ಯುಗಾದಿ ಬಂತಿದೋ ಯುಗಾದಿ....
ಕವನ
ಯುಗಾದಿ ಬಂತಿದೋ ಯುಗಾದಿ
ಯುಗದ ಆರಂಭವೆ ಯುಗಾದಿ॥
ಚೈತ್ರದ ಸುಂದರಿ ನೀ ಯುಗಾದಿ
ಬೇವುಬೆಲ್ಲ ಸವಿಯ ಯುಗಾದಿ
ಪಂಚಾಂಗ ಪೂಜೆಯ ಯುಗಾದಿ
ನವ ಚಂದ್ರಮನ ಯುಗಾದಿ॥
ತಳಿರು ತೋರಣದ ಯುಗಾದಿ
ಪ್ರಕೃತಿಯ ಚಿಗುರಿನ ಯುಗಾದಿ
ಪಾಡ್ಯಮಿ ದಿನವೇ ಯುಗಾದಿ
ಪಚ್ಚಡಿ ಸವಿಯುವ ಯುಗಾದಿ॥
ರಂಗಿನ ರಂಗೋಲೀ ಯುಗಾದಿ
ಎಣ್ಣೇಯ ಸ್ನಾನದಾ ಯುಗಾದಿ
ಹೊಸಬಟ್ಟೆ ಉಡುವ ಯುಗಾದಿ
ಹೋಳಿಗೆ ಊಟದ ಯುಗಾದಿ॥
ನಲಿವಿನ ಹಬ್ಬವಿದು ಯುಗಾದಿ
ದುಗುಡವ ಕಳೆಯುವ ಯುಗಾದಿ
ವರುಣನ ಕರೆಯುವ ಯುಗಾದಿ
ಒಳ್ಳೇಯ ಮಾತೀನ ಯುಗಾದಿ॥
ಬ್ರಹ್ಮಾಂಡ ಸೃಷ್ಠಿಯೇ ಯುಗಾದಿ
ವಿಶ್ವ ಮಾನವತೆಯ ಯುಗಾದಿ
ಒಳಿತನು ಬಯಸುವ ಯುಗಾದಿ
ಹಬ್ಬಗಳ ಸಾಮ್ರಾಟ ಯುಗಾದಿ॥
ಎಲ್ಲರಿಗೂ ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು
-ಕೆ ನಟರಾಜ್, ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಚಿತ್ರ್