ಯುಗ ಪುರುಷ, ನಮ್ಮ ಪ್ರೀತಿಯ ಬಾಪುವಿಗೆ ನಮನಗಳು.

ಯುಗ ಪುರುಷ, ನಮ್ಮ ಪ್ರೀತಿಯ ಬಾಪುವಿಗೆ ನಮನಗಳು.

ಬರಹ

ಖಾದಿಯ ಪುನರಾವತಾರ :

ಆಗಸ್ಟ್ , ೧೫ ಸಮೀಪಿಸುತ್ತಿದೆ. ನಾವೆಲ್ಲ ನಮ್ಮ ಭಾರತೀಯ ಸ್ವಾತಂತ್ರ್ಯಸಂಗ್ರಾಮದಲ್ಲಿ ಗೆದ್ದು, ಶತಮಾನಗಳ ದಾಸ್ಯದಿಂದ ಇಂದು ಮುಕ್ತರಾಗಿದ್ದೇವೆ. ನಾವು, ನಮ್ಮ ಮಕ್ಕಳು, ಯುವಕರು, ಸ್ವಚ್ಛಂದ ವಾತಾವರಣದಲ್ಲಿ ಉಸಿರಾಡುವಂತಾಗಿದೆ. ನಮ್ಮದೇ ಸರ್ಕಾರ ; ನಮ್ಮವರೇ ನಮಗೆ ಬೇಕಾದಹಾಗೆ ಆಳಲು ಸಾದ್ಯವಾಗಿದೆ. ಈವರ್ಷ ನಮ್ಮ ರಾಷ್ಟ್ರಾದ್ಯಕ್ಷೆಯಾಗಿ, ಶ್ರೀಮತಿ ಪ್ರತಿಭಕ್ಕ ಬಂದಿದ್ದಾರೆ. ಇನ್ನೇನು ಬೇಕು ? ಎಲ್ಲೆಡೆಯೂ ಆನಂದವೇ ಆನಂದ, ಸಂಭ್ರಮ !

ನಾವು ಆ ಸುದಿನದಂದಾದರೂ ನಮ್ಮಗಮನ ಬೇರೆ ಕಡೆಗೆ ಹರಿಸದೆ, ನಮ್ಮ ರಾಷ್ಟ್ರಕ್ಕೆ ಪ್ರಾಣತೆತ್ತ, ಬಲಿದಾನ ಮಾಡಿದ ಮಹಾನ್ ಚೇತನಗಳನ್ನು ಸ್ಮರಿಸೋಣ. ಅವರಿಗೆ ಶ್ರದ್ಧಾಂಜಲಿ ಸಲ್ಲಿಸೋಣ. ಆ ಕಷ್ಟದ ದಿನಗಳನ್ನು ನೆನೆಯೋಣ. ಮಹಾತ್ಮರ ಜೀವನ ಚರಿತ್ರೆಯನ್ನು ಆದಿನವಾದರು ಓದಿ ತಿಳಿದುಕೊಳ್ಳೋಣ. ನಮ್ಮ ಮಕ್ಕಳಿಗೆ, ಅದರ ಬಗ್ಗೆ ಸರಿಯಾಗಿ ತಿಳುವಳಿಕೆ ಕೊಡೋಣ. ಇದು ನಾವು ಆ ದಿನ ಮಾಡಬೇಕಾದ ಪ್ರಮುಖ ಕರ್ತವ್ಯ.

೧೯೫೩ ರಲ್ಲಿ ಶುರುವಾದ ಖಾದಿ K & VIB, ೧೫೬ ಪ್ರಾಂತೀಯ ಕೆಂದ್ರಗಳನ್ನು ಹೊಂದಿದೆ. ಸ್ವಾತಂತ್ರ್ಯಗಳಿಸಲು ಹೋರಾಟದಲ್ಲಿ ಪ್ರಮುಖಪಾತ್ರ ವಹಿಸಿದ್ದ, ತನ್ನ ಆದಿನಗಳ ರೂಪದಿಂದ ಈಗ ಖಾದಿ ಸಮಯದ ನಾಗಾಲೋಟದಲ್ಲಿ ಸಕ್ರಿಯವಾಗಿ ಪಾಲ್ಗೊಂಡು, ಒಂದು ಅತ್ಯುತ್ತಮ ಬ್ರಾಂಡ್ ಆಗಿ ಪರಿವರ್ತನೆಗೊಂಡಿದೆ. ಇದನ್ನು ನಾವು " ಖಾದಿಯ ಪುನರಾವತಾರ " ಎನ್ನಬಹುದು. ಅದು ಅನಿವಾರ್ಯ ಕೂಡ. ಅಂದಿನ ಅವಶ್ಯತೆಗಳಿಗೆ ಸ್ಪಂದಿಸುವಾಗ ಆ ರೂಪ ಧಾರಣೆ ಮಾಡಿದ್ದದ್ದು ಎಷ್ಟು ಉಪಯುಕ್ತವಾಗಿತ್ತು ಎನ್ನುವುದನ್ನು ಸ್ವಲ್ಪ ಯೋಚಿಸಿದರೆ ತಿಳಿಯುತ್ತದೆ.

೧೯೮೯ ರಲ್ಲಿ ಪ್ರಪ್ರಥಮವಾಗಿ ಬೊಂಬಾಯಿನಲ್ಲಿ ಫ್ಯಾಶನ್ ಶೋ ಆಯೋಜಿಸಿದವರು, 'ದೇವಿಕ ಭೋಜ್ವಾನಿ,' ಯವರು. ೧೯೮೫ ರಲ್ಲೇ ಅವರು " ಖಾದಿ" ಎನ್ನುವ, " ಸ್ವದೇಶಿ Label," ನೊಡನೆಯೇ, ೫,೦೦೦ ಕೆಂದ್ರಗಳಿಂದ ಸುಮಾರು Dress Materials, ಗಳನ್ನು ಒದಗಿಸಿದ್ದರು. ಖಾದಿಗ್ರಾಮೋದ್ಯೋಗ ಭವನ ಮತ್ತು ಎಂಪೋರಿಯಮ್ ಗಳಿಂದ. ೧೯೯೦ ರಲ್ಲಿ ರಿತುಕುಮಾರ್, ಎಂಬ ದೆಹಲಿಯ Fashion Designer , "Crafts Emporium," ನಲ್ಲಿ, ಪ್ರಥಮವಾಗಿ ಸಂಗ್ರಹಗಳು, ಅವರ "Tree of Life show," Audio Visual Tabloid ", ವಸ್ತ್ರೌದ್ಯಮ ಕ್ಷೇತ್ರದಲ್ಲಿ ದೊಡ್ಡ ಹೆಸರು ಮಾಡಿತು. ಅವುಗಳಲ್ಲಿ ೮ ಐಟಮ್ ಗಳು, ಖಾದಿಗೆ ಸೇರಿದವು. ೧೯೯೭ ರಲ್ಲಿ ಅದೇ ಬಟ್ಟೆಉಡುಪು, ಸಂಗ್ರಹಗಳು London ನಲ್ಲಿ ಪುನಃ ಪ್ರದರ್ಶನಗೊಂಡವು.

’Gujarath Handicrafts Association ” ನ, Kamal Wadkar, ಎಂಬ Fashion Designer, ಮುಂಬೈನಲ್ಲಿ ಪ್ರದರ್ಶಿಸಿದ ಉಡುಪುಗಳು, ೧೨.೫ ಮಿ. ರೂಪಾಯಿಗಳಷ್ಟು. ಸುಮಾರು ೪,೫೦೦ ಗಾರ್ಮೆಂಟ್ಸ್, ೪೫೦ ರೂ-೭೫೦ ರೂಗಳು.

ಕರ್ನಾಟಕದ ಶಿವಮೊಗ್ಗೆಯ ಕೆ. ಶಂಕರಪ್ಪ, ಎನ್ನುವ ಹಿರಿಯ ದೇಶಭಕ್ತರು, [೧೯೧೫-೨೦೦೫] ಹತ್ತಿಬಟ್ಟೆಯಲ್ಲಿ ಗಾಂಧಿ ಟೋಪಿಗಳನ್ನು ಹೊಲಿದು, ತಮ್ಮ "ಸುದರ್ಶನ್ ಖಾದಿನಿಲಯ" ದಲ್ಲಿ, ಮಾರಾಟಮಾಡಿದರು. ೧೯೯೯ ರಲ್ಲಿ ತಮ್ಮ ಆತ್ಮಚರಿತ್ರೆಯನ್ನು ["ಆಂತರ್ಯ"] ದಾಖಲಿಸಿದ್ದಾರೆ. ಅಲ್ಲಿ ಕರ್ನಾಟದ ಮುಂದಾಳುಗಳು ಹೇಗೆ ಸ್ವತಂತ್ರ್ಯ ಚಳುವಳಿಯಲ್ಲಿ ಧುಮಿಕಿದ್ದರು ಎನ್ನುವ ವಿವರಗಳು ಚೆನ್ನಾಗಿ ತಿಳಿಯುತ್ತವೆ. ಖಾದೀ ಗ್ರಾಮೋದ್ಯೋಗ ಭಂಡಾರಗಳಲ್ಲಿ, ೩ ಅಕ್ಟೋಬರ್ ನಿಂದ ೨೯ ಜನವರಿವರೆಗೆ ರಿಯಾಯಿತಿ ಸೇಲ್ ಇರುತ್ತದೆ. ಪ್ರತಿವರ್ಷ ಉತ್ಪತ್ತಿಯಾಗುವ ಬಟ್ಟೆಯ ಪ್ರಮಾಣ, ೧೧೧.೪೯ ಮಿಲಿಯನ್ ಸ್ಕ್ವೇರ್ ಮೀಟರ್ಗಳು. ಒಟ್ಟಿನಲ್ಲಿ ಹೊರಗೆ ಚಿಕ್ಕದೆಂದು ತೋರುವ, ಈ ಬೃಹತ್ ಸಣ್ಣಕೈಗಾರಿಕಾ ಕ್ಷೇತ್ರ, ೧೪.೯೭ ಲಕ್ಷ ಕಾರ್ಮಿಕರಿಗೆ ಉದ್ಯೋಗಾವಕಾಶವನ್ನು ನೀಡಿದೆ.

ಸ್ವಾತಂತ್ರ್ಯ, ಖಾದಿ, ಸ್ವಸಹಾಯ, ಇವೆಲ್ಲಾ ಒಂದಕ್ಕೊಂದು ಪೂರಕ. ನಮ್ಮದೇಶಕ್ಕೆ ಸ್ವಾತಂತ್ರ್ಯ ಕೊಡಿಸಲಿಕ್ಕಾಗಿಯೇ ಜನ್ಮವೆತ್ತಿಬಂದ "ಯುಗಪುರುಷ ", ಬಾಪುರವರಿಗೆ ನಮನಗಳು.

.

ಸ್ವಾತಂತ್ರ್ಯ ಆಂದೋಳನದಲ್ಲಿ ತಮ್ಮ ಪ್ರಾಣಗಳನ್ನು ಬಲಿದಾನಮಾಡಿದ ಭಾರತೀಯರು ಸಾವಿರಾರು. ಇನ್ನೂ ಹಲವು ಸಾವಿರ ಜನ ತಮ್ಮ ತನು ಮನಧನಗಳನ್ನು ಒತ್ತೆ ಇತ್ತು ದೇಶದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಪಾಲುಗೊಂಡಿದ್ದರು. ಆದರೆ ಆ ಎಲ್ಲಾ ವೀರನಾಗರಿಕರನ್ನೆಲ್ಲಾ ಸಂಘಟಿಸಿ ಸರಿಯಾಗಿ ಮಾರ್ಗದರ್ಶನ ಮಾಡಿ ತಮ್ಮ ಅಮೂಲ್ಯ ಜೀವನವನ ಪ್ರತಿಕ್ಷಣಗಳನ್ನೂ ರಾಷ್ಟ್ರಕ್ಕಾಗಿ ಬಲಿದಾನಮಾಡಿದ ಗಾಂಧಿಯವರು ಪ್ರತಿಯೊಬ್ಬಭಾರತೀಯನ ಹೃದಯದಲ್ಲೂ ಅಮರರಾಗಿ ಉಳಿದಿದ್ದಾರೆ.

ಆಗಿನ ವಿಶ್ವದಲ್ಲಿ ಅತ್ಯಂತ ಬಲಿಷ್ಠದೇಶವಾಗಿದ್ದ, ಬ್ರಿಟಿಷ್ ಸಾಮ್ರಾಜ್ಯದ ಧುರೀಣರು ಅವರಾಗಿಯೇ ಬಿಟ್ಟುಹೋಗುವ ಪರಿಸ್ತಿತಿಯನ್ನು ನಿರ್ಮಾಣಮಾಡಿದವರು, ನಮ್ಮ ಬಾಪೂರವರು. ಯುದ್ಧಮಾಡಿಗೆಲ್ಲುವುದು ಈ ಯುಗದಲ್ಲಿ ಸಾಧ್ಯವಾಗುತ್ತಿರಲಿಲ್ಲ. ಗೆಲ್ಲುವ ೧೦೦ ವರ್ಷಗಳಲ್ಲಿ ನಮ್ಮದೇಶ ಆಫ್ರಿಕಾದೇಶದಂತೆ ಹರಿದು ಹಂಚಿಹೋಗಿ ಸುಮಾರು ೧೦೦ ರಾಷ್ಟ್ರಗಳಾಗಿ ಪರಿವರ್ತನೆಗೊಳ್ಳುತ್ತಿತ್ತು. ಅತ್ಯಂತ ಕಡಿಮೆ ರಕ್ತಪಾತದಲ್ಲಿ, ಒಂದು ಬಹುದೊಡ್ಡ ಸಾಮ್ರಾಜ್ಯವನ್ನು ತೊಲಗಿಸಿದ ಮಾರ್ಗ, ಪ್ರಪಂಚದ ಚರಿತ್ರೆಯಲ್ಲಿ "ಸುವರ್ಣಾಕ್ಷರಗಳಲ್ಲಿ," ಬರದಿಡುವಂತಹದು.

ಅಂತಹ ಅಖಂಡ, ಸಮೃದ್ಧ ಭಾರತವನ್ನು ನಮಗೆ ಗೆದ್ದುಕೊಟ್ಟ ಆ ಮಹಾತ್ಮನಿಗೆ ನಮ್ಮ ಹೃದಯ ಪೂರ್ವಕ ನಮನಗಳು. ಸಂಯುಕ್ತ ರಾಷ್ತ್ರಸಂಸ್ಥೆ, ೨೦೦೭ ಅಹಿಂಸಾ- ವರ್ಷವನ್ನಾಗಿ ಆಚರಿಸುತ್ತಿರುವುದು, ಆ ಮಹಾತ್ಮನಿಗೆ ಸಂದ ಗೌರವ. ಇದು ಭಾರತೀಯರಿಗೆಲ್ಲಾ ಹೆಮ್ಮೆಯ ವಿಷಯ.

ಖಾದಿಯ ಬಗ್ಗೆ ಸ್ವಲ್ಪವೂ ತಿಳುವಳಿಕೆ ಇಲ್ಲದ ಗಾಂಧಿಯವರು, ಸ್ವಾತಂತ್ರ್ಯಸಾಧನೆಗೆ ಹಲವು ಕಾರ್ಯಕ್ರಮಗಳನ್ನು ಹಾಕಿಕೊಂಡು ರಾಷ್ಟ್ರದ ಜನಶಕ್ತಿಯನ್ನು ಕ್ರೋಢೀಕರಿಸಿ, ಅಹಿಂಸಾಮಾರ್ಗದಲ್ಲೇ ನಡೆದು, ತಾವು ದಕ್ಷಿಣ ಆಫ್ರಿಕಾದಿಂದ ವಾಪಸ್ ಬಂದ ಕೇವಲ ೩೨ ವರ್ಷಗಳಲ್ಲೇ, ತಮ್ಮ ಅಮೋಘ ಮುಂದಾಳತ್ವದಲ್ಲಿ ನಮಗೆಲ್ಲಾ ಸ್ವತಂತ್ರ್ಯವನ್ನು ತಂದು ಕೊಟ್ಟರು. ಶತಮಾನಗಳ ದಾಸ್ಯದಿಂದ ಮುಕ್ತರಾದ ವಿಷಯ ಸಾಮಾನ್ಯವಾದದ್ದಲ್ಲ ! ಇದೊಂದು ಆಕಸ್ಮಿಕ, ಹಾಗೂ ಚಾರಿತ್ರ್ಯಿಕ ಘಟನೆ. ಸುವರ್ಣಾಕ್ಷರಗಳಲ್ಲಿ ದಾಖಲಿಸಲು ಪಾತ್ರವಾದದ್ದು !

ಮಹಾತ್ಮ ಗಾಂಧಿಯವರ, "An Atobiography," or "The story of My Experiments with Truth " ನಿಂದ "ಖಾದಿ," ಎನ್ನುವ ಪರಿಚ್ಛೇದದಿಂದ ಮಾಡಿದ ಅನುವಾದದ ಕೆಲವು ಭಾಗಗಳನ್ನು ಆಯ್ದು ಕೊಟ್ಟಿದ್ದೇನೆ.

" ನನಗೆ, ೧೯೦೮ ರ ಹೊತ್ತಿಗೂ ಸರಿಯಾಗಿ ಕೈಮಗ್ಗ, ಅಥವ ಚರಕ, ನೋಡಿದ ನೆನಪಿಲ್ಲ. ನನ್ನ ಪತ್ರಿಕೆ, "ಹಿಂದ್ ಸ್ವರಾಜ್ಯ," ದಲ್ಲಿ, ಖಾದಿಯ ಬಗ್ಗೆಯೇನೋ ಬರೆದಿದ್ದೆ. ಸ್ವಾವಲಂಬನೆಯ ಪ್ರಾಮುಖ್ಯತೆ, ನನಗಂತೂ ಚೆನ್ನಾಗಿ ಮನವರಿಕೆಯಾಗಿತ್ತು. ನಮ್ಮ ಗ್ರಾಮಗಳ ಬಡಜನರಿಗೆ ಉದ್ಯೋಗಾವಕಾಶದ ಅಗತ್ಯವಿತ್ತು. ಬೇಸಾಯವನ್ನು ವರ್ಷವಿಡೀ ಮಾಡಲು ಬಹಳ ಅಡಚಣೆಗಳಿದ್ದವು. ಅವರ ಬಡತನವನ್ನು ತೊಲಗಿಸಲು ಬೇಸಾಯ ಒಂದರಲ್ಲೇ ಸಾಧ್ಯವಾಗುತ್ತಿರಲಿಲ್ಲ. ೧೯೧೫ ರಲ್ಲಿ ನಾನು ದ. ಆಫ್ರಿಕದಿಂದ ವಾಪಸ್ ಬಂದಾಗಲೂ, ಚರಕದ ದರ್ಶನವಾಗಿರಲಿಲ್ಲ. ಆಮೇಲೆ, ನಾವು ಸಬರ್ಮತಿಆಶ್ರಮ ಸ್ಥಾಪಿಸಿದಾಗ ಮಾಡಿದ ಮೊದಲಕೆಲಸವೆಂದರೆ, ಮಗ್ಗಗಳ ಏರ್ಪಾಡು. ಆದರೆ ನಾವೆಲ್ಲಾ ನಮ್ಮ ನಮ್ಮ ವೃತ್ತಿಗಳಲ್ಲಿ ವ್ಯಸ್ತರಾಗಿದ್ದವರು. ನಮಗೆ ಬಟ್ಟೆನೇಯುವ ವಿಷಯ ನಿಜಕ್ಕೂ ತಿಳಿದಿರಲಿಲ್ಲ.

"ಮಗನ್ ಲಾಲ್ ಗಾಂಧಿಯವರು, ಪಾಲನ್ಪುರದಲ್ಲಿ ನೇಯುವ ಕಲೆಯನ್ನು ಕಲಿಯಲು ಏರ್ಪಾಡುಮಾಡಿದರು. ಮೊದ ಮೊದಲು ನಮ್ಮ ಉಪಯೋಗಕ್ಕೆ ಬೇಕಾಗುವ ಬಟ್ಟೆಗಳನ್ನು ನಾವೇ ಏಕೆ ಮಾಡಿಕೊಳ್ಳಬಾರದು, ಎನ್ನುವ ನನ್ನ ಯೋಚನೆ ಬಹಳ ಚೆನ್ನಾಗೇನೋ ಕಂಡಿತು. ಆದರೆ ಅದರ ಹಿಂದೆ ಇದ್ದ ಹತ್ತಾರು, ನೂರಾರು ಸಮಸ್ಯೆಗಳನ್ನು ನೋಡಿದಾಗ ಹೇಳಿದಷ್ಟು ಸುಲಭವಾಗಿರಲಿಲ್ಲ ಎನ್ನುವುದು ನಿಧಾನವಾಗಿ ಮನವರಿಕೆಯಾಗುತ್ತಾ ಹೋಯಿತು. ನೂಲುವುದು ಒಂದು ; ಬಟ್ಟೆ ನೇಯುವುದು ಮತ್ತೊಂದು. ಆದರೆ ತಕ್ಷಣ ಬಟ್ಟೆಯನ್ನು ತಯಾರಿಸಿ ನಮ್ಮ ದೇಶದ ಜನರಿಗೆ ಒದಗಿಸುವುದು ಸಾಧ್ಯವೇ ? ನಾವು ಮೊದಲು ಕೈಮಗ್ಗದ ನೇಕಾರರ ಮೊರೆಹೋಗಬೇಕಾಯಿತು. ಇದಕ್ಕೆ ಬೇಕಾದ ದಾರ, ಮಿಲ್ ಗಳಿಂದ ತಾನೇ ಬರುವುದು. ಅದು ಬಹಳ ಕಷ್ಟಸಾಧ್ಯದ ಮಾತು. ಮಿಲ್ ಮಾಲೀಕರು ದಾರ ಒದಗಿಸಲು ತಯಾರಾಗಿರಲಿಲ್ಲ. ನಾವು ಭಾರತದ ಸ್ಪಿನ್ನಿಂಗ್ ಮಿಲ್ ಗಳಿಂದ ದಾರ [ಪಡೆದು ಬಟ್ಟೆಮಾಡಿಕೊಡುವ ಏಜೆಂಟ್ ಗಳಾಗಿ ಕೆಲಸಮಾಡುವುದಾಗಿ ಯೋಚಿಸಿದೆವು. ನಮಗೆ ದಾರ ನೂಲುವ ಕಲೆ ಇನ್ನೂ ಸರಿಯಾಗಿ ತಿಳಿದಿರಲಿಲ್ಲ. ಅದನ್ನು ನಮಗೆ ಕಲಿಸಲು ಯಾರೂ ಸಿಕ್ಕಲೂ ಇಲ್ಲ. ಕಡೆಗೆ ಕಾಳಿದಾಸ್ ಜವೇರಿಯವರಿಗೆ ಒಬ್ಬ ಹೆಣ್ಣುಮಗಳ ಪರಿಚಯವಾಯಿತು. ನಮ್ಮ ಆಶ್ರಮದ ಒಬ್ಬರನ್ನು, ಆಕೆಯಮನೆಬಾಗಿಲಿಗೆ ದಾರ ನೂಲುವುದನ್ನು ಕಲಿಯಲು ಕಳಿಸಿಕೊಟ್ಟೆವು. ಆದರೆ ಆತ ಹಾಗೆಯೇ ವಾಪಸ್ ಬಂದರು. ನೂಲುವ ಕಲೆಯ ಗುಟ್ಟನ್ನು ತಿಳಿಸಲು ಅವರು ಸಿದ್ಧರಾಗಿರಲಿಲ್ಲ. ನನಗಂತೂ ಬೇಜಾರಾಗಿಹೋಯಿತು.

೧೯೧೭ ರಲ್ಲಿ, ಒಮ್ಮೆ ಗುಜರಾತಿನ "ಬ್ರೋಚ್ ಎಜ್ಯುಕೇಷನಲ್ ಕಾನ್ಫರೆನ್ಸ್," ನಲ್ಲಿ ಭಾಗವಹಿಸಲು ನಾನು ಹೋದಾಗ, ಗಂಗಾಬೆನ್ ಮುಜುಮ್ದಾರ್, ಎಂಬ ಒಬ್ಬ ವಿಶಿಷ್ಟ ಮಹಿಳೆಯ ಪರಿಚಯವಾಯಿತು. ವಿದ್ಯಾಭ್ಯಾಸ ಅಷ್ಟು ಹೆಚ್ಚಾಗಿಇರದಿದ್ದರೂ, ಆಕೆಯ ಸಾಮಾನ್ಯಜ್ಞಾನ, ಮತ್ತು ವ್ಯವಹಾರಜ್ಞಾನ ಅಪರಿಮಿತವಾಗಿತ್ತು. ವಿಧವೆಯಾದ ಆಕೆ, "ಗೋಧ್ರಾ ಕಾನ್ಫರೆನ್ಸ್" ಗೆ ಕುದುರೆಯಮೇಲೆ ಕುಳಿತು ಬಂದಿದ್ದರು. ಅಲ್ಲಿ ನಾನು ಅವರನ್ನು ನನ್ನ ಸ್ವಾವಲಂಬನೆಯ ಪ್ರತೀಕವಾಗಿದ್ದ ಖಾದಿ ಬಟ್ಟೆಯನ್ನು ತಯಾರಿಸುವ ವಿಷಯವನ್ನು ತೋಡಿಕೊಂಡೆ. ಅವರಿಗೆ ಗೊತ್ತಿರುವ ಜನರ ಹತ್ತಿರ ಮಾತನಾಡಿ ಅದನ್ನು ಶೀಘ್ರವಾಗಿ ಬಗೆಹರಿಸುವುದಾಗಿ ಆಕೆ ಆಶ್ವಾಸನೆ ನೀಡಿದರು. ಕೊನೆಗೆ, ವಿಜಪುರ್, ಬರೋಡಾದಲ್ಲಿ, ಚರಕ ಸಿಕ್ಕಿತು. ಆ ರಾಜ್ಯದ ಹಲವು ಹಳ್ಳಿಗಳಲ್ಲಿ ಚರಕ ಚಲಾಯಿಸಿ ನೂಲುವವರ ಸಂಖ್ಯೆ ಸುಮಾರಾಗಿಯೇ ಇತ್ತು. ಗಂಗಾಬೆನ್, ಅವರನ್ನು ಭೆಟ್ಟಿಯಾದಾಗ ಅವರು ತಮಗೆ ಹತ್ತಿಯ ಪೂನಿಯನ್ನು ಸಮಯ ಸಮಯಕ್ಕೆ ಸರಿಯಾಗಿ ಒದಗಿಸಿ ; ಆಮೇಲೆ ತಯಾರಾದ ದಾರವನ್ನು ಕೊಳ್ಳಲು ಮುಂದೆಬರುವ ಯಾರೇ ಆಗಲಿ ನಮಗೆ ಒಪ್ಪಿಗೆ, ಎಂದರು. ಈ ವಿಷಯವನ್ನು ಗಂಗಾಬೆನ್ ನನಗೆ ತಿಳಿಸಿದಾಗ, ಹಾಲುಕುಡಿದಷ್ಟು ಆನಂದವಾಯಿತು ; ಆದರೂ ಅಷ್ಟೊಂದು ಪೂನಿಯನ್ನು ಕೊಡುವವರ್ಯಾರು ? ಈ ವಿಷಯವನ್ನು ಉಮರ್ ಸೋಬಾನಿಯವರ ಮುಂದೆ ಹೇಳಿದಾಗ, ಅವರು ತಕ್ಷಣಕ್ಕೆ ಯಾರಿಗೋಹೇಳಿ, ಅದರ ಎರ್ಪಾಡು ಮಾಡಿಯೇಬಿಟ್ಟರು.

ಹೀಗೆ, ನಮ್ಮ ಚರಕಗಳು "ಗುಂಯ್ ಗುಟ್ಟಲು," ಆರಂಭಿಸಿದವು. ದಾರ ಎಷ್ಟುಹೆಚ್ಚು ಉತ್ಪಾದನೆಯಾಯಿತೆಂದರೆ, ಅದನ್ನು ನೇಯಲು ಸಾಧ್ಯವಾಗದಷ್ಟು ! ಈಗ ನನ್ನ ತಲೆಯಲ್ಲಿ ಮತ್ತೊಂದು ವಿಚಾರ ಹುಟ್ಟಿಕೊಂಡಿತು. ಮಿಲ್ ನಿಂದ ದಾರವನ್ನೇನೋ ಕೊಂಡಿದ್ದಾಯಿತು. ಅವರಿಂದಲೇ ಬಟ್ಟೆಯನ್ನೂ ಕೊಳ್ಳಬಾರದೇಕೆ ? ಎನ್ನಿಸಿತು. ನಾನು ಗಂಗಾಬೆನ್ ರ ಜೊತೆ ಸಮಾಲೊಚಿಸಿ, ಕಾರ್ಡಿಂಗ್ ಮಾಡುವವರನ್ನು ಹುಡುಕಲು ಶುರುಮಾಡಿದೆ. ತಕ್ಷಣ ಗಂಗಾಬೆನ್ ಹೇಗೋ ಪ್ರಯತ್ನಿಸಿ, ಒಬ್ಬ ಕಾರ್ಡರ್ ನನ್ನು ಕರೆದುಕೊಂಡು ಬಂದರು. ಅವನು ತಿಂಗಳಿಗೆ ೩೫ ರೂಪಾಯಿಕೊಡುವುದಾದರೆ ಸರಿ, ಎಂದನು. ನನಗಂತೂ ಸಾಕುಸಾಕಾಗಿಹೋಗಿತ್ತು. ಸದ್ಯ, ದಾರನೂತರೆ ಸಾಕಪ್ಪ, ಅನ್ನಿಸಿತ್ತು. ಹಣ ಎಷ್ಟಾದರು ಆಗಲಿ, ಪರವಾಗಿಲ್ಲ, ಎನ್ನುವಷ್ಟು ಮನಸ್ಸು ರೋಸಿಹೊಗಿತ್ತು. ಈಗ ಚಿಕ್ಕ ವಯಸ್ಸಿನ ಯುವಕರುಗಳನ್ನು ನೂಲುವ ಕಾರ್ಯದಲ್ಲಿ ತಯಾರುಮಾಡಲಾಯಿತು. ಮೊದಲು ನಮ್ಮಬಳಿ ಲಿಂಟ್ ಹತ್ತಿಇರಲಿಲ್ಲ. ಅದಕ್ಕಾಗಿ ಯಶವಂತ್ ಪ್ರಸಾದ್ ದೇಸಾಯಿಯವರನ್ನು ಬೇಡಿಕೊಂಡಿದ್ದಾಯಿತು. ಗಂಗಾಬೆನ್ ರವರ ಸೌಹಾರ್ದತೆಯಿಂದ ಈ ಕಾರ್ಯ ಚೆನ್ನಾಗಿಯೇ ಮುಂದುವರೆಯಿತು. ವಿಜಯಯಪುರ್ ನಲ್ಲಿ ನೂತ ದಾರವನ್ನು ಬಳಸಿಕೊಂಡು ಬಟ್ಟೆಮಾಡುವ ಕೆಲಸ ಜೋರಾಗಿ ಆಕೆ ನಡೆಸಿಕೊಟ್ಟರು. ಎಲ್ಲೆಡೆ ’ವಿಜಯ್ ಪುರ್ ಖಾದಿ ’ ಯಹೆಸರು ಹರಡಿತು.

ಇದನ್ನೆಲ್ಲಾ ಗಮನಿಸುತ್ತಿದ್ದ ಮಗನ್ ಲಾಲ್ ಗಾಂಧಿ, ಸಬರ್ಮತಿ ಆಶ್ರಮದಲ್ಲಿಯೂ ಖಾದಿಯನ್ನು ಮಾಡಲು ಚರಕದ ಏರ್ಪಾಡು ಮಾಡಿದರು. ಚರಕದಲ್ಲಿ ಕೆಲವು ಸುಧಾರಣೆಗಳನ್ನು ಮಾಡಿದ್ದಲ್ಲದೆ ಮಗನ್ ಲಾಲರು, ಸ್ಪೇರ್ ಪಾರ್ಟ್ಸ್ ತಯಾರಿಸುವ ಆಶಯವನ್ನೂ ಹೊಂದಿದ್ದರು. ಆಶ್ರಮದ ಆವರಣದಲ್ಲಿ ತಯಾರಾದ ಖಾದಿವಸ್ತ್ರದ ಬೆಲೆ ಒಂದು ಗಜಕ್ಕೆ, ೧೭ ಆಣೆ ಇತ್ತು. ಖಾದಿಯನ್ನು ಮಾರುವುದು ಈಗಿನ ಸದ್ಯದ ಕೆಲಸ. ನಾನು ನನ್ನಗೆಳೆಯರಿಗೆಲ್ಲ ಖಾದಿಯನ್ನು ಕೊಂಡು ಉಟ್ಟುಕೊಳ್ಳಲು, ಶಿಫರಿಸ್ ಮಾಡಿದೆ. ನನ್ನ ಕರೆಗೆ ಓಗೊಟ್ಟು, ಅವರೆಲ್ಲಾ ಆತುರದಿಂದ ಅದನ್ನು ಕೂಡಲೇ ಖರೀದಿಸಿದರು.

ನಾನು ಬೊಂಬಾಯಿನಲ್ಲಿದ್ದಾಗ, ನನ್ನ ಆರೊಗ್ಯ ಹದಗೆಟ್ಟಿತ್ತು. ಅದರಮಧ್ಯದಲ್ಲಿಯೇ ಚರಕವೇನಾದರೂ ಸಿಗುತ್ತದೆಯೇ ಎಂದು ಕಂಡಕಂಡವರನ್ನು ವಿಚಾರಿಸುತ್ತಿದ್ದೆ. ಬಹಳ ಕಷ್ಟದಿಂದ ಇಬ್ಬರು ಸಿಕ್ಕರು. ಒಂದು ಸೇರು ದಾರ ನೂತುಕೊಡುವುದಕ್ಕೆ ಅವರು ೧ ರೂಪಾಯಿ ಕೇಳಿದರು. ೨೮ ತೊಲಕ್ಕೆ ; ಮುಕ್ಕಾಲು ಪೌಂಡ್ ದರ. ನಾನು ಆಗ ಖಾದಿಯಬೆಲೆಯ ಲೆಖ್ಖಾಚಾರ ತಿಳಿಯಲು ಮನಸ್ಸೂ ಮಾಡಿರಲಿಲ್ಲ. ಒಟ್ಟಿನಲ್ಲಿ, ನಾನು ಕೊಟ್ಟ ಹಣ ವಿಯಯಪುರಕ್ಕೆ ಹೊಲಿಸಿದರೆ ಅತಿಹೆಚ್ಚಾಗಿತ್ತು. ನನಗೆ ಮೋಸವಾಗಿದೆಯೆಂದು ಈಗ ತಿಳಿಯಿತು. ಇಷ್ಟೊಂದು ಬೆಲೆತೆತ್ತು ದಾರ ಕೊಳ್ಳುವುದು ಎಷ್ಟು ದುಬಾರಿಯೆಂದು ನೂಲುಮಾರುವವರಿಗೆ ಎಷ್ಟು ವಿವರಿಸಿದರೂ ಅವರು ತಲೆಗೆ ಹಾಕಿಕೊಳ್ಳಲಿಲ್ಲ. ಇಂತಹ ಇಕ್ಕಟ್ಟಿನ ಸಮಯದಲ್ಲಿ ಈ ನನ್ನ ಕೆಲಸವನ್ನು ತಡೆಹಿಡಿಯದೆ ವಿಧಿಯಿರಲ್ಲ. ಆದರೆ ಒಂದುವಿಧದಲ್ಲಿ ನಮಗೆ ಲಾಭವೂ ಆಗಿತ್ತು. ನಮ್ಮ ಆಶ್ರಮನಿವಾಸಿಗಳಲ್ಲೇನಕರು ನೂಲುವ ಕಲೆಯನ್ನು ಈ ಅವಧಿಯಲ್ಲಿ ಕಲಿತುಕೊಂಡಿದ್ದರು. ಶ್ರೀಮತಿ ಆವಂತಿಕ ಬಾಯಿ, ರಾಮಿಬಾಯಿ ಕಾಂದಾರ್, [ಶ್ರೀಮತಿ ಶಂಕರಲಾಲ್ ಬ್ಯಾಂಕರ್ ರವರ ವಿಧವ ತಾಯಿ] ಶ್ರಿಮತಿ ವಸುಮತಿ ಬೆನ್. ಇತ್ಯಾದಿ. ನನ್ನ ರೂಂ ಹತ್ತಿರ ಚರಕದ ಶಬ್ದ 'ಸುಂಯ್' ಗುಟ್ಟಲು ಶುರುವಾಯಿತು. ಈ ಶಬ್ದ ನನ್ನ ಆರೋಗ್ಯವನ್ನು ಸರಿಪಡಿಸಿದ ರಾಮಬಾಣವಾಗಿತ್ತು. ಸ್ವಲ್ಪ ಚೇತರಿಸಿಕೊಂಡಮೇಲೆ ನಾನೂ ಅವರೆಲ್ಲರ ಮಧ್ಯೆ ಕುಳಿತು ನೂಲಲು ಪ್ರಾರಂಭಿಸಿದೆ.

ಬೊಂಬಾಯಿನಲ್ಲಿ ರೇವಾಶಂಕರ್ ಜಿ ರವರ ಮನೆಯಮುಂದೆ ಪ್ರತಿದಿನ 'ಟುಯ್,' 'ಟುಯ್,' ಎಂದು ಬಿಲ್ಲನ್ನು ಶಬ್ದಮಾಡುತ್ತ ಬರುತ್ತಿದ್ದ ಕಾರ್ಡರ್ ನನ್ನು ನಾನು ವಿಚಾರಿಸಿದೆ. ಅವನು ಹಾಸಿಗೆಗೆಗಳಿಗೆ ಹತ್ತಿತುಂಬುವ ಕೆಲಸಮಾಡುತ್ತಿದ್ದ. ಅವನನ್ನು ವಿಚಾರಿಸಿದಾಗ ಹತ್ತಿ ಪೂನಿ ಮಾಡಿಕೊಡಲು ಸಹಕರಿಸಿದ. ಆದನ್ನು ಅವನು ತನ್ನ ವೈಷ್ಣವ ಗೆಳೆಯರಿಗೆ ಮಾಡಿಕೊಟ್ಟ. ಅವರು ಅದನ್ನುಪಯೋಗಿಸಿಕೊಂಡು ’ಜನಿವಾರ,’ ಮಾಡಿದರು. ಶಿವಾಜಿಯವರು ಹತ್ತಿದಾರ ತಯಾರಿಸುವ ಕಲೆಯನ್ನು ಹೇಳಿಕೊಡುವ ಒಂದು ಶಾಲೆಯನ್ನು ಪ್ರಾರಂಭಿಸಿದರು . ಅದಕ್ಕೆ ಆದ ಖರ್ಚನ್ನು ಗೆಳೆಯರೆಲ್ಲಾ ಹಂಚಿಕೊಂಡಿದ್ದರು. ಅವರಿಗೆಲ್ಲ ನನ್ನ ಮಾತಿನಲ್ಲಿ ಅತುಲವಿಶ್ವಾಸ , ರಾಷ್ಟ್ರಮಾತೆಯ ಮೇಲಿನ ಮಮತೆಯಿಂದಾಗಿ ಅವರೆಲ್ಲಾ ಖಾದಿ ತತ್ವವನ್ನು ಅನುಮೊದಿಸಿದರು.

ಈಗ ನನಗೆ ತಕ್ಷಣ ನನ್ನ ಉಡುಪನ್ನು ಖಾದಿಗೆ ಪರಿವರ್ತಿಸುವ ಆತುರ ಹೆಚ್ಚಾಯಿತು. ನಾನು ಉಡುತ್ತಿದ್ದ ಧೋತಿ ಮಿಲ್ ಬಟ್ಟೆ . ವಿಜಯ್ ಪುರ್ ನಲ್ಲಿ ಮಾಡಿದ ಖಾದಿಬಟ್ಟೆಯ ಅಗಲ ಕೆವಲ ೩೦ ಇಂಚ್ ಇತ್ತು. ಅದನ್ನು ಉಟ್ಟರೆ ನನ್ನ ಮೈಗೆ ಅದು ಸರಿಯಾಗಿ ಹೊಂದುತ್ತಿರಲಿಲ್ಲ. ಅಗಲ ತೀರ ಕಡಿಮೆ ಇತ್ತು. ನನಗೆ ಕೂಡಲೇ ೪೫ ಇಂದಿನ ಖಾದಿ ವಸ್ತ್ರವನ್ನು ತಯಾರಿಸಿ ಕೊಡಿಸಬೇಕೆಂದು ಗಂಗಾಬೆನ್ ರವರಿಗೆ ಮನವಿಮಾಡಿದೆ. ಆಕೆ ಒಂದು ತಿಂಗಳೊಳಗೇ ಒಂದು, ಜೊತೆ ೪೫ ಇಂಚಿನ ಧೋತಿಯನ್ನು ತಂದು ಕೊಟ್ಟರು. ಈ ಕಾರ್ಯದಿಂದ ನನಗಾದ ಆನಂದದ ಎಲ್ಲೆಯಿರಲಿಲ್ಲ. ಶ್ರಿಮತಿ ಲಕ್ಷ್ಮೀದಾಸ್, ಶ್ರೀ ರಾಮ್ಜಿ, ಮತ್ತು ಅವನ ಹೆಂಡತಿ, ಗ್ಂಗಾಬೆನ್ ರನ್ನು ಲಾತಿಯಿಂದ ಆಶ್ರಮಕ್ಕೆ ಕರೆತಂದರು. ಸತಿ-ಪತಿಯರಿಬ್ಬರು ಸೇರಿಮಾಡಿದ ಸೇವೆಯನ್ನು ಮರೆಯುವಂತಿಲ್ಲ. ಅವರು ತಮ್ಮ ಗುಜರಾಥಿ ಗೆಳೆಯರಿಗೆಲ್ಲಾ ಖಾದಿಯ ಮಹತ್ವ ಮತ್ತು ಸ್ವಾತಂತ್ರ್ಯಗಳಿಸಲು ನಾವು ಸ್ವಸಿದ್ಧರಾಗಬೇಕಾದ ಆವಶ್ಯಕತೆಗಳಬಗ್ಗೆ ತಿಳಿಹೇಳಿದರು. ಮತ್ತು ಅದರ ಪ್ರಚಾರವನ್ನು ಎಲ್ಲೆಡೆ ಮಾಡಿದರು. ಗಂಗಾಬೆನ್ ಮಾತ್ರ, ತಮ್ಮ ಕಣ್ಣನ್ನು ಈಕಡೆ, ಆಕಡೆ, ಅಲುಗಿಸದೆ ಚರಕವನ್ನು ಚಲಾಯಿಸುವ ಕಾರ್ಯದಲ್ಲಿ ಮಗ್ನರಾಗಿದ್ದ ದೃಷ್ಯನ್ನು ನೋಡಿ ನಮ್ಮ ಕಣ್ಣುಗಳು ಧನ್ಯವಾದವು ! ಖಾದಿಬಟ್ಟೆಯ ತಯಾರಿಕೆಯ ಸ್ವಾವಲಂಬನೆಯಿಂದಲೇ ಎನ್ನುವ ಮಾತು, ಅವರ ತಲೆ ಮತ್ತು ಮೈಯಿನ ರೋಮರೋಮಗಳಲ್ಲಿ ಆವೃತವಾಗಿರುವಂತೆ ಗೋಚರಿಸಿತು ! ಅಷ್ಟು ವೃತ್ತಿಪರ, ಮತ್ತು ವ್ಯಕ್ತಿಗಳಿಂದಲೇ ಇಂಥ ಮಹತ್ಕಾರ್ಯಗಳು ಸಾಧ್ಯ.

ಇದಾದಮೇಲೆ, ಮಿಲ್ ಮಲೀಕರುಗಳು ತಮ್ಮ ವ್ಯಕ್ತಪಡಿಸಲು ಪ್ರಾರಂಭಿಸಿದರು. ನನ್ನ ಗೆಳೆಯ ಉಮರ್ ಸೊಬಾನಿ ನನಗೆ ಅಲ್ಲಿನ ವಹಿವಾಟುಗಳಬಗ್ಗೆ ಆಗಾಗ ತಿಳಿಸುತ್ತಿದ್ದರಲ್ಲದೆ, ಅವರನ್ನು ಒಮ್ಮೆ ಭೇಟಿಮಾಡಲು ಆಹ್ವಾನಿಸಿದರು. ಅವರು ಮೊದಲು ನಾನು ಕೇಳಿದ ಪ್ರಶ್ನೆಗಳು ನಿಜಕ್ಕೂ ದಾಖಲಿಸಲು ಯೋಗ್ಯವಾಗಿದ್ದವು. "ಎಷ್ಟೇ ಹೇಳಿದರೂ ಮಿಲ್ ಮಲೀಕರಾದ ನಾವು, ಖಾದಿಯನ್ನು ವಿರೋಧಿಸುತ್ತೇವೆ. ನನ್ನೊಬ್ಬನ ವಿಷಯ ಬಿಡಿ. ನಮ್ಮ ಬಟ್ಟೆಯ ಬೆಲೆಗಳನ್ನು ಮಾರುಕಟ್ಟೆಯ ಅಗತ್ಯಗಳಿಗನುಗುಣವಾಗಿ ಏರಿಸಿ ಲಾಭಪಡೆಯುವ ಸ್ವಭಾವ ನಮ್ಮದು. ನಿಮ್ಮ ಭಾವನೆಗಳು ನಮಗೆ ತಿಳಿಯುತ್ತವೆ. ನಾವೇನೋ ಲಾಭಕ್ಕಾಗಿಯೇ ಎಲ್ಲ ಮಾಡುವವರು. ಏಕೆಂದರೆ ನಮ್ಮ ಶೇರ್ ಹೋಲ್ಡರ್ ಗಳನ್ನು ಸಮಾಧಾನಪಡಿಸುವುದೇ ನಮ್ಮ ಧ್ಯೇಯ. ಸ್ವದೇಶಿ, ಎನ್ನುವ ಖಾದಿ ಬಟ್ಟೆಗಳ ಉತ್ಪಾದನಾ ಸಾಮರ್ಥ್ಯದ ಬಗ್ಗೆ ಎಷ್ಟು ಹೇಳಿದರು ಕಡಿಮೆಯೇ. ಇಷ್ಟು ಕಡಿಮೆ ಸಂಖ್ಯೆಯಲ್ಲಿ ತಯಾರಿಸುವಾಗ ಬಟ್ಟೆಗಳ ಕ್ರಯ ತಾನಾಗಿಯೇ ಹೆಚ್ಚುವುದಿಲ್ಲವೇ ? ಆದ್ದರಿಂದ ನೀವು ಹೀಗೆ ಮಾಡಿ. ಹೆಚ್ಚು ಹೆಚ್ಚು ದೇಸಿ ಕಾರ್ಖಾನೆಗಳನ್ನು ಮಾಡಿ ಅದರಿಂದ ತಯಾರಾದ ಬಟ್ಟೆಗಳನ್ನು ನಾವು ಸ್ವದೇಶಿ ಎಂದು ಘೋಷಿಸಬಹುದಲ್ಲಾ, ಎನ್ನುವಮಾತು ನಿಮಗೆ ಹೇಗೇ ತೋರುವುದೊ ನಮಗೆ ತಿಳಿಯದು," ಎಂದರು.

" ಇಲ್ಲಿ ಒಂದು ಉದಾಹರಣೆಗೆ, ಕೊಡುವ. ನಿಮಗೆ ಒಂದು ವಸ್ತ್ರದ ನಮೂನೆಯನ್ನು ತೋರಿಸುತ್ತೇನೆ. ತ್ಯಾಜ್ಯ ವಸ್ತುಗಳಿಂದ ಇಂತಹ ಫ್ಯಾಶನಬಲ್ ಬಟ್ಟೆ ಮಾಡಿದ್ದೇವೆ, ನೋಡಿ. ಜನರಿಗೂ ಇದು ಹಿಡಿಸಿದೆ. ಇದನ್ನು ದೇಶದಾದ್ಯಂತ, ಅಂದರೆ, ಕನ್ಯಾಕುಮಾರಿಯಿಂದ ಹಿಮಾಲಯದವರೆಗೂ ಕಳಿಸಿಕೊಡುತ್ತೇವೆ. ಇದು ಸೋವಿಯಾದ್ದರಿಂದ ಎಲ್ಲರಿಗೂ ಕೊಳ್ಳಲು ಸುಲಭ. ಕೊಳ್ಳುತ್ತಾರೆ ಸಹಿತ ! ಅದರಬದಲು,ಖಾದಿ ಎನ್ನುವ ಹೆಸರಿನಲ್ಲಿ ಬಟ್ಟೆಗಳ ಬೆಲೆ ದುಬಾರಿಯಾದರೆ ಯಾರೂ ಕೊಳ್ಳುವುದಿಲ್ಲ. ನೋಡಿ, ಬೇಕಾದರೆ. " ನಿಮಗೆ ಬೇಕಾಗಿರುವುದು, ಸ್ವದೇಶಿ ಬಟ್ಟೆ ತಾನೇ. ಹಾಗಾದರೆ, ಹೊಸ ಹತ್ತಿಕಾರ್ಖಾನೆಗಳನ್ನು ತೆರೆಯಿರಿ ; ಹೆಚ್ಚಾಗಿ ಬಟ್ಟೆಉತ್ಪದಿಸಿ, ಅವನ್ನು ಖಾದಿಯೆಂದು ಮಾರಾಟಮಾಡಬಹುದಲ್ಲ ". ಈ ಮಾತಿನ ಸರಣಿ ಗಾಂಧಿಯವರಿಗೆ ಸಮ್ಮತವಾಗಲಿಲ್ಲ.

ಗಾಂಧಿಯವರ ಮನಸ್ಸಿನಲ್ಲಿದ್ದ ವಿಷಯ ವೆಂದರೆ,ನಮ್ಮ ಮಹಿಳೆಯರು, ನೂತು, ನೇಯ್ದ ಬಟ್ಟೆಗಳು ಹೆಚ್ಚು ಹೆಚ್ಚು ಮಾರಾಟವಾಗಬೇಕು. ಹಳ್ಳಿಯ ಈ ರೈತಸಮುದಾಯಕ್ಕೆ, ಬೇಸಾಯಮಾಡಲು ಸಾಧ್ಯವಾಗದ ಸಮಯದಲ್ಲಿ ಸ್ವಲ್ಪವಾದರೂ ಆರ್ಥಿಕಸಹಾಯವಾಗಬೇಕು ಎನ್ನುವ ವಿಚಾರ.