪ್ರತಿಯೊಬ್ಬರೂ ಸ್ವಂತ ವೈಚಾರಿಕ ದೃಷ್ಟಿಕೋನ ಬೆಳೆಸಿಕೊಳ್ಳಬೇಕು,
ವರ್ಣಗಳಿಂದ ರೂಪಿತ ಮನುಷ್ಯರನ್ನು ಗುರುತಿಸುವ ವ್ಯವಸ್ಥೆ ತೊಲಗಿಸಬೇಕು,
ಜಾತಿ-ಮತ ತೊಲಗಿ ಆಧ್ಯಾತ್ಮವು ವೈಜ್ಞಾನಿಕ ತತ್ವವಾಗಬೇಕು,
ಪ್ರತಿಯೊಬ್ಬ ವ್ಯಕ್ತಿಯೂ ಬಾಳಿ ಬದುಕಬೇಕು,
ಬದುಕಿನಲ್ಲಿ ಎಲ್ಲವನೂ ಅರಿಯಬೇಕು-ತಿಳಿಯಬೇಕು-
ಓದಬೇಕು,
ತನ್ನ ತಾನರಿತು ತನ್ನ ಬಗೆಗಿನ ದರ್ಶನವನು ತಾನೇ ಕಂಡುಕೊಳ್ಳಬೇಕು,
ಮತವೆಂಬುವುದು ಮನುಜಮತವಾಗಬೇಕು,
ಪಥವೆಂಬುವುದು ವಿಶ್ವಪಥವಾಗಬೇಕು,
ಮನುಷ್ಯ ವಿಶ್ವಮಾನವನಾಗಬೇಕು,
ಮನುಷ್ಯನಾಗಿ ರೂಪಿತವಾಗಬೇಕು...
ಸಾಗುವ ದಾರಿಯಲಿ ಎಲ್ಲಿಯೂ ನಿಲ್ಲದಿರು,
ಮನೆಯ ಬಗ್ಗೆ ಅತಿ ಆಸೆ ಹೊಂದದಿರು,
ಕೊನೆಯನೆಂದು ಮುಟ್ಟದಿರು- ಇವುಗಳನ್ನೆಲ್ಲ ಮೀರಿದ ಬದುಕಿನ ಗುರಿಯನ್ನು ತಲುಪುತಿರು,
ಸಾಗುವ ದಾರಿ ಅನಂತವಾಗಿಹುದು ಎಲ್ಲರೊಂದಿಗೆ ಹೊಂದಿಕೊಂಡು ಪ್ರೀತಿಯಿಂದ ಬದುಕುತಿರು....
-ಶಾಂತಾರಾಮ ಶಿರಸಿ, ಉತ್ತರ ಕನ್ನಡ.