ಯುಗಾದಿ ಗೀತ

ಯುಗಾದಿ ಗೀತ

ಬರಹ

ಅಂತ್ಯವಾಯ್ತು
ಆದಿ ಬಂತು
ಓಹೋ! ಹರುಷ
ಹೊಸ ವರುಷ
ಹೊಸ ವರುಷ
ಯಾರಲ್ಲಿ ? ಯಾರಲ್ಲಿ ?
ಯಾರಿಹರು ಅಲ್ಲಿ

ಭಾರ್ಗವ ರಾಜನೋ
ಅಂಗಾರಕ ಸಚಿವನೋ
ಕಾಯುವವನು ಸೋಮನೋ
ಕಾಣೆನೋ ಕಾಣೆನೋ
ಬಾ ! ಎಂದೊರಲಿ
ಉರುಳುರುಳಿ ಬಿದ್ದೆನೋ

ಧಿಗ್ಗನೆದ್ದು ಕುಳಿತು
ಧಿಂಕಿಟ ಧೀಂಕಿಟ
ತಂ ಕಿಟ ತೋಂ ಕಿಟ
ನೋಡು ಕಾಲಾಟ
ಸತ್ಯ ದೇವ
ಸಸ್ಯ ದೇವ
ತನ್ನಿರೈ ತನ್ನಿರೈ
ವೃದ್ಧಿ
ಸಂವೃದ್ಧಿ

ನುಡಿ ಕಟ್ಟಲು
ನಾ ಮುಂದೆ, ಮುಂದೆ
ಪ್ರತಿಯೊಂದು ದಂಧೆ
ಅತ್ತಲಾ ಕನ್ನಡಾಂಬೆ
ಮನದೊಳಗೆ ಪಾಯ
ಬೀಳದೆ ನುಡಿ ಕಟ್ಟಲಹುದೇ ?

ನಮ್ಮಾಯ್ಕೆಯ ಜನರು
ಕಿಷ್ಕಿಂಧಾ ಪುರದವರು
ನೀ ಕೊಟ್ಟರೆ ನಾನಿಲ್ಲೇ
ಇಲ್ಲದಿರೆ ನಾನೊಲ್ಲೆ
ಅಲ್ಲಿಂದಿಲ್ಲಿಗೆ ಮಂಗಾಟ
ಕೇಳಿಸದೋ
ಪ್ರಜೆಗಳ ಕೂಗಾಟ

ಕೊಡು ಕೊಡು
ತಾ ಕೊಡು ಇಲ್ಲಿ
ಇದು ಇನ್ನೆಷ್ಟು ದಿನ
ತಿಂದುಂಡು
ಡರ್ರ್ ನೆ ತೇಗಿ
ಮೆರೆವುದೆಷ್ಟು ದಿನ
ಧಗ ಧಗನೆ
ಉರಿ ಉರಿದು
ಹತ್ತಿಹುದು ನೋಡು
ವಡಬಾನಲ

ರೋಧಿಸು
ಪ್ರತಿರೋಧಿಸು
ವಿರೋಧಿಸು
ಈ ಯುಗ ನಿನ್ನದೇ
ಆದಿ ಅಂತ್ಯ ಧತನದು
ಈ ಯುಗ
ನಿನ್ನದು ನಿನ್ನದು

ಏನುಂಟು
ಯುಗದಲ್ಲಿ
ಅದೇ ಜಗಳ
ಅದೇ ಕದನ
ಮಾರನುರವಣೆ
ಹರಿ ನಿರ್ವರ್ಣ
ವಸುಧೆ ಸುವರ್ಣೆ
ಅದೇ ಬೇವು
ಅದೇ ಬೆಲ್ಲ
ಏನುಂಟು ?
ಏನಿಲ್ಲ?